ಕಡೂರುಹಕ್ಕುಗಳ ರಕ್ಷಣೆ ಮೂಲಕ ಮಕ್ಕಳ ಪ್ರಗತಿಗೆ ಸಮಾಜ ನೆರವು ನೀಡಲು ಮುಂದೆ ಬರಬೇಕು ಎಂದು ಫಿಕಾರ್ಡ್ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಗ್ರಾಮ ಸಭೆ ಉಧ್ಘಾಟನೆ

ಕನ್ನಡಪ್ರಭ ವಾರ್ತೆ ಕಡೂರು

ಹಕ್ಕುಗಳ ರಕ್ಷಣೆ ಮೂಲಕ ಮಕ್ಕಳ ಪ್ರಗತಿಗೆ ಸಮಾಜ ನೆರವು ನೀಡಲು ಮುಂದೆ ಬರಬೇಕು ಎಂದು ಫಿಕಾರ್ಡ್ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆಯ ಶ್ರೀ ಕಟ್ಟೆಹೊಳೆಯಮ್ಮ ಫ್ರೌಢಶಾಲೆ ಆವರಣದಲ್ಲಿ ಕುರುಬಗೆರೆ, ದೊಡ್ಡ ಪಟ್ಟಣಗೆರೆ, ಮರಡೀಹಳ್ಳಿ, ನೀಲೇಗೌಡನ ಕೊಪ್ಪಲು, ಬೋವಿ ಕಾಲೋನಿಯ ಸರ್ಕಾರಿ ಪ್ರಾಥಮಿಕ ಮತ್ತು ಫ್ರೌಢಶಾಲೆಗಳ ವಿದ್ಯಾರ್ಥಿಗಳ ಗ್ರಾಮ ಸಭೆ ಉಧ್ಘಾಟಿಸಿ ಮಾತನಾಡಿದರು. ಸರ್ಕಾರ ಬದುಕುವ ರಕ್ಷಣೆ ಮತ್ತು ಭಾಗವಹಿಸುವ ಹಕ್ಕುಗಳನ್ನು ಮಕ್ಕಳಿಗಾಗಿ ರೂಪಿಸಿದೆ. ಮನೆಯಲ್ಲಿ ಪೋಷಕರ ಮತ್ತು ಶಾಲೆಯಲ್ಲಿ ಶಿಕ್ಷಕರ ಉಸ್ತುವಾರಿಯಲ್ಲಿರುವ ಮಕ್ಕಳು ಸಮಾಜದ ಸುರಕ್ಷತೆಯಲ್ಲಿ ಬೆಳೆಯಬೇಕು. ಈ ಎಲ್ಲ ಹಕ್ಕುಗಳ ರಕ್ಷಣೆಗೆ ಮತ್ತು ಮಕ್ಕಳ ಅಭ್ಯುದಯಕ್ಕೆ ಕಾನೂನು ರೂಪಿಸುವ ಹೊಣೆಗಾರಿಕೆ ಮೊದಲ ಹೆಜ್ಜೆಯಾಗಿದ ಗ್ರಾಮ ಸಭೆಯ ಮೂಲಕ ನಮ್ಮೆಲ್ಲರ ಮೇಲಿದೆ. ಬಲಿಷ್ಟ ಸಮಾಜಕ್ಕಾಗಿ ಹೊಸ ಪೀಳಿಗೆಯನ್ನು ರೂಪುಗೊಳಿಸುವ ಜವಾಬ್ದಾರಿ ನಿರ್ವಹಿಸಲು ಎಲ್ಲರೂ ಕೈಜೋಡಿಸಬೇಕು ಎಂದರು. ವಕೀಲ ಚಂದ್ರಶೇಖರ್ ಮಾತನಾಡಿ, ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಫೋಕ್ಸೋ ಕಾಯಿದೆ ಕುರಿತು ಮಾಹಿತಿ ನೀಡಿದರು. ಶ್ರೀ ಕಟ್ಟೆ ಹೊಳೆಯಮ್ಮ ಫ್ರೌಢಶಾಲೆಯ ಮುಖ್ಯ ಶಿಕ್ಷಕ ಧರಣೇಶ್, ಎಸ್. ಡಿ ಎಂಸಿ ಅಧ್ಯಕ್ಷ ರಮೇಶ್, ಸಿಎಂಸಿಎ (ಮಕ್ಕಳಲ್ಲಿ ಸಾಮಾಜಿಕ ಜಾಗೃತಿಯ ಅರಿವು ) ಸಮಿತಿ ಪ್ರಸನ್ನ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ರಾಜಪ್ಪ, ಲೋಕೇಶ್,ವೆಂಕಟೇಶ್, ಮಹೇಶ್,ದೇವರಾಜ್, ಶಿಕ್ಷಕರಾದ ಚಂದನ್, ರೂಪಾ, ಶಾಲೆಯ ಮಕ್ಕಳು ಮತ್ತು ಗ್ರಾಮಸ್ಥರು ಹಾಜರಿದ್ದರು.14ಕೆಕೆಡಿಯು1.

ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆಯ ಫ್ರೌಢಶಾಲೆ ಆ‍ವರಣದಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯನ್ನು ಫಿಕಾರ್ಡ್ ಬ್ಯಾಂಕ್ ನಿರ್ದೇಶಕ ಜಿಗಣೇಹ‍ಳ್ಲಿ ನೀಲಕಂಠಪ್ಪ ಉದ್ಘಾಟಿಸಿದರು.