ಇ-ಸ್ವತ್ತು ನೀಡಲು ಆಗುತ್ತಿರುವ ತೊಂದರೆ ಪರಿಹರಿಸಿ

| Published : Jan 08 2025, 01:30 AM IST

ಸಾರಾಂಶ

ಶಿವಮೊಗ್ಗ : ಇ-ಸ್ವತ್ತು ನಾಗರಿಕರಿಗೆ ಸಂಬಂಧಿಸಿದಂತೆ ಆಗುತ್ತಿರುವ ತೊಂದರೆಗಳ ಬಗ್ಗೆ ಜನರಿಗೆ ಆತಂಕ ಇದೆ. ಸಿಸ್ಟಮ್ ಸರಿ ಇದೆ. ಅನುಷ್ಠಾನಕ್ಕೆ ತಡ ಆಗುತ್ತಿದೆ. ಗ್ರಾಪಂಯಲ್ಲಿ ಈಗಾಗಲೇ ಮಾಡಿದ್ದಾರೆ. ನಗರ ವ್ಯಾಪ್ತಿಯಲ್ಲಿ ಮಾಡದೇ ಇರುವುದರಿಂದ ಸಮರೋಪಾದಿಯಲ್ಲಿ ಮಾಡಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಶಿವಮೊಗ್ಗ : ಇ-ಸ್ವತ್ತು ನಾಗರಿಕರಿಗೆ ಸಂಬಂಧಿಸಿದಂತೆ ಆಗುತ್ತಿರುವ ತೊಂದರೆಗಳ ಬಗ್ಗೆ ಜನರಿಗೆ ಆತಂಕ ಇದೆ. ಸಿಸ್ಟಮ್ ಸರಿ ಇದೆ. ಅನುಷ್ಠಾನಕ್ಕೆ ತಡ ಆಗುತ್ತಿದೆ. ಗ್ರಾಪಂಯಲ್ಲಿ ಈಗಾಗಲೇ ಮಾಡಿದ್ದಾರೆ. ನಗರ ವ್ಯಾಪ್ತಿಯಲ್ಲಿ ಮಾಡದೇ ಇರುವುದರಿಂದ ಸಮರೋಪಾದಿಯಲ್ಲಿ ಮಾಡಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಈ ಹಿಂದೆ ಮೈಸೂರು, ಶಿವಮೊಗ್ಗ, ತುಮಕೂರು ಸೇರಿ ಪ್ರಾಪರ್ಟಿ ಕಾರ್ಡ್ ಮಾಡಲಾಗಿತ್ತು. ಅದರಲ್ಲಿ ಎಲ್ಲಾ ದಾಖಲೆ ಇದೆ. ಅದನ್ನು ತರಿಸಿಕೊಳ್ಳಿ. ಸಹಾಯ ಆಗುತ್ತದೆ ಎಂದು ಹೇಳಿದರು.ನಗರದಲ್ಲಿ 1.07 ಲಕ್ಷ ಮನೆಗಳಿಗೆ ಭೇಟಿ ಕೊಡಬೇಕಿತ್ತು. ನಿಗದಿತ ದಿನಾಂಕ ಘೋಷಣೆ ಮಾಡಬೇಕು. 1.07 ಲಕ್ಷ ಸ್ವತ್ತು ಇ-ಖಾತೆ ಮಾಡಲು ಎಷ್ಟು ಸಮಯ ಬೇಕು. ಬಿ ಖಾತೆ ಮಾಡಿ ಆಗಿದೆ. ದಾಖಲೆಗಳು ಸರಿ ಇರುವುದಕ್ಕೆ ವಿಳಂಬ ಮಾಡಬಾರದು. ಕೆಲವರು ಸಾಲ ಮಾಡಿರುತ್ತಾರೆ. ಅದಕ್ಕೆ ಇ.ಸಿ ಕೇಳುತ್ತಿದ್ದೇವೆ. ಕೆಲ ಖಾತೆಗಳು ಮೂರು ನಾಲ್ಕು ಕೈ ಬದಲಾಗಿದೆ. ಹಾಗಾಗಿ ಇಸಿ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದರು.ಇ-ಸ್ವತ್ತು ಸಮಾರೋಪಾದಿಯಲ್ಲಿ ಆಗಲು ದಾಖಲೆ ಬರಬೇಕು. ವಿಂಡೋ ಮಾಡಿದರೆ ಸಿಂಗಲ್ ಇ- ಸ್ವತ್ತು ಆಗುತ್ತದೆ. ಜನ ಅರ್ಜಿ ಹಾಕಿ, ದಾಖಲೆಗೆ ಅಲೆದಾಡಬಾರದು. ನಾಗರಿಕರಿಗೆ ತೊಂದರೆ ಆಗಬಾರದು. ಮತಗಟ್ಟೆ ಜಾಗ ಗುರುತಿಸಿ. ವಾರ್ಡ್ ವಾರು ದಾಖಲೆ ಸಂಗ್ರಹ ಮಾಡಿ. 300 ಮತಗಟ್ಟೆ ಇದ್ದಾವೆ. ತಕ್ಷಣ ಕೆಲಸ ಆಗಬೇಕು. ಒಂದೇ ದಿನ 300 ಬೂತ್ ಕೆಲಸ ಆಗಬೇಕು. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿ ಮಾಡಿಕೊಳ್ಳಿ ಎಂದರು.

ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಾತನಾಡಿ, ಇನ್ನೂ ಹದಿನೈದು ದಿನದಲ್ಲಿ 3 ವಲಯ ಕಚೇರಿ ಆರಂಭ ಆಗಲಿದೆ. ಆಗ ಇ-ಸ್ವತ್ತು ಸುಲಭ ಆಗಲಿದ್ದು, ಜ.22ರೊಳಗೆ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.ವಿಧಾನ ಪರಿಷತ್ತು ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಪ್ರಾಪರ್ಟಿ ಟ್ಯಾಕ್ಸ್ ಅ್ಯಪ್‌ ಆಗಿಲ್ಲ. ಟ್ರೇಡ್ ಲೈಸೆನ್ಸ್ ಅ್ಯಪ್‌ ಇನ್ನೂ ಆಗಿಲ್ಲ. ಸರಳವಾಗಿ ಅ್ಯಪ್‌ ರೂಪಿಸಬಹುದು. ನಿಗಮ ಮಂಡಳಿ ಅ್ಯಪ್‌ ಮಾಡಿದ್ದೇವೆ. ಅ್ಯಪ್‌ ಮಾಡಿದ ನಂತರ ಪಾಲಿಕೆಗೆ ಜನರು ಪುನಃ ಓಡಾಡುವ ಹಾಗೆ ಆಗಬಾರದು ಎಂದು ಸೂಚನೆ ನೀಡಿದರು.

ಈ ಸಂದಭದಲ್ಲಿ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಉಪ ಆಯುಕ್ತ ತುಷಾರ್ ಹೊಸೂರು ಸೇರಿದಂತೆ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಇದ್ದರು.