ಸಾರಾಂಶ
ಶಿಗ್ಗಾಂವಿ: ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ ಮತ್ತು ನೀರಾವರಿ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಶಾಸಕ ಯಾಶೀರಖಾನ ಪಠಾಣ ಹೇಳಿದರು.
ಶಿಗ್ಗಾಂವಿ ಪಟ್ಟಣದ ಸರಕಾರಿ ಅಂಬೇಡ್ಕರ್ ಭವನದಲ್ಲಿ ಶಾಸಕರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.ಜನರಿಗೆ ಅನೇಕ ತೊಂದರೆ ಇರುವ ಕಾರಣ ಕಾರ್ಯಾಲಯ ಉದ್ಘಾಟನೆಯನ್ನು ತರಾತುರಿಯಲ್ಲಿ ಮಾಡಲಾಯಿತು. ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಮಧ್ಯಸ್ಥಿಕೆ ವಹಿಸಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.ಹೋಬಳಿ ಮಟ್ಟದಲ್ಲಿ ಜನತಾದರ್ಶನ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಕಾರ್ಯದರ್ಶಿ, ಮೂರು ಪುರಸಭೆ ವ್ಯಾಪ್ತಿಯ ರಸ್ತೆ, ಗಟಾರ್, ಸ್ವಚ್ಛತೆಯ ಜೊತೆಗೆ ಮೂಲಭೂತ ಸೌಲಭ್ಯಗಳ ಬಗ್ಗೆ, ವಸತಿ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕು ಎಂದರು.
ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಒಸಿ ಹಾಗೂ ಮಟಕಾ ಹಾವಳಿ ಕಡಿಮೆ ಮಾಡಬೇಕು. ಅಕ್ರಮ ಸರಾಯಿ ಮಾರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪಂಚ ಗ್ಯಾರಂಟಿ ಯೋಜನೆ ಸಭೆ ನಡೆಸಿ, ಇನ್ನೂ ಯಾವ ಫಲಾನುಭವಿಗಳು ಇದರ ಸದುಪಯೋಗ ಪಡೆದಿಲ್ಲವೋ ಅವರ ಸಮಸ್ಯೆ ಪರಿಹರಿಸಿ ಎಂದರು.ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಇನ್ನೂ ಮೂರು ವರ್ಷಗಳ ಕಾಲ ನಮ್ಮದೇ ಸರಕಾರ ಇರುವ ಕಾರಣ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಜನತೆಯ ಸಮಸ್ಯೆಗಳಿಗೆ ಒಮ್ಮೆಲೆ ಪರಿಹಾರ ಸಿಗುವುದಿಲ್ಲ. ತಾಳ್ಮೆಯಿಂದ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಿ ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಧನಂಜಯ, ಇಒ ಕುಮಾರ ಮಣ್ಣವಡ್ಡರ, ಬ್ಲಾಕ್ ಅಧ್ಯಕ್ಷ ಬಿ.ಸಿ. ಪಾಟೀಲ, ಎಂ.ಜೆ. ಮುಲ್ಲಾ, ಗುಡ್ಡಪ್ಪ ಜಲದಿ, ಶೇಖಣ್ಣ ಮಣಕಟ್ಟಿ, ಕರೀಂ ಮೊಗಲಲ್ಲಿ, ಬಾಬರ ಬಾವಜೀ. ಪ್ರೇಮಾ ಪಾಟೀಲ, ವಸಂತಾ ಬಾಗೂರ, ಗೌಸ್‌ಖಾನ್ ಮುನಶಿ, ಜಾಫರ್‌ಖಾನ್ ಪಠಾಣ, ಮುಕ್ತಾರ ತಿಮ್ಮಾಪುರ, ಮುನ್ನಾ ಲಕ್ಷೇಶ್ವರ, ಸುಧೀರ ಲಮಾಣಿ, ಶ್ರೀಕಾಂತ ಪೂಜಾರ, ಶಂಭುಲಿಂಗಪ್ಪ ಆಜೂರ, ಶಿವಾನಂದ ಕುನ್ನೂರ, ಅಶೋಕ ಕಬನೂರ, ಮಲ್ಲಮ್ಮ ಸೋಮನಕಟ್ಟಿ ಸೇರಿದಂತೆ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.