ಸಾರಾಂಶ
- ಮಹಿಳಾಪರ ಕಾನೂನು ಅರಿವಿನ ಕಾಯ೯ಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಡಾ. ಕೆ.ಅನಂತ್ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹೊಸದುರ್ಗ
ಮಹಿಳೆಯರ ಎಲ್ಲ ಸಮಸ್ಯೆಗಳಿಗೆ ಸಂವಿಧಾನ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಕಾನೂನು ರೂಪಿಸಿ, ಪರಿಹಾರ ಕಲ್ಪಿಸಿ ಕೊಟ್ಟಿದ್ದಾರೆ ಸಮಾಜ ದಲ್ಲಿ ಮಹಿಳೆಯರ ಮೇಲೆ ನಡೆಯಬಹುದಾದಂತಹ ದುಷ್ಕೃತ್ಯಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ, ಧೈಯ೯ವಾಗಿ ಮುಂದೆ ಬಂದು ಕಾನೂನಿನ ನೆರವು ಪಡೆದು ಪರಿಹಾರ ಕಂಡುಕೊಳ್ಳಬೇಕು ಎಂದು ಡಿ.ಸಿ.ಸಿ. ಬ್ಯಾಂಕ್ ನಿದೇ೯ಶಕ ಹಾಗೂ ಜಿ.ಪಂ. ಮಾಜಿ ಸದಸ್ಯ ಡಾ. ಕೆ.ಅನಂತ್ ಹೇಳಿದರು.ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಮಂಗಳೂರಿನ ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಸಮನ್ವಯ ಸಮಿತಿ ಮತ್ತು ಚಿತ್ರದುಗ೯ ಜಿಲ್ಲಾ ಮಹಿಳಾ ತರಬೇತುದಾರರ ಸಂಚಲನ ಸಮಿತಿ ಸಹಯೋಗದಲ್ಲಿ ನಡೆದ ಮಹಿಳಾಪರ ಕಾನೂನು ಅರಿವಿನ ಕಾಯ೯ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಚಲನ ಸಮಿತಿಯು ಸಮಾಜದಲ್ಲಿ ದೌಜ೯ನ್ಯಕ್ಕೆ ಒಳಗಾದ, ಮಹಿಳಾ ಪರವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಕಾಯ೯ಕ್ರಮಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದರು.
ಸಮಾಜ ಸೇವಕಿ ಕೆ.ಸಿ.ವೀಣಾ ಮಾತನಾಡಿ, ಮಹಿಳೆಯರು ಟಿ.ವಿ. ಸೀರಿಯಲ್‌ಗಳಲ್ಲಿ ಬರುವ ಪಾತ್ರದ ತರ ನಿಜ ಜೀವನದಲ್ಲಿ ಬದುಕಲು ಹೋಗಿ, ಸಮಾಜ ಮತ್ತು ಕುಟುಂಬಗಳಲ್ಲಿ ಕಲಹ, ದೌಜ೯ನ್ಯಗಳು ನಡೆಯಲು ಕಾರಣವಾಗುತ್ತವೆ. ಸಮಾಜದಲ್ಲಿ ಒಂದೇ ಕಡೆಯಿಂದ ತಪ್ಪುಗಳು ಆಗುವುದಿಲ್ಲ. ಎರಡು ಕಡೆಯಿಂದ ನಡೆಯುತ್ತವೆ. ತಪ್ಪುಗಳು ಆಗದಂತೆ ಎಚ್ಚರ ವಹಿಸೋದು ಅನಿವಾಯ೯. ಮಹಿಳೆಯರ ಮೇಲೆ ದೌಜ೯ನ್ಯ ನಡೆದರೆ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಲು ಸಂಚಲನದಂತಹ ಸಂಘ ಸಂಸ್ಥೆಗಳು ನೆರವು ನೀಡಬೇಕು ಎಂದು ತಿಳಿಸಿದರು.ನಿಸಗ೯ ಸಂಸ್ಥೆ ನಿದೇ೯ಶಕಿ ವಂದನೀಯ ಸಿಸ್ಟರ್ ಮರಿಯಾ ಪಿಂಟೋ, ಭೋವಿ ಸಮಾಜದ ಕಾಯ೯ದಶಿ೯ ರಾಮಚಂದ್ರಪ್ಪ, ಸಂಚಲನ ರಾಜ್ಯ ಸಮಿತಿಯ ಮಾಜಿ ಅಧ್ಯಕ್ಷೆ ವತ್ಸಲಾ ನಾಯಕ್, ಪೊಲೀಸ್ ಇಲಾಖೆಯ ಚಿದಾನಂದ, ರಾಜ್ಯ ಸಂಚಲನಾ ಖಜಾಂಚಿ ಶೈಲಜ, ಮಹಿಳಾ ಪೊಲೀಸ್ ಮಂಜುಳ, ನಿ.ಶಿ.ಗೀತಾ ಸಿಂಗ್ ಮಾತನಾಡಿದರು. ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಸಮನ್ವಯ ಸಮಿತಿ ಅಧ್ಯಕ್ಷೆ ಆಶಾಲತ ಅಧ್ಯಕ್ಷತೆ ವಹಿಸಿದ್ದರು.
ಕಾಯ೯ಕ್ರಮದಲ್ಲಿ ಜಿಲ್ಲಾ ಸಂಚಲನ ತರಬೇತುದಾರರ ತಂಡದ ಸುಮ, ಶೋಭ, ಬಳ್ಳಾರಿ ಅಂಬುಜ, ಭಾಗ್ಯ, ಸವಿತ, ಲತಾ ಮಂಜುಳ, ಕಾವ್ಯ, ರಾಜ್ಯ ಸಂಚಲನ ತಂಡದ ಶೋಭ, ವಿನಯ, ರಾಜೇಶ್ವರಿ, ಸುಮಂಗಳ ಶಣೈ ಮುಂತಾದವರು ಉಪಸ್ಥಿತರಿದ್ದರು.- - -
ಕೋಟ್ ಇತ್ತೀಚಿಗೆ ನ್ಯಾಯಾಲಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ದೌಜ೯ನ್ಯ ಪ್ರಕರಣಗಳು ಮತ್ತು ವಿವಾಹ ವಿಚ್ಛೇದನ, ಬಾಲ್ಯವಿವಾಹ, ಮಹಿಳೆಯರ ಆಸ್ತಿ ವಿವಾದ, ಪೋಕ್ಸೋ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಪ್ರಕರಣದಲ್ಲಿ ನೊಂದವರಿಗೆ ಉಚಿತ ಕಾನೂನು ನೆರವು ಕಲ್ಪಿಸಲು ಪ್ರಾಧಿಕಾರ ಇದೆ. ಇದರ ಸಲಹೆ ಪಡೆದು, ಪರಿಹಾರ ಕಂಡುಕೊಳ್ಳಬೇಕು- ಜ್ಯೋತಿ, ನ್ಯಾಯವಾದಿ
- - - -20ಎಚ್‌ಎಸ್‌ಡಿ1:ಹೊಸದುರ್ಗ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ನಡೆದ ಮಹಿಳಾಪರ ಕಾನೂನು ಅರಿವಿನ ಕಾಯ೯ಕ್ರಮವನ್ನು ಡಿಸಿಸಿ ಬ್ಯಾಂಕ್ ನಿದೇ೯ಶಕ, ಜಿಪಂ ಮಾಜಿ ಸದಸ್ಯ ಡಾ. ಕೆ.ಅನಂತ್ ಉದ್ಘಾಟಿಸಿದರು.