ಧರ್ಮ, ದೇಶ ಜತೆಗಿದ್ದರೆ ಸಮಾಜ ಪರಿಪೂರ್ಣ: ಕೃಷ್ಣರಾಜ ಕುತ್ಪಾಡಿ

| Published : Apr 09 2025, 12:45 AM IST

ಧರ್ಮ, ದೇಶ ಜತೆಗಿದ್ದರೆ ಸಮಾಜ ಪರಿಪೂರ್ಣ: ಕೃಷ್ಣರಾಜ ಕುತ್ಪಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆ ಶ್ರೀ ಜನಾರ್ದನ ದೇವಸ್ಥಾನ ರಥಬೀದಿಯಲ್ಲಿ ಗುರುವಾರ ಭಕ್ತಿಸಿದ್ಧಾಂತೋತ್ಸವ-ರಾಮೋತ್ಸವ ಪ್ರಯುಕ್ತ ಆಚಾರ್ಯ ಮಧ್ವರ ಜನ್ಮಭೂಮಿ ಪಾಜಕಕ್ಷೇತ್ರದಿಂದ ಹೊರಟ ಭಕ್ತಿರಥಯಾತ್ರೆಗೆ ಉಜಿರೆಯ ನಾಗರಿಕರು ಭವ್ಯ ಸ್ವಾಗತ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಧರ್ಮ ಮತ್ತು ದೇಶ ಜತೆಗಿದ್ದರೆ ಮಾತ್ರ ಸಮಾಜ ಪರಿಪೂರ್ಣ. ಧರ್ಮ ಆತ್ಮವಿದ್ದಂತೆ, ದೇಶ ದೇಹವಿದ್ದಂತೆ. ಅವೆರಡರ ಸಮ್ಮಿಲನದಿಂದ ಸುಸ್ಥಿತ ಸಮಾಜ ನಿರ್ಮಾಣ ಸಾಧ್ಯ ಎಂದು ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಹೇಳಿದ್ದಾರೆ.

ಉಜಿರೆ ಶ್ರೀ ಜನಾರ್ದನ ದೇವಸ್ಥಾನ ರಥಬೀದಿಯಲ್ಲಿ ಗುರುವಾರ, ಉಡುಪಿ ಪೇಜಾವರ ಮಠ ,ವಿಶ್ವ ಹಿಂದೂ ಪರಿಷತ್ ಹಾಗು ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಭಕ್ತಿಸಿದ್ಧಾಂತೋತ್ಸವ-ರಾಮೋತ್ಸವ ಪ್ರಯುಕ್ತ ಆಚಾರ್ಯ ಮಧ್ವರ ಜನ್ಮಭೂಮಿ ಪಾಜಕಕ್ಷೇತ್ರದಿಂದ ಹೊರಟ ಭಕ್ತಿರಥಯಾತ್ರೆಗೆ ಉಜಿರೆಯ ನಾಗರಿಕರು ಭವ್ಯ ಸ್ವಾಗತ ನೀಡಿದ ಬಳಿಕ ರಥಬೀದಿಯಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.

ಅಯೋಧ್ಯೆಯಲ್ಲಿ ರಾಮಭಕ್ತರ ಭಕ್ತಿ-ತ್ಯಾಗದ ಫಲವಾಗಿ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿದೆ. ನಮ್ಮ ಮನೆ-ಮನಸ್ಸಿಗೆ ರಾಮತಾರಕ ಮಂತ್ರ ದ ಭಕ್ತಿ ಬರಬೇಕು, ಭಗವಂತನ ಅನುಗ್ರಹಕ್ಕೆ ಭಕ್ತಿಯೇ ಏಕೈಕ ಸಾಧನ. ಭಕ್ತಿಯಿಂದ ಅರ್ಪಿಸುವ ಸೇವೆ ಭಗವಂತನಿಗೆ ತಲುಪುತ್ತದೆ. ಎಲ್ಲರೂ ಒಂದಾಗಿ ಪ್ರಾರ್ಥಿಸಿದರೆ ಸಮಷ್ಟಿ ಹಿಂದೂ ಸಮಾಜಕ್ಕೆ ಬಲ ಬರುತ್ತದೆ. ದಶಕೋಟಿ ರಾಮತಾರಕ ಮಂತ್ರ ಜಪಯಜ್ಞ ಸಂಕಲ್ಪದ ಭಕ್ತಿರಥಯಾತ್ರೆ -ರಾಮೋತ್ಸವ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಬಲ್ಲುದು ಎಂದರು.

ಭಕ್ತಿ ರಥಯಾತ್ರೆಗೆ ಉಜಿರೆ ಮುಖ್ಯ ವೃತ್ತದಬಳಿ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾಲಾರ್ಪಣೆ ಮಾಡಿದರು. ಅರ್ಚಕರು ಮಂಗಳಾರತಿ ಬೆಳಗಿದರು.

ಅಲ್ಲಿಂದ ಚೆಂಡೆ ವಾದ್ಯಮೇಳದ ಮೆರವಣಿಗೆಯಲ್ಲಿ ಉಜಿರೆಯ ನಾಗರಿಕರು ಭಕ್ತಿಸಂಭ್ರಮದಿಂದ ಭಕ್ತಿರಥ ಸ್ವಾಗತಿಸಿ ದೇವಸ್ಥಾನ ಮುಂಭಾಗಕ್ಕೆ ಕರೆತಂದರು. ಅಲ್ಲಿ ದೇವಸ್ಥಾನದ ವತಿಯಿಂದ ಮಂಗಳಾರತಿ ಬೆಳಗಿದಾಗ ಮಳೆಯ ಅಮೃತ ಸಿಂಚನವಾಯಿತು. ನೆರೆದ ಭಕ್ತವೃಂದ ಸಾಮೂಹಿಕ ರಾಮ ತಾರಕ ಮಂತ್ರ ಪಠಿಸಿದರು. ಉಡುಪಿ ಪೇಜಾವರ ಮಠದ ವತಿಯಿಂದ ನಂದಳಿಕೆ ವಿಠಲ ಭಟ್, ಶಶಾಂಕ ಭಟ್ , ರಾಘವೇಂದ್ರ ಭಟ್ ಮಠ ಮದ್ದಡ್ಕ ಇದ್ದರು.

ಶಿವಳ್ಳಿ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಾ.ಎಂ.ಎಂ .,ದಯಾಕರ್, ತುಳು ಶಿವಳ್ಳಿ ತಾಲೂಕು ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ರಾಜಪ್ರಸಾದ್ ಪೋಲ್ನಾಯ , ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ, ಕಾರ್ಯದರ್ಶಿ ಹರ್ಷಕುಮಾರ್ ಕೆ ಎನ್ , ವಲಯ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ಗುರುರಾಜ್, ಯುವ ವಿಪ್ರ ವೇದಿಕೆ ಅಧ್ಯಕ್ಷ ಸೂರ್ಯನಾರಾಯಣ ಮುರುಡಿತ್ತಾಯ, ವರ್ತಕ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಮುರಳಿಕೃಷ್ಣ ಆಚಾರ್, ರವಿ ಚೆಕ್ಕಿತ್ತಾಯ, ಅನಂತಕೃಷ್ಣ ಪಡುವೆಟ್ನಾಯ, ವೆಂಕಟ್ರಮಣ ರಾವ್, ರವೀಂದ್ರ ಶೆಟ್ಟಿ ಬಳಂಜ, ಭರತ್ ಕುಮಾರ್,ಪದ್ಮನಾಭ ಶೆಟ್ಟಿಗಾರ್, ಮೋಹನ ಶೆಟ್ಟಿಗಾರ್, ಶ್ರೀನಿವಾಸ್ ರಾವ್, ನವೀನ ನೆರಿಯ, ಶಶಿರಾಜ್ ಶೆಟ್ಟಿ, ಸಂಪತ್ ಸುವರ್ಣ, ಶೈಲಜಾ ಪೆಜತ್ತಾಯ, ಸರೋಜಾ ಕೆದಿಲಾಯ, ಶೋಭಾ ಸುರೇಶ, ಪುಷ್ಪಾವತಿ ಶೆಟ್ಟಿ, ರಾಮಚಂದ್ರ ಹೊಳ್ಳ, ಜನಾರ್ದನ ತೋಳ್ಪಡಿತ್ತಾಯ, ಶಾಮ ಭಟ್ ಅತ್ತಾಜೆ, ಜಯರಾಮ ಪಡ್ಡಿಲ್ಲಾಯ ಸಂತೋಷ್ ಅತ್ತಾಜೆ, ಶಶಿಧರ್ ಕಳ್ಮಂಜ,ರಾಮಕೃಷ್ಣ ಮಡಪುಳಿತ್ತಾಯ, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.

ಭಕ್ತಿರಥ ಯಾತ್ರೆಯಲ್ಲಿ ಆರಾಧಿಸಲ್ಪಟ್ಟ ಸೀತಾರಾಮಚಂದ್ರ ದೇವರನ್ನು ರಾತ್ರಿ ಶ್ರೀ ಜನಾರ್ದನ ದೇವಸ್ಥಾನದ ಮಂಟಪದಲ್ಲಿರಿಸಿ, ಶುಕ್ರವಾರ ಬೆಳಗ್ಗೆ ಅರ್ಚಕರಿಂದ ಹೋಮ,ಪೂಜೆಯ ಬಳಿಕ ರಥಯಾತ್ರೆ ಬೆಳ್ತಂಗಡಿ,ಗುರುವಾಯನಕೆರೆಗಾಗಿ ಮಧ್ವಕಟ್ಟೆ ಗೆ ನಿರ್ಗಮಿಸಿದಾಗ ಭಕ್ತಿ ಗೌರವ ದಿಂದ ಬೀಳ್ಕೊಡಲಾಯಿತು.