ಮಣಿಪಾಲ್ ಎಜುಕೇಷನಲ್ ಅಸೋಸಿಯೇಷನ್‌ನ ಶ್ರೀ ಸೋಮೇಶ್ವರ ವಿದ್ಯಾಲಯದ ಹಾಗೂ ವಿದ್ಯಾಸಂಸ್ಥೆಯ ವಿವಿಧ ಸಂಸ್ಥೆಗಳಡಿ ಜ.3 ಮತ್ತು 4ರಂದು ದಾವಣಗೆರೆ ಶ್ರೀ ಸೋಮೇಶ್ವರ ವಿದ್ಯಾಲಯ ಹಾಗೂ ಜ.11 ಮತ್ತು 12ರಂದು ತಾಲೂಕಿನ ಗೋಣಿವಾಡ ಗ್ರಾಮದ ಶ್ರೀ ಸೋಮೇಶ್ವರ ವಸತಿಯುತ ಶಾಲೆಯಲ್ಲಿ ಸೋಮೇಶ್ವರ-2026 ನಡೆಯಲಿದೆ ಎಂದು ಶಾಲೆಯ ಪ್ರಾಚಾರ್ಯರಾದ ಎನ್.ಪ್ರಭಾವತಿ ತಿಳಿಸಿದರು.

ದಾವಣಗೆರೆ: ಮಣಿಪಾಲ್ ಎಜುಕೇಷನಲ್ ಅಸೋಸಿಯೇಷನ್‌ನ ಶ್ರೀ ಸೋಮೇಶ್ವರ ವಿದ್ಯಾಲಯದ ಹಾಗೂ ವಿದ್ಯಾಸಂಸ್ಥೆಯ ವಿವಿಧ ಸಂಸ್ಥೆಗಳಡಿ ಜ.3 ಮತ್ತು 4ರಂದು ದಾವಣಗೆರೆ ಶ್ರೀ ಸೋಮೇಶ್ವರ ವಿದ್ಯಾಲಯ ಹಾಗೂ ಜ.11 ಮತ್ತು 12ರಂದು ತಾಲೂಕಿನ ಗೋಣಿವಾಡ ಗ್ರಾಮದ ಶ್ರೀ ಸೋಮೇಶ್ವರ ವಸತಿಯುತ ಶಾಲೆಯಲ್ಲಿ ಸೋಮೇಶ್ವರ-2026 ನಡೆಯಲಿದೆ ಎಂದು ಶಾಲೆಯ ಪ್ರಾಚಾರ್ಯರಾದ ಎನ್.ಪ್ರಭಾವತಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ರಸ್ತೆಯ ಶ್ರೀ ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಜ.3ರಂದು ಸಂಜೆ 5.45ಕ್ಕೆ ಗಜೇಂದ್ರಗಡದ ಸಹ ಪ್ರಾಧ್ಯಾಪಕ ಕೆ.ಸಿದ್ದೇಶ್ವರ ಸೋಮೇಶ್ವರೋತ್ಸವ ಉದ್ಘಾಟಿಸುವರು. ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ, ಹವ್ಯಾಸಿ ಗಾಯಕಿ ಶ್ರೀದೇವಿ ಸಿದ್ದೇಶ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಸಂಸ್ಥೆ ಅಧ್ಯಕ್ಷ ಎಚ್.ಆರ್.ಅಶೋಕ ರೆಡ್ಡಿ ಅಧ್ಯಕ್ಷತೆ ವಹಿಸುವರು. ಮಕ್ಕಳ ಪಾಲಕರಾದ ಪಾಲಿಕೆ ಕಚೇರಿಯ ಡಿ.ಜಿ.ಉಮಾ, ಶಿಕ್ಷಕಿ ಎಸ್.ಹನುಮಕ್ಕ ಉಪಸ್ಥಿತರಿರುತ್ತಾರೆ ಎಂದರು.

ಜ.3ರ ಸಂಜೆ 5.45ಕ್ಕೆ ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸೋಮೇಶ್ವರೋತ್ಸವ-2026 ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಮೈಸೂರಿನ ವಿವೇಕವಂಶಿ ಫೌಂಡೇಷನ್ ಸ್ಥಾಪಕ ಎಸ್.ಬಿ.ನಿತ್ಯಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಟಿ.ಎಂ.ಪತ್ರೇಶ್‌ರಿಗೆ ಸೋಮೇಶ್ವರ ಶಿಕ್ಷಣ ಸಿರಿ ಪ್ರಶಸ್ತಿ ಪ್ರದಾನ, ಪಾಲಿಕೆ ಮಾಜಿ ಸದಸ್ಯ ಸವಿತಾ ಹುಲ್ಮನಿ ಗಣೇಶ್‌ರಿಗೆ ಸೋಮೇಶ್ವರ ಸಿರಿ ಗೌರವ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು.

10ನೇ ತರಗತಿ ಪರೀಕ್ಷೆಯ ರಾಜ್ಯ ಪಠ್ಯಕ್ರಮದಲ್ಲಿ ಶೇ.99.5 ಅಂಕ ಪಡೆದ ಕೆಎಸ್‌.ಶಾಲಿನಿ, ಕೇಂದ್ರ ಪಠ್ಯಕ್ರಮದಲ್ಲಿ ಶೇ.92 ಅಂಕ ಪಡೆದ ಆರ್.ಎನ್.ದೀಕ್ಷಾ ಈರ್ವರಿಗೂ ಸೋಮೇಶ್ವರ ಸಾಧನ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎರಡೂ ದಿನಗಳ ಸಂಗೀತ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.

ದಾವಣಗೆರೆ ತಾ.ಗೋಣಿವಾಡ ಗ್ರಾಮದ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯದಲ್ಲಿ ಜ.11ರಂದು ಸಂಜೆ 5.45ಕ್ಕೆ ಸೋಮೇಶ್ವರೋತ್ಸವ ಕಾರ್ಯಕ್ರಮ ಉದ್ಘಾಟನೆ ಹಾಗೂ ಸಂಗೀತೋತ್ಸವ ನಡೆಯಲಿದೆ. ಹಿರಿಯ ವಾಗ್ಮಿ ಮೈಸೂರಿನ ಪ್ರೊ.ಎಂ.ಕೃಷ್ಣೇಗೌಡ ಸಮಾರಂಭ ಉದ್ಘಾಟಿಸಲಿದ್ದು, ಸಾಮಾಜಿಕ ಕಾರ್ಯಕರ್ತ ಕಾಂತರಾಜ, ಡಾ.ವಿನೋದ, ಗಾಯಕರಾದ ಎಂ.ಡಿ.ಪಲ್ಲವಿ, ವಾಸುಕಿ ವೈಭವ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ದಾವಣಗೆರೆ ಪುಷ್ಪಗಿರಿ ಡಯೋಗ್ನಸ್ಟಿಕ್ ಸೆಂಟರ್‌ನ ಡಾ.ಜಿ.ಚಂದನ್‌ರಿಗೆ ಶ್ರೀ ಸೋಮೇಶ್ವರ ಸಿರಿ ಗೌರವ ಪುರಸ್ಕಾರ ಪ್ರದಾನ ಮಾಡಲಾಗುವುದು. ಪಾಲಕರಾದ ಬ್ಯಾಡಗಿಯ ಸ್ವಪ್ನ ಸುಭಾಷ್, ಕತ್ತಲಗೆರೆ ಬಿ.ಕೆ.ರಶ್ಮಿ ಉಪಸ್ಥಿತರಿರುತ್ತಾರೆ. ಸಂಸ್ಥೆ ಅಧ್ಯಕ್ಷ ಎಚ್.ಆರ್‌.ಅಶೋಕ ರೆಡ್ಡಿ ಅಧ್ಯಕ್ಷತೆ ವಹಿಸುವರು. ನಂತರ ಎಂ.ಡಿ.ಪಲ್ಲವಿ, ವಾಸುಕಿ ವೈಭವ್‌ರಿಂದ ಸಂಗೀತ ಸಂಜೆ ನಡೆಯಲಿದೆ ಎಂದರು.

ಜ.12ರ ಸಂಜೆ 5.45ಕ್ಕೆ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಸಾಶಿಇ ಉಪ ನಿರ್ದೇಶಕ ಕೊಟ್ರೇಶ್‌, ಕೂಡ್ಲಿಗಿಯ ಗಿಡಮರ ಆಧಾರಿತ ಕೃಷಿಕ ಹುಲಿಕೆರೆ ವಿಶ್ವೇಶ್ವರ ಸಜ್ಜನ್‌, ಹರಿಹರದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಪೂಜಾರ್, ನ್ಯಾಷನಲ್ ಕಾನ್ವೆಂಟ್ ಕಾರ್ಯದರ್ಶಿ ಸಹನಾ ರವಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪಾಲಕರಾದ ಹಾರೋಸಾಗರದ ಪಿ.ಸಿ.ಹಾಲಪ್ಪ, ಹೂವಿನ ಹಡಗಲಿ ಕೆ.ಸತೀಶ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ಸೋಮೇಶ್ವರ ಸಾಧನ ಸಿರಿ ಪ್ರಶಸ್ತಿಯನ್ನು 10ನೇ ತರಗತಿಯಲ್ಲಿ 622 ಅಂಕ ಪಡೆದ ಕೆ.ಬಿ.ಪ್ರತೀಕ್ಷಾ, ಪಿ.ಎ.ಲಕ್ಷ್ಮಿ, ಕೇಂದ್ರ ಪಠ್ಯ ಕ್ರಮದಲ್ಲಿ ಶೇ.95.60 ಅಂಕ ಪಡೆದ ಎಚ್.ಕೆ.ರುದ್ರಶಂಕರಗೆ ಪ್ರದಾನ ಮಾಡಲಾಗುವುದು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ. ಸಂಸ್ಥೆಯ ಶಾಲೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 38 ಮಕ್ಕಳಿಗೆ ತಲಾ 5 ಸಾವಿರ ರು., ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ 24 ಸಾವಿರ ರು. ನಗದು ಪ್ರೋತ್ಸಾಹ ನೀಡಲಾಗುವುದು ಎಂದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಜಿ.ಗಾಯತ್ರಿ, ಪಿ.ಮಾಲಾ, ಆಡಳಿತಾಧಿಕಾರಿ ಎನ್.ಆರ್.ಹರೀಶ ಬಾಬು ಇತರರು ಇದ್ದರು.