ಸಾರಾಂಶ
ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಪಂ ಅಧಿಕಾರಿಗಳಿಂದ ಕ್ರಮ ಗೊಳ್ಳಲಾಗಿದೆ. ಬಂಡಳ್ಳಿ ಗ್ರಾಮದ ಕೇಂದ್ರ ಸ್ಥಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜು. 9ರಂದು ಕನ್ನಡಪ್ರಭದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡ ಹಿನ್ನೆಲೆ ಎಚ್ಚೆತ್ತ ಗ್ರಾಪಂ ಅಧಿಕಾರಿಗಳು ತೊಂಬೆಗೆ ನೀರಿನ ಪೈಪ್‌ಲೈನ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ.
ಕನ್ನಡಪ್ರಭ ವಾರ್ತೆ, ಹನೂರು
ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಪಂ ಅಧಿಕಾರಿಗಳಿಂದ ಕ್ರಮ ಗೊಳ್ಳಲಾಗಿದೆ. ಬಂಡಳ್ಳಿ ಗ್ರಾಮದ ಕೇಂದ್ರ ಸ್ಥಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜು. 9ರಂದು ಕನ್ನಡಪ್ರಭದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡ ಹಿನ್ನೆಲೆ ಎಚ್ಚೆತ್ತ ಗ್ರಾಪಂ ಅಧಿಕಾರಿಗಳು ತೊಂಬೆಗೆ ನೀರಿನ ಪೈಪ್‌ಲೈನ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ.ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದ ಒಂದನೇ ವಾರ್ಡಿನ ಬಡಾವಣೆಯಲ್ಲಿ ಮಹಿಳೆಯರು ಮಕ್ಕಳು ಅಹೋರಾತ್ರಿ ನೀರಿನ ಶೇಖರಣೆಗೆ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ವಿಕಲಚೇತನ ಸಹ ನೀರನ್ನು ಶೇಖರಣೆ ಮಾಡಲು ತನ್ನ ಮಗುವಿನ ಜೊತೆ ನಲ್ಲಿಯ ಮುಂದೆ ಗಂಟೆಗಟ್ಟಲೆ ನಿಂತು ಕಾಲಿ ಬಿಂದಿಗೆಗಳನ್ನು ಹಿಡಿದು ರಾತ್ರಿ ವೇಳೆ ನೀರು ಸಂಗ್ರಹಿಸುವಂತಾಗಿತ್ತು. ಬಂಡಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಬಡಾವಣೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಪೈಪ್‌ಲೈನ್ ಹೊಸದಾಗಿ ನಿರ್ಮಾಣ ಮಾಡಿ ತೊಂಬೆಗೆ ನೀರಿನ ಪೈಪ್ ಲೈನ್ ಸಂಪರ್ಕ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಲೆದೂರಿದ್ದ ಕುಡಿಯುವ ನೀರಿನ ಸಮಸ್ಯೆಯಿಂದ ಮಹಿಳೆಯರು ನಿಟ್ಟಿಸಿರು ಬಿಡುವಂತಾಗಿದ್ದು ಬಂಡಳ್ಳಿ ಗ್ರಾಮದ ನಿವಾಸಿಗಳು ಪತ್ರಿಕೆಯ ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನೀರಿನ ಸಮಸ್ಯೆಯನ್ನು ಬಿತ್ತರಿಸಿದ ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ.