ಸಾರಾಂಶ
ಕೊಪ್ಪ: ಸೇನೆಯಿಂದ ತುರ್ತು ಕರೆ ಬಂದಿರುವ ಹಿನ್ನೆಲೆಯಲ್ಲಿ ರಜೆ ಮೇಲೆ ಊರಿಗೆ ಬಂದಿದ್ದ ಹರಿಹರಪುರ ಸಮೀಪದ ಸಿಗದಾಳು ಅದ್ದಡದ ಆದರ್ಶ್ ಎಸ್.ಎಸ್ ಸಿಗದಾಳು ಭಾನುವಾರ ಕರ್ತವ್ಯಕ್ಕೆ ತೆರಳಲು ಸಿದ್ಧರಾಗಿದ್ದು ಗ್ರಾಮಸ್ಥರು ಹೋರಾಡಿ ಗೆಲ್ಲುವ ಶಕ್ತಿ ಕರುಣಿಸುವಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸಿ ಹರಸಿ ಬಿಳ್ಕೊಟ್ಟರು.

ಆದರ್ಶ್ ಎಸ್.ಎಸ್ ಸಿಗದಾಳು ಕಳೆದ ೨೫ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಬಿ.ಎಸ್.ಎಫ್. ಕಮ್ಯುನಿಕೇಶನ್ ಮತ್ತು ಐಟಿ ವಿಭಾಗದಲ್ಲಿ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು ಇತ್ತೀಚೆಗೆ ಒಂದು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದ ಇವರು ಪ್ರಸ್ತುತ ಉಂಟಾಗಿರುವ ಯುದ್ಧದ ಬಿಕ್ಕಟ್ಟಿನ ಕಾರಣ ಸೇನೆಯಿಂದ ತುರ್ತು ಕರೆ ಬಂದಿದೆ. ಹಾಗಾಗಿ ತಮ್ಮರಜೆಯನ್ನು ೧೨ ದಿನಕ್ಕೆ ಮೊಟಕುಗೊಳಿಸಿ ಭಾನುವಾರ ಕರ್ತವ್ಯಕ್ಕೆ ತೆರಳಿದರು. ಸಿಗಾದಾಳಿನ ಗ್ರಾಮಸ್ಥರು ದೇಶ, ಸೈನಿಕರ ಒಳಿತಿಗಾಗಿ ರಾಷ್ಟ್ರ ಧ್ವಜ ಇಟ್ಟು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಕಳುಹಿಸಿಕೊಟ್ಟರು.