ಸಾರಾಂಶ
ಸನ್ಮಾನ ಕಾರ್ಯಕ್ರಮ । ಸಹೃದಯ ನೌಕರರ ಟ್ರಸ್ಟ್ ಉದ್ಘಾಟನೆ, ಪ್ರತಿಭಾ ಪುರಸ್ಕಾರ । ಹಿರಿಯರಿಗೆ ಗೌರವ
ಕನ್ನಡಪ್ರಭ ವಾರ್ತೆ ಸೊರಬಸಮಾಜಮುಖಿ ಕೆಲಸಗಳಿಗೆ ಸಮಾಜ ಎಂದೂ ತಿರಸ್ಕರಿಸುವುದಿಲ್ಲ. ಪ್ರಶಂಸಿಸುತ್ತದೆ ಎಂದು ಪ್ರೋತ್ಸಾಹಿಸಿ ಕೈಜೋಡಿಸುತ್ತದೆ. ಆದ್ದರಿಂದ ಸಮಾಜವೇ ಪುರಸ್ಕರಿಸುವ ಸಾಮಾಜಿಕ ಕಾರ್ಯಗಳಿಗೆ ನಿರಂತರತೆ ಇರಬೇಕು ಎಂದು ಶಿರಾಳಕೊಪ್ಪ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಟಿ.ಬಿ. ಪ್ರಶಾಂತ್‌ಕುಮಾರ್ ನುಡಿದರು.
ತಾಲೂಕಿನ ಬಿಳವಾಣಿ ಗ್ರಾಮದಲ್ಲಿ ಗ್ರಾಮದ ಸಹೃದಯ ನೌಕರರ ಟ್ರಸ್ಟ್‌ನ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ ಮತ್ತು ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸರ್ಕಾರಿ ನೌಕರರು ಒಟ್ಟಾಗಿ ಸೇರಿ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದ್ದು, ಪ್ರತಿಯೊಂದು ಊರಿನಲ್ಲಿ ಈ ರೀತಿ ನೌಕರರು ಒಂದಾಗಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಕರೆನೀಡಿದರು.
ಶಿಕ್ಷಣಕ್ಕಿಂತ ದೊಡ್ಡ ಆಸ್ತಿ ಬೇರೆ ಇಲ್ಲ. ಶಿಕ್ಷಣದಿಂದ ಸಮಾಜ ಪರಿವರ್ತನೆ ಮಾಡಲು ಸಾಧ್ಯ. ಕಷ್ಟಪಟ್ಟು ಓದಿ ಮೇಲೆ ಬಂದ ನೌಕರರು ತಾವು ದುಡಿದ ಸಂಪಾದನೆಯಲ್ಲಿ ಒಂದಿಷ್ಟು ಹಣವನ್ನು ಸಮಾಜಮುಖಿ ಕೆಲಸಗಳಿಗೆ ವಿನಿಯೋಗಿಸುವ ಮೂಲಕ ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಟ್ರಸ್ಟ್‌ನ ಧ್ಯೇಯೋದ್ಧೇಶಗಳನ್ನು ಈಡೇರಿಸುವ ಕೆಲಸ ಮಾಡುತ್ತಿದ್ದಾರೆಂದು ತಿಳಿಸಿದರು.ಸಹೃದಯ ನೌಕರರ ಟ್ರಸ್ಟ್ ಅಧ್ಯಕ್ಷ ಕೆ.ಹೆಚ್.ಪುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದಿಂದ ಸದೃಢ ಸಮಾಜ ಕಟ್ಟಲು ಸಾಧ್ಯ. ಬಡತನದಲ್ಲಿ ಹುಟ್ಟಿ ಬೆಳೆದ ನನ್ನೂರ ಸಹೋದರರು ಉತ್ತಮ ಶಿಕ್ಷಣ ಪಡೆದು, ಉದ್ಯೋಗ ಅರಸಿ ಬೇರೆಡೆ ಹೋದರು ತಮ್ಮ ಹುಟ್ಟೂರಿನ ಋಣವನ್ನು ಮರೆಯದೆ ಬದುಕಿನ ಸಾರ್ಥಕತೆಗೆ ಟ್ರಸ್ಟ್ ಮೂಲಕ ಸಂಘಟಿತರಾಗಿದ್ದೇವೆ. ಗ್ರಾಮಕ್ಕೆ ಸಮಾಜಕ್ಕೆ ಒಳಿತು ಮಾಡುವ ಉದ್ದೇಶದಿಂದ ಅಳಿಲುಸೇವೆಯ ಸಣ್ಣ ಪ್ರಯತ್ನಕ್ಕೆ ಕೈ ಜೋಡಿಸಿದ್ದೇವೆ. ಸಂಘಟನೆ ಸುಲಭದ ಕೆಲಸವಲ್ಲ. ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಸಾಧ್ಯ. ಅಂತ ಪ್ರಯತ್ನವನ್ನು ನಮ್ಮೂರ ನೌಕರರು ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ೨೫ ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ, ೨೫ ಕ್ರೀಡಾ ಸಾಧಕರಿಗೆ ಅಭಿನಂದನಾ ಪ್ರಶಸ್ತಿ ಪತ್ರ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಪತ್ರ, ನುವೃತ್ತ ಸರ್ಕಾರಿ ನೌಕರರಿಗೆ ಸನ್ಮಾನಿಸಲಾಯಿತು.ಟ್ರಸ್ಟ್ ಗೌರವಾಧ್ಯಕ್ಷ ಬಸವರಾಜ್ ಎಸ್. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್ ವಿ.ಪಿ. ಮಾತನಾಡಿದರು. ಡಾ.ವಿರುಪಾಕ್ಷಪ್ಪ ವೈ.ಕೆ. ಪ್ರಾಸ್ತಾವಿಕ ನುಡಿ ಹಾಗೂ ಟ್ರಸ್ಟ್ ಸದಸ್ಯರನ್ನು ಪರಿಚಯಿಸಿದರು.
ಗ್ರಾಪಂ ಸದಸ್ಯೆ ಶ್ರುತಿ ಜಯಕುಮಾರ, ನಂದೀಶ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಕವಿತಾ ಟ್ರಸ್ಟ್‌ನ ಸದಸ್ಯರಾದ ವೀರೇಶಪ್ಪ ಎನ್., ಗಿಡ್ಡಪ್ಪ ಜೆ.ಎಚ್. ತಮ್ಮಣ್ಣಪ್ಪ ಕೆ.ಬಿ., ಹೂವಪ್ಪ ಕೆ.ವಿ., ಅರುಣ್‌ಕುಮಾರ್ ಎನ್.ಪಿ., ಜಗದೀಶ್ ಕೆ.ಎನ್., ಸೋಮಶೇಖರ ಎಸ್., ರೇಣುಕರಾಜ್ ಬಿ., ಮಹಮದ್ ರಫಿ, ಜಿತೇಂದ್ರ ಕುಮಾರ್, ಯಲ್ಲಮ್ಮ ಕೆ.ಬಿ. ವೇದಾವತಿ ವೈ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))