ಸಾರಾಂಶ
ಯಾದಗಿರಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಜಾಗತಿಕ ಸಮಾಜಕಾರ್ಯ ದಿನಾಚರಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಆಧುನಿಕ ಕಾಲಘಟ್ಟಗಳಲ್ಲಿ ವ್ಯಕ್ತಿ ಒಂದಿಲ್ಲೊಂದು ಸಮಸ್ಯೆಗೆ ಈಡಾಗುತ್ತಿದ್ದಾನೆ. ಅದರಿಂದ ಹೊರ ಬರಲು ಹಲವಾರು ಆಯಾಮಗಳ ಜೊತೆಗೆ ಸ್ಥಿತ್ಯಂತರಗೊಳ್ಳುತ್ತಿದ್ದಾನೆ. ಇಂತಹ ಭಿನ್ನವಾದ ಬದಲಾವಣೆ ಸಾಧಿಸಲು ಭವಿಷ್ಯತ್ತಿನ ದೃಷ್ಟಿಯಿಂದ ಸಮಾಜಕಾರ್ಯ ಶಿಕ್ಷಣ ಅತಿ ಅವಶ್ಯಕ ಎಂದು ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಅಧಿಕಾರಿ ಶರಣಗೌಡ ಪಾಟೀಲ್ ಹೇಳಿದರು.ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಜಾಗತಿಕ ಸಮಾಜಕಾರ್ಯ ದಿನಾಚರಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಮಾಜೀಕರಣ, ನಾಗರೀಕರಣ ಮತ್ತು ಉದಾರೀಕರಣದಿಂದಾಗಿ ಇಂದು ಸಾಕಷ್ಟು ಸಮಸ್ಯೆಗಳು ಬೆಳೆಯುತ್ತಿವೆ. ಅವುಗಳಿಗೆ ಅಷ್ಟೇ ಪರಿಣಾಮಕಾರಿಯಾಗಿ ಸಮಾಜಕಾರ್ಯ ವಿಭಾಗದ ಸಂಶೋಧನಾ ಮತ್ತು ಅಧ್ಯಯನ ಕೇಂದ್ರಗಳು ವೈಜ್ಞಾನಿಕ ಪರಿಹಾರಗಳನ್ನು ಹುಡುಕುತ್ತಿರುವುದು ಸಂತಷ ತಂದಿದೆ ಎಂದರು.ಡಾ. ದೇವಿಂದ್ರಪ್ಪ ಹಳಿಮನಿ ಮಾತನಾಡಿ, ಸಮಾಜಕಾರ್ಯ ಶಿಕ್ಷಣಕ್ಕೆ ಇರುವ ಮಹತ್ವವನ್ನು ತಿಳಿಸುತ್ತ ಸಮಾಜಕಾರ್ಯ ವಿಭಾಗದಲ್ಲಿ ಪ್ರವೇಶ ಪಡೆದ ತಾವೆಲ್ಲರೂ ಅದೃಷ್ಟವಂತರು. ಅದನ್ನು ಸದುಪಯೋಗ ಮಾಡಿಕೊಳ್ಳುವುದು ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ವಿಭಾಗದ ಮುಖ್ಯಸ್ಥ ಡಾ.ಉಮೇಶ್ ತೇಜಪ್ಪ, ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿದರು.ಅಧ್ಯಾಪಕರಾದ ಡಾ. ಅಶೋಕರೆಡ್ಡಿ ಪಾಟೀಲ್, ಡಾ. ಯಲ್ಲಪ್ಪ ಕಶೆಟ್ಟಿ, ಸಾಬರೆಡ್ಡಿ ಬಂಗಾರಿ, ಸಿದ್ಧರಾಜರೆಡ್ಡಿ, ಡಾ. ಸಿ.ಆರ್. ಕಂಬಾರ, ಶೆಟ್ಟಿಕೇರಾ ಸೇರಿದಂತೆ ಇತರರಿದ್ದರು.