ಎಂಜಿಎಂ ಆಟೋ ನಿಲ್ದಾಣಕ್ಕೆ ಸೋಲಾರ್ ದೀಪ ಕೊಡುಗೆ

| Published : Oct 12 2025, 01:02 AM IST

ಸಾರಾಂಶ

ಯಶೋದಾ ಆಟೋ ಚಾಲಕ-ಮಾಲಕರ ಸಂಘದ ವತಿಯಿಂದ ಸಂಘ ಜಿಲ್ಲಾಧ್ಯಕ್ಷ, ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಮುತುವರ್ಜಿಯಿಂದ ಕುಂಜಿಬೆಟ್ಟುವಿನ ಎಂಜಿಎಂ ಕಾಲೇಜು ಆಟೋ ರಿಕ್ಷಾ ನಿಲ್ದಾಣಕ್ಕೆ ಕೊಡುಗೆಯಾಗಿ ನೀಡಿದ ಸೋಲಾರ್ ದೀಪವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಯಶೋದಾ ಆಟೋ ಚಾಲಕ-ಮಾಲಕರ ಸಂಘದ ವತಿಯಿಂದ ಸಂಘ ಜಿಲ್ಲಾಧ್ಯಕ್ಷ, ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಮುತುವರ್ಜಿಯಿಂದ ಕುಂಜಿಬೆಟ್ಟುವಿನ ಎಂಜಿಎಂ ಕಾಲೇಜು ಆಟೋ ರಿಕ್ಷಾ ನಿಲ್ದಾಣಕ್ಕೆ ಕೊಡುಗೆಯಾಗಿ ನೀಡಿದ ಸೋಲಾರ್ ದೀಪವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸ್ಥಳೀಯ ಪ್ರಮುಖರಾದ ಚರಣ್ ರಾಜ್ ಬಂಗೇರ ಮತ್ತು ನಿಲ್ದಾಣದ ಆಟೋ ಸಂಘದ ಅಧ್ಯಕ್ಷ ರವಿ, ಯಶೋದಾ ಆಟೋ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಜೊತೆ ಕಾರ್ಯದರ್ಶಿ ಹರೀಶ್ ಅಮೀನ್, ಸದಸ್ಯರಾದ ಹರೀಶ್ ಕಾಂಚನ್ ಮತ್ತು ರವಿ ಸೇರಿಗಾರ್, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕಪ್ಪೆಟ್ಟು, ಉಪಾಧ್ಯಕ್ಷ ಸಂತೋಷ್ ಶೇರಿಗಾರ್, ನಿಲ್ದಾಣದ ಸದಸ್ಯರಾದ ನಾಗರಾಜ್, ಸತೀಶ್ ಪೂಜಾರಿ, ಸತೀಶ್ ಗಾಣಿಗ, ಜನಾರ್ದನ್, ಇಮ್ತಿಯಾಜ್, ನಾರಾಯಣ, ಸಂತೋಷ್ ಪೂಜಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.