ತರೀಕೆರೆತರೀಕೆರೆ ರೈಲು ನಿಲ್ದಾಣವನ್ನು ಸರ್ವತೋಮುಖ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.

ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಮನವಿ ಸ್ವೀಕರಿಸಿದ ಸಚಿವ ಸೋಮಣ್ಣ

ಕನ್ನಡಪ್ರಭ ವಾರ್ತೆ ತರೀಕೆರೆ

ತರೀಕೆರೆ ರೈಲು ನಿಲ್ದಾಣವನ್ನು ಸರ್ವತೋಮುಖ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.

ಸೋಮವಾರ ವಿಶೇಷ ರೈಲಿನಲ್ಲಿ ತರೀಕೆರೆ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಸಾರ್ವಜನಿಕರು, ಮುಖಂಡರು ಮತ್ತು ಸಂಘ ಸಂಸ್ಥೆಗಳಿಂದ ನಿಲ್ದಾಣ ಅಭಿವೃದ್ಧಿ ಬಗ್ಗೆ ಮನವಿ ಸ್ವೀಕರಿಸಿ ಮಾತನಾಡಿದರು.

ಶಿವಮೊಗ್ಗ, ಭದ್ರಾವತಿ ಇನ್ನಿತರ ರೈಲು ನಿಲ್ದಾಣಗಳು ಅಭಿವೃದ್ಧಿ ಪಡಿಸಿದ ರೀತಿಯಲ್ಲೇ ತರೀಕೆರೆ ನಿಲ್ದಾಣವನ್ನು ಗಿ ಅಭಿವೃದ್ಧಿ ಪಡಿಸಲಾಗುವುದು. ಶೀಘ್ರದಲ್ಲೇ ರೈಲ್ವೆ ಅಧಿಕಾರಿಗಳನ್ನು ಇಲ್ಲಿಗೆ ಕರೆಸಿಕೊಂಡು ಅಧಿಕಾರಿಗಳ ಜೊತೆಗೆ ಮಾತನಾಡಿ ಸಭೆ ನಡೆಸಿ, ನಿಲ್ದಾಣದಲ್ಲಿ ಆಗಬೇಕಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ವಿಕಸಿತ ಭಾರತದ ಕಲ್ಪನೆ:

ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕಲ್ಪನೆಯೊಂದಿಗೆ ರೈಲ್ವೇ ಇಲಾಖೆಗೆ ದೊಡ್ಡ ಶಕ್ತಿ ತುಂಬಬೇಕು. ತಾವುಗಳು ನೀಡಿದ ಎಲ್ಲಾ ಮನವಿಗಳನ್ನು ಸ್ವೀಕರಿಸಿದ್ದೇನೆ, ನಾನು ಈ ಭಾಗಕ್ಕೆ 3ನೇ ಬಾರಿ ಬರುತ್ತಿದ್ದೇನೆ. ಎಲ್ಲಾ ರೈಲು ನಿಲ್ದಾಣಗಳು ಅಭಿವೃದ್ಧಿಯಾಗಬೇಕು ಈ ನಿಟ್ಟಿನಲ್ಲಿ ತರೀಕೆರೆ ನಿಲ್ದಾಣವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕರು, ಮುಖಂಡರು, ಪುರಸಭಾ ಮಾಜಿ ಅಧ್ಯಕ್ಷ ಟಿ.ವಿ. ಶಿವಶಂಕರಪ್ಪ, ಕಸಾಪ, ಲಯನ್ಸ್ ಕ್ಲಬ್ ಅಮರಾವತಿ ಅಧ್ಯಕ್ಷ ಮತ್ತು ಸದಸ್ಯರು, ವಿವಿಧ ಸಂಘ ಸಂಸ್ಥೆಗಳು ತರೀಕೆರೆ ರೈಲು ನಿಲ್ದಾಣದ ಅಭಿವೃದ್ಧಿ ಕುರಿತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡ ಚಿಕ್ಕಾನವಂಗಲ ರಾಜಪ್ಪ, ಪುರಸಭಾ ಮಾಜಿ ಅಧ್ಯಕ್ಷ ಟಿ.ವಿ. ಶಿವಶಂಕರಪ್ಪ, ಬಿ.ಪಿ. ಚಂದ್ರಶೇಖರ್, ರೋಟರಿ ಅಧ್ಯಕ್ಷ ಕೆ.ಪಿ. ಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ್ ಕುಮಾರ್, ಲಯನ್ಸ್ ಕ್ಲಬ್ ಅಮರಾವತಿ ಕಾರ್ಯದರ್ಶಿ ಮುರುಳಿ ಟಿ.ಆರ್. ಪದಾಧಿಕಾರಿಗಳು ಮತ್ತು ಸದಸ್ಯರು, ಕಸಾಪ ಗೌರವಾಧ್ಯಕ್ಷ ಕನ್ನಡಶ್ರೀ ಬಿ.ಎಸ್. ಭಗವಾನ್, ಕೆ.ಎಸ್.ಶಿವಣ್ಣ, ಶಂಭೈನೂರು ಆನಂದಪ್ಪ, ಹಿರೇಕಾನವಂಗಲ ಕುಮಾರ್,.ಜಿ.ಸಿ. ಶರತ್, ಬಿ.ಬಿ. ರವಿಕುಮಾರ್, ಟಿ,ಆರ್.ಶ್ರೀಧರ್, ಟಿ.ಎಂ. ರಾಜು, ಅದಿಲ್ ಪಾಷ, ಎ.ಎಸ್. ಸಾಯಿಕುಮಾರ್, ಅನೇಕ ಮುಖಂಡರು ಭಾಗವಹಿಸಿದ್ದರು.

12ಕೆಟಿಆರ್.ಕೆ.5ಃ

ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತರೀಕೆರೆ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ನಿಲ್ದಾಣದಲ್ಲಿ ಸಾರ್ವಜನಿಕರಿಂದ, ಮುಖಂಡರಿಂದ ಮತ್ತು ಸಂಘ ಸಂಸ್ಥೆಗಳಿಂದ ಮನವಿ ಸ್ವೀಕರಿಸಿದರು.