ರಾಜ್ಯ ಹಿರಿಯ ನಾಗರೀಕರ ವೇದಿಕೆ ಕಾರ್ಯಕಾರಿಣಿ ಸದಸ್ಯರ ತೀರ್ಮಾನ ಸಹಕಾರದೊಂದಿಗೆ ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೆ ಬೆಡ್‌ ಶೀಟ್ ಮತ್ತು ಬ್ರೆಡ್‌ ವಿತರಣೆ ಮಾಡಲಾಗುತ್ತಿದೆ.

ಕನ್ನಡಪ್ರಭವಾರ್ತೆ ಚಿಂತಾಮಣಿ

ನಮಗೆ ಬರುತ್ತಿರುವ ನಿವೃತ್ತಿ ವೇತನದಲ್ಲೇ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಈಗ ಸಾರ್ವಜನಿಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬಾಣಂತಿಯರಿಗೆ ಬೆಡ್ ಶೀಟ್ ಮತ್ತು ಬ್ರೇಡ್ ನೀಡುವುದರ ಮೂಲಕ ಸಣ್ಣ ಸಹಾಯ ಮಾಡಲಾಗುತ್ತಿದೆ ಎಂದು ಹಿರಿಯ ನಾಗರೀಕರ ವೇದಿಕೆ ಅಧ್ಯಕ್ಷ ಕಾಗತಿ ವೆಂಕಟರತ್ನಂ ಹೇಳಿದರು. ನಗರದ ಸಾರ್ವಜನಿಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರಾಜ್ಯ ಹಿರಿಯ ನಾಗರೀಕರ ವೇದಿಕೆ ವತಿಯಿಂದ ರೋಗಿಗಳಿಗೆ ಬೆಡ್ ಶೀಟ್ ಮತ್ತು ಬ್ರೆಡ್ ವಿತರಿಸಿ ಮಾತನಾಡಿ, ಹಿರಿಯರು ಕಿರಿಯರಿಗೆ ಮಾದರಿಯಾಗಬೇಕಿದೆ. ನಾವು ಯಾರಿಗೂ ಹೊರೆಯಾಗದೆ ನಾವು ನಮ್ಮ ಕೈಲಾದ ಸಮಾಜಮುಖಿ ಕಾರ್ಯ ಮಾಡುತ್ತಿದ್ದೇವೆ. ನಮ್ಮ ವೇದಿಕೆಯಲ್ಲಿ 90 ವರ್ಷ ಮೇಲ್ಪಟ್ಟವರು ಇದ್ದರೂ ನಾವು ಮಾಡಬೇಕೆಂದುಕೊಂಡಿರುವ ಸಮಾಜಮುಖಿ ಸೇವೆಗಳನ್ನು ನಿರಂತರವಾಗಿ ವೇದಿಕೆ ಸದಸ್ಯರ ಸಹಕಾರದೊಂದಿಗೆ ಮಾಡಿಕೊಂಡು ಬರುತ್ತಿದ್ದೇವೆಂದು ಹೇಳಿದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ವೆಂಕಟರಮಣ ಮಾತನಾಡಿ, ರಾಜ್ಯ ಹಿರಿಯ ನಾಗರೀಕರ ವೇದಿಕೆ ಕಾರ್ಯಕಾರಿಣಿ ಸದಸ್ಯರ ತೀರ್ಮಾನ ಸಹಕಾರದೊಂದಿಗೆ ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೆ ಬೆಡ್‌ ಶೀಟ್ ಮತ್ತು ಬ್ರೆಡ್‌ ವಿತರಣೆ ಮಾಡಲಾಗುತ್ತಿದೆ ಎಂದರು. ಇದಕ್ಕೆ ಸಹಕರಿಸಿದ ಡಾ.ಸಂತೋಷ್ ಮತ್ತು ದಾದಿಯರಿಗೆ ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ತಿಳಿಸಿದರು.

ವೇದಿಕೆ ಉಪಾಧ್ಯಕ್ಷ ರಾಮಕೃಷ್ಣಾ ರೆಡ್ಡಿ, ಖಜಾಂಚಿ ವಿ. ಹನುಮಂತಪ್ಪ, ನಿವೃತ್ತ ಡಿಡಿಪಿಐ ಎಂ.ಎ.ವೆಂಕಟಸ್ವಾಮಿ, ನಿವೃತ್ತ ಡಿಡಿಪಿಯು ವಿ. ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ಪಟೇಲ್ ಕೆ.ಎ.ಬೈರಾರೆಡ್ಡಿ, ಕೆಇಬಿ ಕೃಷ್ಣಪ್ಪ, ಕೆ.ಎಂ.ರಮಾಣಾ ರೆಡ್ಡಿ, ವೈ.ಎಂ.ರೆಡ್ಡಿ, ಆಂಜನೇಯರೆಡ್ಡಿ, ಶಿವರಾಮ್, ನರಸಿಂಹಮೂರ್ತಿ, ವೆಂಕಟರಾಮರೆಡ್ಡಿ, ಎಇಇ ನಾರಾಯಣಸ್ವಾಮಿ, ಡಾ ಸಂತೋಷ್ ಹಾಜರಿದ್ದರು.