ವಿದ್ಯಾರ್ಥಿಗಳು ತಮಗೆ ಸಿಕ್ಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಒಳ್ಳೆಯ ಸಾಧನೆ ಮಾಡಬೇಕೆಂದು ಮೇಯರ್‌ ಜ್ಯೋತಿ ಪಾಟೀಲ ಹೇಳಿದರು.

ಧಾರವಾಡ:

ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ಸಮಾಜಮುಖಿಯಾಗಿದ್ದು, ಅನ್ನದಾಸೋಹವು ಭಾರತೀಯ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಧಾರವಾಡ ಲಯನ್ಸ್ ಸಂಸ್ಥೆಯು ನಿಂಗಮ್ಮ ಹೂಗಾರ ಶಿಕ್ಷಣ ಮತ್ತು ಸಂಶೋಧನೆ ಟ್ರಸ್ಟ್ ಸಹಯೋಗದಲ್ಲಿ ಕಲ್ಯಾಣ ನಗರದಲ್ಲಿ ಏರ್ಪಡಿಸಿದ್ದ ಅನ್ನ ದಾಸೋಹದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮಗೆ ಸಿಕ್ಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಒಳ್ಳೆಯ ಸಾಧನೆ ಮಾಡಬೇಕೆಂದು ತಿಳಿಸಿದರು.ಪಿಎಸ್ಐ ಮಲ್ಲಿಕಾರ್ಜುನ ಹೊಸೂರ, ಜಿಲ್ಲಾ ಗವರ್ನರ್ ಜೈಅಮೋಲ್ ನಾಯ್ಕ, ಕ್ಯಾಬಿನೆಟ್ ಕಾರ್ಯದರ್ಶಿ ಡಾ. ಕೀರ್ತಿ ನಾಯ್ಕ ಮತ್ತು ಅರವಿಂದ ಹೆಬಸೂರ ನಿಂಗಮ್ಮ ಹೂಗಾರ ಟ್ರಸ್ಟ್‌ನ ಕಾರ್ಯವನ್ನು ಶ್ಲಾಘಿಸಿದರು. ಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಅಧ್ಯಕ್ಷತೆ ವಹಿಸಿದ್ದರು.

850ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನ್ನ ದಾಸೋಹ ನೀಡಲಾಯಿತು. ಸತೀಶ ಪಾಟೀಲ, ದೇವಾಂಶ ಪಾಟೀಲ, ಹರ್ಷ ದೇಸಾಯಿ, ಶೈಲಾ ಕರಗುದರಿ, ಉಷ್ಮಾ ದೇಸಾಯಿ, ವಸಂತ ಭಟ್, ಮುಕುಂದ ಹೆಬ್ಲೀಕರ, ನೀತಾ ಕೊಪ್ಪಿಕರ, ಶಕುಂತಲಾ ಕುಂದೂರ, ನಂದಿನಿ ಬಾಗಿ, ಡಾ. ಉಷಾ ಗದ್ದಗಿಮಠ, ಅಮೃತಾ ಜೋಶಿ, ಗಿರಿಧರ ದೇಸಾಯಿ, ಕವಿತಾ ಅಂಗಡಿ , ಶ್ರೀಕಾಂತ ದೇವಗಿರಿ ಇದ್ದರು..

ಕಾರ್ಯದರ್ಶಿ ಸುರೇಶ ಗುದಗನವರ ಸ್ವಾಗತಿಸಿದರು. ಡಾ. ರಾಜಶ್ರೀ ಗುದಗನವರ ನಿರೂಪಿಸಿದರು. ನಮ್ರತಾ ಪಾಟೀಲ ವಂದಿಸಿದರು.