ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕು ಗಣಂಗೂರು ಗ್ರಾಮದ ತಾಪಂ ಮಾಜಿ ಸದಸ್ಯ ದಿ.ಕೃಷ್ಣ ಕುಮಾರ್ ಅವರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದರು ಎಂದು ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಹೇಳಿದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ತಾಪಂ ಮಾಜಿ ಸದಸ್ಯ ಕೃಷ್ಣ ಕುಮಾರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ತಾಪಂ ಸದಸ್ಯರಾಗಿ, ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ, ರಾಜ್ಯಮಟ್ಟದ ಪ್ರಶಸ್ತಿಗಳು ಸಹ ಲಭಿಸಿದ್ದವು ಎಂದರು.
ಕೃಷ್ಣ ಕುಮಾರ್ ಈ ಭಾಗದಲ್ಲಿ ಜನರನ್ನು ಅಷ್ಟೇ ಪ್ರೀತಿ ವಾತ್ಸಲ್ಯದಿಂದ ಬೆರೆತು ಅವರ ಕಷ್ಟ ಸುಖಗಳಿಗೆ ಭಾಗಿಯಾಗುತ್ತಿದ್ದರು. ಇದರಿಂದಲೇ ಇಂದಿನ ಕಾರ್ಯಕ್ರಮಕ್ಕೆ ಅವರ ಸ್ನೇಹಿತರು, ಹಿತೈಷಿಗಳು ಸೇರಿದಂತೆ ಇಷ್ಟೊಂದು ಮಂದಿ ಆಗಮಿಸಿದ್ದಾರೆ. ಮನುಷ್ಯನಾಗಿ ಹುಟ್ಟಿದ ಮೇಲೆ ಸಾಯಲೇಬೇಕು, ಆ ವ್ಯಕ್ತಿ ಸಾವಿಗೂ ಮುನ್ನ ಮಾಡಿದ ಕೆಲಸಗಳು ನೆನಪಿಸುತ್ತವೆ ಎಂದರು.ನಂತರ ಜಿಪಂ ಮಾಜಿ ಸದಸ್ಯ ಎಸ್.ಎಲ್ ಲಿಂಗರಾಜು, ಬಿಜೆಪಿ ಮುಖಂಡ ಇಂಡವಾಳು ಎಸ್.ಸಚ್ಚಿದಾನಂದ ಇತರರು ಕಾರ್ಯಕ್ರಮ ಕುರಿತು ಮಾತನಾಡಿದರು. ತಾಪಂ ಮಾಜಿ ಸದಸ್ಯ ಸ್ವಾಮೀಗೌಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಂದೇಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್, ಟಿ.ಎಂ.ಹೊಸೂರು ಮಹೇಶ್, ವಿಜಯ ಕುಮಾರ್, ಉದಯಕುಮಾರ್, ವಡಿಯಾಂಡಳ್ಳಿ ನಾಗರಾಜು, ಭಾಸ್ಕರ್, ಪುರಸಭೆ ಮಾಜಿ ಸದಸ್ಯ ಜಯರಾಂ, ನಗುವನಹಳ್ಳಿ ಶಿವಸ್ವಾಮಿ, ರವಿಕುಮಾರ್, ತಮ್ಮಣ್ಣ, ಕರವೇ ಶಂಕರ್, ನೆಲಮನೆ ಗುರುಪ್ರಸಾದ್, ಕಾಳೇನಹಳ್ಳಿ ಮಹೇಶ್, ಸಿ.ಸ್ವಾಮೀಗೌಡ, ಮಹದೇವಪುರ ಸುರೇಶ್, ಡಿ.ಕೆ ನಾಗರಾಜು, ಡಿ.ಎಂ.ರವಿ, ಚಿಕ್ಕಪಾಳ್ಯ ಪುರುಷೋತ್ತಮ್, ಚನ್ನಪ್ಪ, ಯೋಗೀಶ್, ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಕೃಷ್ಣ ಕುಮಾರ್ ಕುಟುಂಬಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು.
ಮಾ.೨೫ರಂದು ಜಿ.ಎಸ್.ಬೊಮ್ಮೇಗೌಡ ಪ್ರಶಸ್ತಿ ಪ್ರದಾನಮಂಡ್ಯ: ಕರ್ನಾಟಕ ಸಂಘದ ವತಿಯಿಂದ ಜಿ.ಎಸ್.ಬೊಮ್ಮೇಗೌಡ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಮಾ.೨೫ರಂದು ಸಂಜೆ ೪.೩೦ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ನಡೆಯಲಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರೇಗೌಡ ತಿಳಿಸಿದರು. ಅಧ್ಯಕ್ಷತೆಯನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಹಿಸುವರು. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಿ.ಮಾದೇಗೌಡ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿನಂದನಾ ನುಡಿಗಳನ್ನಾಡುವರು. ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಉಪಸ್ಥಿತರಿರುವರು ಎಂದರು. ಗೋಷ್ಠಿಯಲ್ಲಿ ಜಿ.ಬಿ.ಶಿವಕುಮಾರ್, ಡಾ.ರಾಮಲಿಂಗಯ್ಯ, ಶಿವಳ್ಳಿ ಸುರೇಶ್, ರಾಜಶೇಖರ್ ಇದ್ದರು.