ಸಾರಾಂಶ
ಕುಷ್ಟಗಿ:
ಡಾ. ವೀರೇಂದ್ರ ಹೆಗಡೆ ಹಾಗೂ ಹೇಮಾವತಿ ಅಮ್ಮನವರ ನೇತೃತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಸಾಮಾಜಿಕ ಕಾರ್ಯ ಮಾಡುತ್ತಿದೆಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಕುಷ್ಟಗಿ ತಾಲೂಕು ಯೋಜನಾಧಿಕಾರಿ ಶೇಖರ ನಾಯಕ ಹೇಳಿದರು.
ಪಟ್ಟಣದ ಶ್ರೀಬುತ್ತಿಬಸವೇಶ್ವರ ಸಭಾ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ವಿನಾಯಕ ನೇತ್ರ ಸೇವಾ ಸಂಸ್ಥೆ ಕೊಪ್ಪಳ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಈ ಗ್ರಾಮಾಭಿವೃದ್ಧಿ ಯೋಜನೆಯು ಕೆರೆ ಅಭಿವೃದ್ಧಿ, ಬಡಜನರಿಗೆ ವಾತ್ಸಲ್ಯ ಯೋಜನೆಯಡಿ ಉಚಿತವಾಗಿ ಮನೆ ನಿರ್ಮಾಣ, ಮಾಸಾಶನ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಹಾಯಧನ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಬಡಜನರಿಗೆ ಸಹಾಯ ಮಾಡುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಲ ನೀಡುವ ಸಂಸ್ಥೆಯಲ್ಲ, ವಿವಿಧ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಸದಸ್ಯರ ಉಳಿತಾಯ ಖಾತೆ ತೆರೆದು ಸಾಲ ಸೌಲಭ್ಯ ಒದಗಿಸಿ ಉದ್ಯಮಗಳ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿದ್ದಾರೆ ಎಂದರು.
ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಆರೋಗ್ಯ ಕಾರ್ಡ್ ಪಡೆಯುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಸಲಹೆ ನೀಡಿದರು.ವಿನಾಯಕ ನೇತ್ರ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ, ನ್ಯಾಯವಾದಿ ಚಂದ್ರಶೇಖರ ಉಪ್ಪಿನ ಮಾತನಾಡಿದರು. ಈ ವೇಳೆ ಯೋಜನೆಯ ನಿರ್ದೇಶಕ ಪ್ರಕಾಶರಾವ್, ಒಕ್ಕೂಟದ ಅಧ್ಯಕ್ಷರಾದ ಹಂಪಮ್ಮ ಕೋಳೂರು, ಶಿಲ್ಪಾ, ಸಮನ್ವಯಾಧಿಕಾರಿ ಶಿವಲೀಲಾ ಬೆಳ್ಳೇರಿಮಠ, ನೇತ್ರಾಧಿಕಾರಿ ಮನೋಹರ ಪತ್ತಾರ, ಪ್ರಭು ಜಹಗೀರದಾರ, ಕಾವೇರಿ, ಬಸಯ್ಯ ಹಿರೇಮಠ, ವಲಯದ ಮೇಲ್ವಿಚಾರಕಿ ಮಂಜುಳಾ, ಟಿಎನ್‌ಒ ರಾಘವೇಂದ್ರ, ಸೇವಾ ಪ್ರತಿನಿಧಿಗಳಾದ ಕಳಕಮ್ಮ, ಶಿವಶರಣಮ್ಮ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಜ್ಞಾನ ವಿಕಾಸ ಹಾಗೂ ಎಲ್ಲಾ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಶರಣಪ್ಪ ಲೈನದ ಸ್ವಾಗತಿಸಿದರು. ಶಿವಲೀಲಾ ಬೆಳ್ಳೇರಿಮಠ ವಂದಿಸಿದರು. ಶಿಬಿರದಲ್ಲಿ 112 ಜನರ ಕಣ್ಣುಗಳನ್ನು ತಪಾಸಣೆ ಮಾಡಿದರು. 20 ಜನರು ಕಣ್ಣಿನ ಪೊರೆ ಹೊಂದಿರುವ ಫಲಾನುಭವಿಗಳು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.