ಅಲೆಮಾರಿ ಅರೆ ಅಲೆಮಾರಿ ಸಮುದಾಯ ಸಮಸ್ಯೆಗೆ ಪರಿಹಾರ

| Published : Sep 06 2024, 01:02 AM IST / Updated: Sep 06 2024, 01:03 AM IST

ಅಲೆಮಾರಿ ಅರೆ ಅಲೆಮಾರಿ ಸಮುದಾಯ ಸಮಸ್ಯೆಗೆ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಅಲೆಮಾರಿ ಅರೆ ಅಲೆಮಾರಿ ಸಮುದಾಯ ಸಮಸ್ಯೆಗೆ ಪರಿಹಾರ

ಕನ್ನಡಪ್ರಭ ವಾರ್ತೆ ರಾಮನಗರನಗರದ ಐಜೂರು ಗುಡ್ಡ (ವಾರ್ಡ್ ನಂ-26)ರಲ್ಲಿ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗದ ವಿವಿಧ ಸಮುದಾಯದವರಿಗೆ ನಿರ್ಮಿಸಿ ಕೊಡಲಾಗಿರುವ ಮನೆಗಳಿಗೆ ರಾಮನಗರ ನಗರಸಭೆಯಿಂದ ಇ-ಖಾತೆ ಮಾಡಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಗೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನಿರ್ದೇಶನ ನೀಡಿದರು.ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಲೆಮಾರಿ ಹಾಗೂ ಅರೆ ಅಲೆಮಾರಿ ವರ್ಗಕ್ಕೆ ಸೇರಿದ ದೊಂಬಿದಾಸ, ಹೇಳವ, ಬುಡಬುಡಿಕೆ ಸೇರಿದಂತೆ ವಿವಿಧ ಸಮುದಾಯದ ಸಾವಿರಾರು ಜನರು ಜಿಲ್ಲೆಯಲ್ಲಿ ವಾಸವಿದ್ದು ಅವರು ಉತ್ತಮ ಬದುಕು ಸಾಗಿಸಲು ಅನುಕೂಲವಾಗುವಂತೆ ಸರ್ಕಾರದಿಂದ ಒದಗಿಸಲಾಗುವ ಸೌಲಭ್ಯಗಳನ್ನು ಕೂಡಲೇ ಒದಗಿಸಿಕೊಡಬೇಕು ಎಂದರು.

ನಗರದ 26ನೇ ವಾರ್ಡ್ ನಲ್ಲಿ ವಾಸಿಸುತ್ತಿರುವವರಿಗೆ ನಗರಸಭೆಯಿಂದ ಇ-ಖಾತೆ ಮಾಡಿಸಿ ಕೊಟ್ಟಲ್ಲಿ ಅವರು ಬ್ಯಾಂನಿಂದ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಹಿಂದುಳಿದ ವರ್ಗದ ಕಲ್ಯಾಣ ಅಧಿಕಾರಿಗಳು ಇದನ್ನು ಕೂಡಲೇ ಪರಿಶೀಲಿಸಿ ಎರಡು ದಿನದಲ್ಲೇ ಮಾಹಿತಿ ನೀಡಬೇಕು ಹಾಗೂ ಅವರಿಗೆ ಇ-ಖಾತೆ ಮಾಡಿಸಿಕೊಡಬೇಕು ಎಂದು ನಿರ್ದೇಶನ ನೀಡಿದರು.ಐಜೂರು ಗುಡ್ಡ ಪ್ರದೇಶದಲ್ಲಿರುವ ಅವರ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳ ಸಭೆ ನಡೆಸಿ ಅಲ್ಲಿಗೆ ನೀರು ಪೂರೈಕೆ ಮಾಡುವುದಾಗಿ ಯಶವಂತ್ ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಸಹಾಯಕ ಕಾಯದರ್ಶಿ ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಈ ಸಮುದಾಯದವರಿಗೆ ನಿವೇಶನವಿದ್ದು, ಮನೆ ಇಲ್ಲದೆ ಇದ್ದಲ್ಲಿ ಕೂಡಲೇ ಅವರು ವಾಸಿಸುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಕೂಡಲೇ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.ನಮ್ಮ ಸಮುದಾಯದವರು ವಾಸಿಸುವ ಐಜೂರು ಗುಡ್ಡದಲ್ಲಿ ರಾತ್ರಿಯ ವೇಳೆ ಕುಡುಕರ ಹಾವಳಿ ಹೆಚ್ಚಾಗಿದೆ ಎಂದು ಸಮುದಾಯದ ಮಹಿಳೆಯರು ಜಿಲ್ಲಾಧಿಕಾರಿಯವರಲ್ಲಿ ಅಳಲು ತೋಡಿಕೊಂಡಾಗ ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಅಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ಪೊಲೀಸ್ ಗಸ್ತನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್, ಜಿಲ್ಲಾ ಮಟ್ಟದ ಅಲೆಮಾರಿ ಹಾಗೂ ಅರೆಅಲೆಮಾರಿ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಡಿ. ರಂಗನಾಥಪ್ಪ ಹಾಗೂ ಮಾರಯ್ಯ ಮುಖಂಡರಾದ ಬಾಲರಾಜ್ ನಾಗಪ್ಪ, ನಾರಾಯಣಮೂರ್ತಿ, ರಂಗಸ್ವಾಮಯ್ಯ, ರಾವ್ಮಣ್ಣ, ನಾಗರಾಜ್, ಬಳೆ ನಾರಾಯಣ್ ಸೇರಿದಂತೆ ಹಲವು ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು.