ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡು
ವೀರಶೈವ ಲಿಂಗಾಯತ ಎಂಬುದು ಬೇರೆಯಲ್ಲ ಎರಡಡೂ ಒಂದೇ. ೨೦೧೭ರಿಂದ ಈಚೆಗೆ ಈ ರೀತಿಯ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿರುವುದು ಗಣನೀಯವಾಗಿದ್ದು, ವೀರಶೈವ ಲಿಂಗಾಯಿತ ಧರ್ಮದ ಒಗ್ಗಟ್ಟನ್ನು ಒಡೆಯುವಲ್ಲಿ ಕೆಲವರು ಮಠಾಧೀಶರು ಬೇರೆಬೇರೆ ಅರ್ಥ ತರುವುದು ಬೇಸರದ ಸಂಗತಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯಾಧ್ಯಕ್ಷರಾದ ಶಂಕರ ಮಹದೇವ ಬಿದರಿ ತಿಳಿಸಿದರು.ಇಲ್ಲಿನ ಪುಷ್ಪಗಿರಿ ಬೆಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲೂ ಎಲ್ಲರೂ ನಡೆದರೆ ವೀರಶೈವ ಲಿಂಗಾಯತ ಧರ್ಮ ಮತ್ತಷ್ಟು ಗಟ್ಟಿಯಾಗಿ ಕಟ್ಟಬಹುದು.
ಬಸವ ತತ್ವ ಪ್ರಚಾರ ಪ್ರತಿಯೊಬ್ಬರ ಹಕ್ಕು:ಬಸವ ತತ್ವ ಬಸವ ಸಂಸ್ಕಾರ ಇಷ್ಟಲಿಂಗ ಪೂಜೆ ಎಲ್ಲವೂ ಕೂಡ ಬಸವ ತತ್ವದ ಅಡಿಯಲ್ಲೇ ಬರುತ್ತದೆ. ಇದನ್ನು ಪ್ರಚಾರ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಅದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಕೂಡ ಇಲ್ಲ. ಹಾಗೆ ಬಸವ ತತ್ವದಲ್ಲಿ ಯಾವುದು ಭಿನ್ನಾಭಿಪ್ರಾಯಗಳು ಇಲ್ಲ ಬಸವ ತತ್ವ ವೀರಶೈವ ಸಮಾಜ ಬೆಳೆಸಲು ಒಂದು ಆಯುಧ ವಿದ್ದಂತೆ ಅದನ್ನ ಮಾಡುವುದು ಪ್ರತಿಯೊಬ್ಬ ವೀರಶೈವ ಲಿಂಗಾಯತರ ಕರ್ತವ್ಯವಾಗಿದೆ ಎಂದು ಹೇಳಿದರು.
ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ, ಮೈಸೂರು ವಿಭಾಗ ಮಟ್ಟದ ಕಾರ್ಯಗಾರದ ಮುಖ್ಯ ಉದ್ದೇಶದಲ್ಲಿ ವೀರಶೈವ ಲಿಂಗಾಯತ ಧರ್ಮವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಜಾಗೃತಿ ಮತ್ತು ಅನುಷ್ಠಾನದ ಗುರಿಯಾಗಿದ್ದು ಅದರಲ್ಲಿ ನಾವು ಸಂಪನ್ನರಾಗಿದ್ದೇವೆ ಈ ಒಂದು ಕಾರ್ಯಗಾರಕ್ಕೆ ಶ್ರಮಿಸಿದ ಎಲ್ಲ ವೀರಶೈವ ಲಿಂಗಾಯತ ಸಮಾಜ ಬಾಂಧವರಿಗೂ ಮುಖಂಡರಿಗೂ ಕೃತಜ್ಞತೆ ಮತ್ತು ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ತಿಳಿಸಿದರು.ಹಾಸನ ಜಿಲ್ಲೆಯ ಮಹಾಸಭಾ ಅಧ್ಯಕ್ಷರಾದ ಪರಮೇಶ್ ನವಿಲೆ ಮಾತನಾಡುತ್ತ, ನಮ್ಮ ಜಿಲ್ಲೆಯಲ್ಲಿ ಪ್ರಸ್ತುತ ೮೦೦೦ ವೀರಶೈವ ಲಿಂಗಾಯತ ಸದಸ್ಯತ್ವ ಹೊಂದಿದ್ದು ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ೧ ಲಕ್ಷ ಸದಸ್ಯತ್ವ ಅಭಿಯಾನವನ್ನು ಕೈಗೊಂಡಿದ್ದು ಅದನ್ನು ಪೂರ್ಣಗೊಳಿಸುವೆ ಎಂದು ತಿಳಿಸಿದರು.
ಈ ವೇದಿಕೆ ಮೇಲೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಹಾಸನ ಜಿಲ್ಲೆಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗೌರವಾಧ್ಯಕ್ಷರಾದ ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಪುಷ್ಪಗಿರಿ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್, ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷರಾದ ವೀಣಾ ಕಾಶಪ್ಪನವರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಚಂದ್ರಮತಿ, ತಾಲೂಕು ಅಧ್ಯಕ್ಷ ಬಸವರಾಜು, ಮಹಾಸಭಾ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ರಾಜ್ಯ ನಿರ್ದೇಶಕ ಚೇತನ್ ಗೆಂಡೆಹಳ್ಳಿ, ತಾ.ಮ. ಘ. ಅಧ್ಯಕ್ಷೆ ವಿಂಪು ಸಂತೋಷ್, ಯುವ ಘ. ಅಧ್ಯಕ್ಷ ಚೇತನ್, ಕಾಫಿ ಬೆಳಗಾದ ಸಂಘದ ಅಧ್ಯಕ್ಷ ಅದ್ಧೂರಿ ಚೇತನ್ ಕುಮಾರ್, ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಮಿತಿಯ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಇದ್ದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯಗಳು: ೧. ರಾಜ್ಯದಲ್ಲಿ ಪೂರ್ಣ ರಚನೆಯಾಗದೆ ಉಳಿದಿರುವ ಘಟಕಗಳ ಶೀಘ್ರವಾಗಿ ರಚನೆ ಮಾಡುವುದು .೨. ಮುಂಬರುವ ಜಾತಿಗಣತಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಹಾಗೂ ರಾಜ್ಯ ಘಟಕಗಳು ತೆಗೆದುಕೊಳ್ಳುವ ನಿರ್ಣಯಕ್ಕೆ ಎಲ್ಲರೂ ಎಲ್ಲಾ ಬಂದವರು ಬದ್ಧರಾಗಿರುವುದು.೩. ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ವೀರಶೈವ ಲಿಂಗಾಯತ ಸಮಾಜದ ಬಾಂಧವರಿಗೆ ಅರ್ಹರಿಗೆ ದೊರೆಯುವಂತೆ ಕಾರ್ಯಕ್ರಮವನ್ನು ರೂಪಿಸುವುದು.
೪. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವೀರಶೈವ ಲಿಂಗಾಯತ ಬಾಂಧವರಿಗೆ ಹೆಚ್ಚಿನ ಅವಕಾಶವನ್ನು ನೀಡಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಮಹಾಸಭಾ ಒತ್ತಾಯಿಸಬೇಕು .೫ ಸಮಸ್ತ ವೀರಶೈವ ಲಿಂಗಾಯತರೆಲ್ಲರೂ ಒಂದೇ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.