ಸಂತೆ ಮೊಗೇನಹಳ್ಳಿ ಕೆರೆಯಲ್ಲಿ ಒಂಟಿಸಲಗದ ಜಲಕ್ರೀಡೆ

| Published : Jan 10 2024, 01:46 AM IST

ಸಂತೆ ಮೊಗೇನಹಳ್ಳಿ ಕೆರೆಯಲ್ಲಿ ಒಂಟಿಸಲಗದ ಜಲಕ್ರೀಡೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಸಂತೆ ಮೊಗೇನಹಳ್ಳಿ ಗ್ರಾಮದ ಕೆರೆಯಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಜಲಕ್ರೀಡೆಯಲ್ಲಿ ತೊಡಗಿರುವ ಘಟನೆ ನಡೆದಿದೆ.

ಚನ್ನಪಟ್ಟಣ: ತಾಲೂಕಿನ ಸಂತೆ ಮೊಗೇನಹಳ್ಳಿ ಗ್ರಾಮದ ಕೆರೆಯಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಜಲಕ್ರೀಡೆಯಲ್ಲಿ ತೊಡಗಿರುವ ಘಟನೆ ನಡೆದಿದೆ.

ಮಂಗಳವಾರ ಬೆಳ್ಳಂಬೆಳಗ್ಗೆ ಗ್ರಾಮದ ಬಳಿ ಇರುವ ಕೆರೆಯಲ್ಲಿ ಒಂಟಿ ಸಲಗವೊಂದು ಜಲಕ್ರೀಡೆಯಲ್ಲಿ ತೊಡಗಿತ್ತು. ವಿಚಾರ ತಿಳಿದ ಗ್ರಾಮಸ್ಥರು ಒಂಟಿ ಸಲಗವನ್ನು ನೋಡಲು ಕೆರೆಯ ಬಳಿ ಜಮಾಯಿಸಿದ್ದಾರೆ. ಒಂಟಿ ಸಲಗ ಜಲಕ್ರೀಡೆಯಲ್ಲಿ ತೊಡಗಿದ್ದ ದೃಶ್ಯವನ್ನ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ.

ಕನಕಪುರದಲ್ಲಿ ಇತ್ತೀಚೆಗೆ ಒಂಟಿ ಸಲಗದ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕಾಡಾನೆಗಳ ಭೀತಿಯಿಂದ ಕಾಡಂಚಿನ ಗ್ರಾಮಗಳ ಜನ ಜೀವ ಕೈಯಲ್ಲಿಡಿದು ಜೀವನ ಸಾಗಿಸುತ್ತಿದ್ದಾರೆ. ಇದರ ನಡುವೆ ಸಂತೆಮೊಗೇನಹಳ್ಳಿ ಕೆರೆಯಲ್ಲಿ ಪ್ರತ್ಯಕ್ಷವಾದ ಒಂಟಿ ಸಲಗವನ್ನು ನೋಡಲು ಜನ ಮುಗಿಬಿದ್ದರು.

ರಾತ್ರಿ ಕಾಡಿಗಟ್ಟುವ ಕಾರ್ಯಾಚರಣೆ: ಇನ್ನು ಒಂಟಿ ಸಲಗ ಕೆರೆಯಿಂದ ಆಚೆ ಬಂದು ಹೊಂಗನೂರು ಮುಖ್ಯ ರಸ್ತೆಗೆ ಬಾರದಂತೆ ಜನ ಪಟಾಕಿ ಸಿಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ರಸ್ತೆಗೆ ಬಾರದಂತೆ ನಿಗಾ ವಹಿಸಿದ್ದಾರೆ. ಬೆಳಗಿನ ಹೊತ್ತು ಜನಸಂದಣಿ ಹೆಚ್ಚಾಗಿದ್ದು, ರಾತ್ರಿ ವೇಳೆಯಲ್ಲಿ ಕಾರ್ಯಾಚರಣೆ ನಡೆಸಿ ಒಂಟಿ ಸಲವನ್ನು ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಹಿಮ್ಮಟಿಸಲು ಕಾರ್ಯತಂತ್ರ ರೂಪಿಸಿದ್ದಾರೆ.

ಕೋಟ್................

ಸಂತೆಮೊಗೇನಹಳ್ಳಿ ಕೆರೆಯಲ್ಲಿ ಪ್ರತ್ಯಕ್ಷವಾಗಿದ್ದ ಒಂಟಿ ಸಲಗ ಆಸುಪಾಸಿನಲ್ಲೇ ಬೀಡುಬಿಟ್ಟಿದೆ. ಹಗಲಲ್ಲಿ ಕಾರ್ಯಾಚರಣೆ ನಡೆಸಿದರೆ, ಒಂಟಿ ಸಲಗ ಎತ್ತ ಬೇಕಾದರೂ ಸಾಗಿ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ಆದ್ದರಿಂದ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ ಆನೆಯನ್ನು ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಹಿಮ್ಮಟ್ಟಿಸಲಾಗುವುದು.

-ಕಿರಣ್ ಕುಮಾರ್, ವಲಯ ಅರಣ್ಯಾಧಿಕಾರಿ

ಪೊಟೋ೯ಸಿಪಿಟ೧,೨:

ಚನ್ನಪಟ್ಟಣ ತಾಲೂಕಿನ ಸಂತೆಮೊಗೇನಹಳ್ಳಿ ಕೆರೆಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ.