ಸಾರಾಂಶ
ನಮ್ಮ ಜಮೀನಿನಲ್ಲಿ ತೂಗರಿ ಬೆಳೆ, ಈರುಳ್ಳಿ, ಮೆಕ್ಕೆಜೋಳ, ಮೆಣಸಿನಕಾಯಿ, ಸೂರ್ಯಕಾಂತಿ ಉತ್ತಮವಾಗಿ ಬೆಳೆದಿತ್ತು. ಆದ್ರೆ ಮಳೆಯಿಂದ ಸೋಲಾರ್ ಪಾರ್ಕ್‌ನಲ್ಲಿ ಸಂಗ್ರಹವಾಗುವ ನೀರು ನಮ್ಮ ಜಮೀನಿನಲ್ಲಿ ನುಗ್ಗಿದ ಪರಿಣಾಮ ವಿವಿಧ ಬೆಳೆ ಹಾನಿಯಾಗಿದ್ದು, ಅಂದಾಜು 8 ಲಕ್ಷ ರು. ಮೌಲ್ಯದ ಬೆಳೆ ಹಾನಿಯಾಗಿದ್ದು, ಕಂಪನಿಯವರು ಪರಿಹಾರ ನೀಡಬೇಕೆಂದು ಡಂಬಳ ಗ್ರಾಮದ ರೈತ ಮಂಜುರಡ್ಡಿ ಶಿವಪುತ್ರಪ್ಪ ಗಡಗಿ ಒತ್ತಾಯಿಸಿದ್ದಾರೆ.
ಡಂಬಳ: ನಮ್ಮ ಜಮೀನಿನಲ್ಲಿ ತೂಗರಿ ಬೆಳೆ, ಈರುಳ್ಳಿ, ಮೆಕ್ಕೆಜೋಳ, ಮೆಣಸಿನಕಾಯಿ, ಸೂರ್ಯಕಾಂತಿ ಉತ್ತಮವಾಗಿ ಬೆಳೆದಿತ್ತು. ಆದ್ರೆ ಮಳೆಯಿಂದ ಸೋಲಾರ್ ಪಾರ್ಕ್‌ನಲ್ಲಿ ಸಂಗ್ರಹವಾಗುವ ನೀರು ನಮ್ಮ ಜಮೀನಿನಲ್ಲಿ ನುಗ್ಗಿದ ಪರಿಣಾಮ ವಿವಿಧ ಬೆಳೆ ಹಾನಿಯಾಗಿದ್ದು, ಅಂದಾಜು 8 ಲಕ್ಷ ರು. ಮೌಲ್ಯದ ಬೆಳೆ ಹಾನಿಯಾಗಿದ್ದು, ಕಂಪನಿಯವರು ಪರಿಹಾರ ನೀಡಬೇಕೆಂದು ಡಂಬಳ ಗ್ರಾಮದ ರೈತ ಮಂಜುರಡ್ಡಿ ಶಿವಪುತ್ರಪ್ಪ ಗಡಗಿ ಒತ್ತಾಯಿಸಿದ್ದಾರೆ.
ನಮ್ಮ ಗ್ರಾಮದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಹಿರೋ ಪ್ಯೂಚರ್ ಎನರ್ಜಿ ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿರುವುದರಿಂದ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ರೈತರಿಗೆ ತುಂಬಾ ತೊಂದರೆಯಾಗಿದೆ. ರೈತರು ಬೈಕ, ಟಂಟಂ ಇತರೆ ವಾಹನ ಸಂಚಾರ ಮಾಡದಂತ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಹದಗೆಟ್ಟ ಪರಿಣಾಮ ನಮ್ಮ ಜಮೀನುಗಳಿಗೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಕಳೆದ ಮೂರು ನಾಲ್ಕ ತಿಂಗಳಿನಿಂದ ರಸ್ತೆ ದುರಸ್ತೆ ಮಾಡಿಸಿ ಅಂತಾ ಹೇಳಿದರು ಪ್ರಯೋಜನವಾಗಿಲ್ಲ. ನಮ್ಮ ಜಮೀನಿನಲ್ಲಿ ಮಳೆಯಾದರೆ ಸೋಲಾರ್ ಪಾರ್ಕ್‌ನಲ್ಲಿ ಸಂಗ್ರಹವಾಗುವ ನೀರು ನಮ್ಮ ಜಮೀನುಗಳಿಗೆ ನುಗ್ಗಿದ ಪರಿಣಾಮ ಸರ್ವೇ ನಂಬರ್ 521 ಪ್ರಶಾಂತ ಶಿವಪುತ್ರಪ್ಪ ಗಡಗಿ 13 ಎಕರೆ. ಸರ್ವೇ ನಂಬರ್ 521/1 ಶಂಕ್ರಮ್ಮ ಶಿವಪುತ್ರಪ್ಪ ಗಡಗಿ 5 ಎಕರೆ, ಸರ್ವೇ ನಂಬರ್ 521/2 ಮಂಜುರಡ್ಡಿ ಶಿವಪುತ್ರಪ್ಪ ಗಡಗಿ 3 ಎಕರೆ ಬೆಳೆ ಹಾನಿಯಾಗಿದೆ. ಕಂಪನಿಯವರಿಗೆ ನಮ್ಮ ಜಮೀನುಗಳಿಗೆ ನೀರು ಬರದಂತೆ ನೋಡಿಕೊಳ್ಳಿ ಎಂದರೂ ಸ್ಪಂದನೆ ಮಾಡುತ್ತಿಲ್ಲ. ಇದರಿಂದ ಫಸಲಿಗೆ ಬಂದ ಬೆಳೆಗಳಿಗೆ ನೀರು ನುಗ್ಗಿದ್ದರಿಂದ ಅಂದಾಜು 8 ಲಕ್ಷ ರು. ಬೆಳೆ ಹಾನಿಯಾಗಿದೆ. ತಹಸೀಲ್ದಾರ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ನಮಗೆ ಅಗತ್ಯ ಪರಿಹಾರ ಕಂಪನಿಯವರಿಂದ ಕೊಡಿಸಬೇಕು. ನಮಗೆ ಪರಿಹಾರ ದೊರೆಯುವ ತನಕ ರಸ್ತೆ ಬಂದ್ ಮಾಡುತ್ತೇವೆ. ಕಂಪನಿಯವರಿಗೂ ಯಾವುದೇ ರೀತಿಯ ಕೆಲಸ ಮಾಡದಂತೆ ತಡೆಯುತ್ತೇವೆ. ಈ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಿಸುತ್ತೇನೆ ಎಂದು ತಮ್ಮ ನೋವು ವ್ಯಕ್ತಪಡಿಸುತ್ತಾರೆ ರೈತ ಮಂಜುರಡ್ಡಿ ಶಿವಪುತ್ರಪ್ಪ ಗಡಗಿ.ಕಂಪನಿಯವರು ತಮ್ಮ ಕೆಲಸ ಪೂರ್ಣಗೊಂಡ ನಂತರ ಹೋಗುತ್ತಾರೆ. ನಂತರ ರಸ್ತೆಯನ್ನು ನಾವೇ ದುಡ್ಡು ಖರ್ಚು ಮಾಡಿ ಮಾಡಿಸುವ ಪರಿಸ್ಥಿತಿ ಇದೆ. ಈ ಭಾಗದಲ್ಲಿನ ರೈತರ ಪರಿಸ್ಥಿತಿ ಹೇಳತೀರದು ಎನ್ನುತ್ತಾರೆ ಇನ್ನೂರ್ವ ರೈತ ಮುತ್ತಪ್ಪ ಗಡಗಿ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಂಬಳ ನಾಡ ಕಾರ್ಯಾಲಯದ ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಸೋಲಾರ್ ಪಾರ್ಕ್‌ನಲ್ಲಿ ಮಳೆಯಿಂದ ಸಂಗ್ರಹವಾಗಿರುವ ನೀರು ಬೇರೆ ಮಾರ್ಗವಿಲ್ಲದೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿರುವುದನ್ನು ಹಾಗೂ ರಸ್ತೆ ಹದಗೆಟ್ಟಿರುವುದನ್ನು ಭೇಟಿ ನೀಡಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ತಗೆದುಕೊಳ್ಳುತ್ತೇನೆ ಎನ್ನುತ್ತಾರೆ.