ಸಂಪೂರ್ಣ ಸಾವಯವ ಪದ್ಧತಿಯಿಂದ ಭೂಮಿ ಫಲವತ್ತತೆ ಹೆಚ್ಚಳ: ವೈ.ಎಚ್.ಕೃಷ್ಣೇಗೌಡ

| Published : Oct 15 2025, 02:06 AM IST

ಸಂಪೂರ್ಣ ಸಾವಯವ ಪದ್ಧತಿಯಿಂದ ಭೂಮಿ ಫಲವತ್ತತೆ ಹೆಚ್ಚಳ: ವೈ.ಎಚ್.ಕೃಷ್ಣೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಿಕೊಳ್ಳದೆ ಸಾವಯವ ಕೃಷಿ ಪದ್ಧತಿ ಮೂಲಕ ವ್ಯವಸಾಯ ಮಾಡಿದರೆ ಭೂಮಿ ಫಲವತ್ತತೆ ಹೆಚ್ಚಳವಾಗಿ ಮುಂದಿನ ತಲೆಮಾರಿಗೂ ಅನುಕೂಲವಾಗುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಿಕೊಳ್ಳದೆ ಸಾವಯವ ಕೃಷಿ ಪದ್ಧತಿ ಮೂಲಕ ವ್ಯವಸಾಯ ಮಾಡಿದರೆ ಭೂಮಿ ಫಲವತ್ತತೆ ಹೆಚ್ಚಳವಾಗಿ ಮುಂದಿನ ತಲೆಮಾರಿಗೂ ಅನುಕೂಲವಾಗುತ್ತದೆ ಎಂದು ಯತ್ತಂಬಾಡಿ ಗ್ರಾಮದ ಸಾವಯವ ಕೃಷಿಕ ವೈ.ಎಚ್.ಕೃಷ್ಣೇಗೌಡ ತಿಳಿಸಿದರು.

ತಮ್ಮ ನಿವಾಸದ ಆವರಣದಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದಿಂದ ಹಮ್ಮಿಕೊಂಡಿದ್ದ ವಿಷಮುಕ್ತ ಭೂಮಿ, ನಮ್ಮ ಧ್ಯೇಯ ಕಾರ್ಯಕ್ರಮದಲ್ಲಿ ಮಾತನಾಡಿ, ನನಗೆ ಇರುವ ಜಮೀನಿನಲ್ಲಿ ಸಂಪೂರ್ಣ ಸಾವಯವ ಪದ್ಧತಿಯಿಂದ ವ್ಯವಸಾಯ ಮಾಡಿಕೊಂಡು ಬೆಣ್ಣಿ ಹಣ್ಣು, ಬಾಳೆ, ಮೋಸಂಬಿ, ಮಾವು, ಸೀಬೆ, ನಿಂಬೆಹಣ್ಣು ಮುಂತಾದ ಎಲ್ಲಾ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದೇನೆ ಎಂದರು.

ಇದರ ಜೊತೆಗೆ ಎಳ್ಳು ಮತ್ತು ಕಡಲೆ ಕಾಯಿಯನ್ನು ನಿರಂತರ ಬೆಳೆಯಾಗಿ ಬೆಳೆಯುತ್ತೇನೆ. ಭೂಮಿ ಫಲವತ್ತತೆಗಾಗಿ ರಾಸಾಯನಿಕ ಮುಕ್ತ ಮಾಡಿ ಸಂಪೂರ್ಣ ಭೂಮಿ ಫಲವತ್ತತೆಯಿಂದ ಕೂಡಿದರೆ ಸಿಗುವ ಲಾಭ ನಿರಂತರವಾಗಿರುತ್ತದೆ. ನಿಗಮೆ ಜೊತೆಗೆ ನಮ್ಮ ಮುಂದಿನ ತಲೆಮಾರಿಗೂ ಅದರ ಫಲ ದೊರೆಯುತ್ತದೆ ಎಂದರು.

ಸಾವಯವ ಕೃಷಿ ಪದ್ಧತಿ ಅನುಸರಿಸಿ ತಯಾರಿಸಿದ ಆಹಾರ, ಬೆಳೆದ ಹಣ್ಣು ತರಕಾರಿ ತಿಂಡಿಗಳನ್ನು ಸೇವಿಸುವುದರಿಂದ ನಾವುಗಳು ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಕರೆ ನೀಡಿದರು.

ಈ ವೇಳೆ ಮಂಡ್ಯ ಜಿಲ್ಲಾ ಜಂಟಿ ನಿರ್ದೇಶಕ ಅಶೋಕ್ ಕುಮಾರ್ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸೌಮ್ಯಾ ಶ್ರೀ ಸೇರಿದಂತೆ ಸಂಪೂರ್ಣ ಸಾವಯವ ಕೃಷಿಕರ ಸಂಘದ ಮಳವಳ್ಳಿ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್, ಕಾರ್ಯದರ್ಶಿ ಚಿಕ್ಕಣ್ಣ, ಸಹ ಕಾರ್ಯದರ್ಶಿ ಶಿವಕುಮಾರ್, ಗಜೇಂದ್ರ, ಕಪನೀಗೌಡ, ಮಹಾದೇವಯ್ಯ ದೇವರಾಜು, ರವಿ, ಶಿವಮಾದು ಮತ್ತು ಇತರರು ಇದ್ದರು.