ಸಾರಾಂಶ
ಕನ್ನಡಪ್ರಭ ವಾರ್ತೆ ಔರಾದ್ತಾಲೂಕಿನ ನಾಗೂರ (ಎಂ) ಗ್ರಾಮದಲ್ಲಿನ ಜೆಜೆಎಮ್ ಕಾಮಗಾರಿ ಹಾಗೂ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು, ಕೂಡಲೇ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಜಿ.ಪಂ. ಸಿಇಓ ಸೂಚನೆ ನೀಡಿದರು.ಜೋಜನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರ (ಎಂ) ಗ್ರಾಮಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿದಾಗ ಗ್ರಾಮದಲ್ಲಿ ಈಗಾಗಲೇ ಸಮರ್ಪಕವಾದ ನೀರಿನ ವ್ಯವಸ್ಥೆ ಇಲ್ಲ. ದಿನಾಲೂ ಮಹಿಳೆಯರು ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಕೇವಲ ನೀರಿಗಾಗಿ ಮಾತ್ರ ದಿನ ಕಳೆಯುವಂತಾಗಿದೆ. ಇದರಿಂದ ಜೀವನ ನಡೆಸು ವುದು ಕಷ್ಟಕರವಾಗಿದೆ. ನಮ್ಮೂರಿಗೆ ಆದಷ್ಟು ಬೇಗನೇ ಸಮರ್ಪಕವಾಗಿ ನೀರಿನ ವ್ಯವಸ್ಥೆ ಒದಗಿಸಿ ಕೊಡಿ ಎಂದು ಗ್ರಾಮಸ್ಥರು ತಮ್ಮ ಗೋಳು ತೋಡಿಕೊಂಡರು.ಗ್ರಾಮದ ಮುಖಂಡ ರಾಜಕುಮಾರ್ ಬಿರಾದರ್ ಮಾತನಾಡಿ, ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಆಮೇಗತಿಯಲ್ಲಿ ನಡೆದಿದೆ. ಗ್ರಾಮದಲ್ಲಿ ಸಂಪೂರ್ಣವಾಗಿ ನೀರಿನ ಸಮಸ್ಯೆ ಹೋಗಲಾಡಿಸಲು ಸಮೀಪದ ಶಂಬೇಳ್ಳಿ ಕೆರೆಯ ಹತ್ತಿರ ತೆರೆದ ಬಾವಿ ನಿರ್ಮಿಸಿ ಅಲ್ಲಿಂದ ಗ್ರಾಮದವರೆಗೆ ಪೈಪ್‌ಲೈನ್ ಅಳವಡಿಸಿ ಸಾರ್ವಜ ನಿಕರ ನೀರಿನ ಸಮಸ್ಯೆ ಬಗೆಹರಿಸಬೇಕೆಂದರು.ಇದಕ್ಕೆ ಸ್ಪಂದಿಸಿದ ಸಿಇಓ ಅವರು ಸ್ಥಳದಲ್ಲಿದ್ದ ತಾ.ಪಂ ಅಧಿಕಾರಿ ಮಾಣಿಕರಾವ್ ಪಾಟೀಲ್ ಅವರಿಗೆ ತಿಳಿ ಹೇಳಿ, ಜೆಜೆಎಂ ಯೋಜನೆಯಲ್ಲಿ ಇನ್ನು ಲಕ್ಷಾಂತರ ರು. ಹಣ ಬಾಕಿ ಉಳಿದುಕೊಂಡಿದೆ. ಈ ಬಾಕಿ ಇರುವ ಹಣವನ್ನು ತೆರೆದ ಬಾವಿಗೆ ಉಪಯೋಗಿಸಿ ನೀರಿನ ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದರು.ಜೆಜೆಎಂ ಕಾಮಗಾರಿ ಯೋಜನೆಯಿಂದ ಎಲ್ಲಾ ಮನೆಗಳಿಗೆ ನೀಡಿದ ಪೈಪ್ ಲೈನ್ ಸಂಪರ್ಕ ನಾಳೆಯಿಂದ ಮತ್ತೊಮ್ಮೆ ಪರೀಕ್ಷಿಸಿ ಎಲ್ಲಾ ಮನೆಗಳಿಗೆ ನೀರನ್ನು ಸಮರ್ಪಕವಾಗಿ ಒದಗಿಸಿದ ಮೇಲೆ ಜೆಇ ಮತ್ತು ಪಿಡಿಓ ಗಮನಹರಿಸಿ ಎಲ್ಲ ವ್ಯವಸ್ಥೆ ಸರಿಯಾದ ನಂತರ ತಮ್ಮ ಸುಪರ್ದಿಗೆ ಪಡೆಯಬೇಕೆಂದರು.ಜೆಜೆಎಂ ಎಇ ಅಭಿಷೇಕ, ದೇವರಾಜ್ ಮೇತ್ರೆ, ಪಿಡಿಒ ನರಸಿಂಗ ಮಾನೆ, ಗ್ರಾಮ ಪಂಚಾಯತ್ ಸದಸ್ಯ ರಾಜಕುಮಾರ ಮಾನುರೆ, ರಾಜಪ್ಪ ಬಿರಾದಾರ, ವೀರಶೆಟ್ಟಿ ಬಿರಾದಾರ, ಸಂಜು ಸಾಗರ್, ಕವಿರಾಜ್ ಶೇರಿಕಾರ, ಶಿವಶರಣಪ್ಪ ಬಿರಾದಾರ, ಸುನೀಲ್ ಬಿರಾದಾರ, ಪ್ರಭು, ಸಕೂಬಾಯಿ, ಶೋಭಾವತಿ ಶೇರಿಕಾರ್, ರೋಜಮ್ಮ, ನಾಗಮ್ಮ ಸೇರಿದಂತೆ ಇತರರಿದ್ದರು.