ನೆಲಮಂಗಲ ತಾಲೂಕಿಗೆ ಸೋಲೂರು ಹೋಬಳಿ ಸೇರ್ಪಡೆ: ಮಳೆಯಲ್ಲೇ ಜನರ ಸಂಭ್ರಮ

| Published : Sep 06 2025, 01:00 AM IST

ನೆಲಮಂಗಲ ತಾಲೂಕಿಗೆ ಸೋಲೂರು ಹೋಬಳಿ ಸೇರ್ಪಡೆ: ಮಳೆಯಲ್ಲೇ ಜನರ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆಯಾಗುತ್ತಿದ್ದಂತೆ ಸೋಲೂರು ಹೋಬಳಿಯ ಜನತೆ ಸಂತಸಪಟ್ಟು ಸಂಭ್ರಮಿಸಿದ್ದಾರೆ.

ದಾಬಸ್‍ಪೇಟೆ: ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆಯಾಗುತ್ತಿದ್ದಂತೆ ಸೋಲೂರು ಹೋಬಳಿಯ ಜನತೆ ಸಂತಸಪಟ್ಟು ಸಂಭ್ರಮಿಸಿದ್ದಾರೆ.

ಸೋಲೂರು ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಸ್ಥಳೀಯರು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಮಳೆ ನಿಂತ ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಮಾತನಾಡಿ ಕಳೆದ 47 ವರ್ಷಗಳಿಂದ ನೆಲಮಂಗಲ ತಾಲ್ಲೂಕಿಗೆ ಸೋಲೂರು ಹೋಬಳಿಯನ್ನು ಸೇರ್ಪಡೆ ಮಾಡುವಂತೆ ಈ ಹಿಂದೆ ಶಾಸಕರುಗಳು, ಸಚಿವರುಗಳನ್ನು ಮನವಿ ಮಾಡುತ್ತಲೇ ಬಂದಿದ್ದೇವು ಅದು ಸಾಧ್ಯವಾಗಿರಲಿಲ್ಲ. ಇದೀಗ ಕ್ಷೇತ್ರದ ಶಾಸಕರಾದ ಎನ್.ಶ್ರೀನಿವಾಸ್ ಅವರು ನಮ್ಮ ಕನಸನ್ನು ನನಸು ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ನೂತನ ಸೋಲೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗರುದ್ರಶರ್ಮಾ (ಬಾಬು) ಮಾತನಾಡಿ ಮತ ಚಲಾಯಿಸುವುದಕ್ಕೆ ಮಾತ್ರ ನೆಲಮಂಗಲ ವಿಧಾನಸಭಾ ಕ್ಷೇತ್ರವಿದ್ದು, ಆಡಳಿತ ವರ್ಗವೆಲ್ಲಾ ಮಾಗಡಿ ತಾಲ್ಲೂಕಿಗೆ ಸೇರಿತ್ತು. ರೈತರು, ವಿದ್ಯಾರ್ಥಿಗಳು ಇದರಿಂದ ಬಹಳ ಸಮಸ್ಯೆ ಎದುರಿಸುತ್ತಿದ್ದೇವು. ಅಭಿವೃದ್ದಿಯಲ್ಲಿ ಸೋಲೂರು ಹೋಬಳಿ ಕುಂಠಿತವಾಗಿತ್ತು. ಅಧಿಕಾರಿಗಳು ಸ್ಪಂದಿಸುತ್ತಿರಲಿಲ್ಲ. ಈ ಬಗ್ಗೆ ಚುನಾವಣೆ ಗೆದ್ದ ಸಂದರ್ಬದಲ್ಲಿ ಶಾಸಕರು ಸೋಲೂರು ಹೋಬಳಿಯನ್ನು ನೆಲಮಂಗಲ ಕ್ಷೇತ್ರಕ್ಕೆ ಸೇರಿಸುತ್ತೇನೆ ಎಂದು ಹೇಳಿದ್ದರೆ ಅದರಂತೆ ಇಂದು ಸೇರ್ಪಡೆ ಮಾಡಿ ನುಡಿದಂತೆ ನಡೆದಿದ್ದು ಸೋಲೂರು ಕ್ಷೇತ್ರದ ಜನತೆ ಅಭಾರಿಯಾಗಿದ್ದೇವೆ. ಪಕ್ಷಾತೀತವಾಗಿ ಸಹಕರಿದ ಎಲ್ಲರಿಗೂ ಅಭಿನಂದನೆಗಳು ಎಂದರು.

ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ : ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲು ಶ್ರಮಿಸಿದ ಶಾಸಕರಾದ ಎನ್.ಶ್ರೀನಿವಾಸ್ ಅವರನ್ನು ಪಕ್ಷಾತೀತವಾಗಿ ಅಭಿನಂದಿಸಲು ಶೀಘ್ರದಲ್ಲಿ ಸುಮಾರು 2500ಕ್ಕೂ ಹೆಚ್ಚು ಜನರು ಸೇರಿ ಬೃಹತ್ ಅಭಿನಂದನಾ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದರು.

ಬಿಟ್ಟಸಂದ್ರ ಗ್ರಾ.ಪಂ.ಅಧ್ಯಕ್ಷ ಗಂಗರಂಗಯ್ಯ ಮಾತನಾಡಿ ಕಳೆದ 25 ವರ್ಷಗಳಿಂದ ನಾವು ಸೋಲೂರು ಹೋಬಳಿಯ ವ್ಯಾಪ್ತಿಗೆ ಒಳಪಟ್ಟು ಬಹಳ ಸಮಸ್ಯೆಯನ್ನು ಎದುರಿಸಿದ್ದೇವು. 4 ಶಾಸಕರು, 3 ಸಚಿವರು ಇದ್ದರೂ ಏನು ಪ್ರಯೋಜವಾಗಿರಲಿಲ್ಲ. ಇದೀಗ ನಮ್ಮ ಶಾಸಕರು ಕೆಲಸ ಮಾಡಿದ್ದು, ಇನ್ನಾದರೂ ವಿರೋಧ ಪಕ್ಷಗಳು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದರು.

ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ ಈ ಹಿಂದೆ ಹತ್ತು ವರ್ಷ ಶಾಸಕರಾಗಿದ್ದ ಡಾ.ಕೆ.ಶ್ರೀನಿವಾಸಮೂರ್ತಿಯವರು 2020ರಲ್ಲಿ ಕೇವಲ ಜಿಲ್ಲಾಧಿಕಾರಿಗಳಿಗೆ, ವಿಧಾಸನಭೆಗೆ ಪತ್ರ ಬರೆದರೂ ಹೊರೆತು ಸಚಿವ ಸಂಪುಟಕ್ಕೆ ತರುವ ಪ್ರಯತ್ನ ಮಾಡಲಿಲ್ಲ. ಇದೀಗ ನಮ್ಮ ಮಾಜಿ ಶಾಸಕರು ಮಾಡಿದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಹಳೆ ಪತ್ರಗಳನ್ನು ಹರಿಬಿಟ್ಟಿದ್ದಾರೆ. ಪತ್ರ ಬರೆದು ಮೂರು ವರ್ಷ ಸಮಯವಿದ್ದರೂ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಪೋಟೋ 7 : ಸೋಲೂರು ಬಸ್ ನಿಲ್ದಾಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.