ಸೋಮಪ್ಪ ಸುವರ್ಣ 13ನೇ ವರ್ಷದ ಸಂಸ್ಮರಣೆ, ಸಾಧಕರಿಗೆ ಪ್ರಶಸ್ತಿ ಪ್ರಧಾನ

| Published : Jan 29 2025, 01:31 AM IST

ಸೋಮಪ್ಪ ಸುವರ್ಣ 13ನೇ ವರ್ಷದ ಸಂಸ್ಮರಣೆ, ಸಾಧಕರಿಗೆ ಪ್ರಶಸ್ತಿ ಪ್ರಧಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ 2025ನೇ ಸಾಲಿನ ಕೃಷಿ, ಶಿಕ್ಷಣ, ಸಾಮಜಿಕ ಕ್ಷೇತ್ರದ ಸಾಧಕರಾದ ಆಂಡ್ರ್ಯೂ ಡಿಸೋಜಾ (ಶಿಕ್ಷಣ ಕ್ಷೇತ್ರ), ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಫೋರ್ಟ್ ಕ್ಲಬ್ ಅಧ್ಯಕ್ಷ ದೀಪಕ್ ಸುವರ್ಣ ಹಾಗೂ ಸದಸ್ಯರು (ಸಮಾಜ ಸೇವೆ) ಮತ್ತು ಸುಧಾಕರ ಸಾಲ್ಯಾನ್ (ಕೃಷಿ ಕ್ಷೇತ್ರ) ಅವರಿಗೆ ಸಾಧಕರ ನೆಲೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ ಟ

ನೇರ ನಡೆ, ನುಡಿಯನ್ನು ಹೊಂದಿದ್ದಂತಹ ಮಾಜಿ ಶಾಸಕ ಕೆ. ಸೋಮಪ್ಪ ಸುವರ್ಣರು ತಮ್ಮ ಅವಧಿಯಲ್ಲಿ ಮೂಡುಬಿದಿರೆ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ. ಶಿಕ್ಷಕರಾಗಿದ್ದ ಅವರು ಕೃಷಿ ಕ್ಷೇತ್ರದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ಮೂಲ್ಕಿಯಲ್ಲಿ ನಾರಾಯಣ ಗುರು ಶಿಕ್ಷಣ ಸಂಸ್ಥೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ಹೇಳಿದರು. ಕೆ. ಸೋಮಪ್ಪ ಸುವರ್ಣ ನೆರಳು- ನೆಂಪು ಸಮಿತಿ ಮೂಲ್ಕಿ ವತಿಯಿಂದ ಹಳೆಯಂಗಡಿಯ ಹರಿ ಓಂ ಕಮ್ಯೂನಿಟಿ ಹಾಲ್‌ನಲ್ಲಿ ಜರುಗಿದ ಪ್ರಗತಿಪರ ಕೃಷಿಕ ,ಶಿಕ್ಷಣ ತಜ್ಞ, ಸಾಮಾಜಿಕ ನೇತಾರ ಕೆ. ಸೋಮಪ್ಪ ಸುವರ್ಣರ 13ನೇ ವರ್ಷದ ಸಂಸ್ಮರಣೆ ಹಾಗೂ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು. ಕಾರ್ಯಕ್ರಮದಲ್ಲಿ 2025ನೇ ಸಾಲಿನ ಕೃಷಿ, ಶಿಕ್ಷಣ, ಸಾಮಜಿಕ ಕ್ಷೇತ್ರದ ಸಾಧಕರಾದ ಆಂಡ್ರ್ಯೂ ಡಿಸೋಜಾ (ಶಿಕ್ಷಣ ಕ್ಷೇತ್ರ), ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಫೋರ್ಟ್ ಕ್ಲಬ್ ಅಧ್ಯಕ್ಷ ದೀಪಕ್ ಸುವರ್ಣ ಹಾಗೂ ಸದಸ್ಯರು (ಸಮಾಜ ಸೇವೆ) ಮತ್ತು ಸುಧಾಕರ ಸಾಲ್ಯಾನ್ (ಕೃಷಿ ಕ್ಷೇತ್ರ) ಅವರಿಗೆ ಸಾಧಕರ ನೆಲೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದರು. ಸಮಿತಿಯ ಸದಸ್ಯರಾದ ಕೆ. ಮುರಳಿಧರ ಭಂಡಾರಿ ಕುಬೆವೂರು, ಡಾ. ಗಣೇಶ್ ಅಮೀನ್ ಸಂಕಮಾರ್, ಜೊಸ್ಸಿ ಪಿಂಟೋ , ಪ್ರಮೋದ್ ಕುಮಾರ್ ಕಿನ್ನಿಗೋಳಿ, ವಾಮನ್ ಕೋಟ್ಯಾನ್, ಶಶೀಂದ್ರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ನಿರಂಜಲ ಪ್ರಾರ್ಥಿಸಿದರು. ದಿ. ಸೋಮಪ್ಪ ಸುವರ್ಣರ ಪುತ್ರ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಜೊಸ್ಸಿ ಪಿಂಟೊ ಸನ್ಮಾನ ಪತ್ರ ವಾಚಿಸಿದರು. ಚಂದ್ರಶೇಖರ ಸುವರ್ಣ ವಂದಿಸಿದರು. ವಿಜಯ ಕುಮಾರ್‌ ಕುಬೆವೂರು ನಿರೂಪಿಸಿದರು.