ಸೋಮವಾರಪೇಟೆ: ಐಗೂರು-ಕಿರಗಂದೂರು ರಸ್ತೆಗೆ ಭೂಮಿ ಪೂಜೆ

| Published : Sep 03 2025, 01:02 AM IST

ಸಾರಾಂಶ

ಆಯ್ದ ಕಡೆಗಳಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ಮಂತರ್‌ಗೌಡ ಚಾಲನೆ ನೀಡಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

1.50 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಐಗೂರು-ಕಿರಗಂದೂರು ಹಾಗೂ ಕಿರಗಂದೂರು-ಹರಗ ಸಂಪರ್ಕ ರಸ್ತೆ ಆಯ್ದ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಅವರು ಚಾಲನೆ ನೀಡಿದರು.ಐಗೂರು ಗ್ರಾಮದಿಂದ ಕಿರಗಂದೂರು ಸಂಪರ್ಕಿಸುವ ರಸ್ತೆಯ ಆಯ್ದ ಭಾಗದಲ್ಲಿ ರು.. 1 ಕೋಟಿ ಹಾಗೂ ಕಿರಗಂದೂರು ಗ್ರಾಮದಿಂದ ಹರಗ ಸಂಪರ್ಕಿಸುವ ರಸ್ತೆಯ ಆಯ್ದ ಭಾಗದಲ್ಲಿ ರು.. 50 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.ಕಳೆದ ಹಲವು ತಿಂಗಳ ಹಿಂದೆಯೇ ರಸ್ತೆ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ಮೇ ಕೊನೆಯ ವಾರದಲ್ಲಿಯೇ ಭಾರೀ ಮಳೆಯಾದ್ದರಿಂದ ಭೂಮಿ ಪೂಜೆ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಮಳೆ ಕಡಿಮೆಯಾಗುತ್ತಿರುವುದರಿಂದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ಈ ಸಂದರ್ಭ ಗ್ರಾಮದ ಪ್ರಮುಖರಾದ ಎಸ್.ಎಂ. ಚಂಗಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಬಿ. ಸತೀಶ್, ತಾಲೂಕು ಕೆಡಿಪಿ ಸಮಿತಿ ಸದಸ್ಯೆ ಸಬಿತಾ ಚನ್ನಕೇಶವ ಸೇರಿದಂತೆ ಇತರರು ಉಪಸ್ಥಿತರಿದ್ದರು.

------------------------------------------

ಯುವಕರಿಂದ ಶ್ರಮದಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ7ನೇ ಹೊಸಕೋಟೆಯ ಅಂದಗೋವೆ ಪೈಸಾರಿ ಹಾಗೂ ಕಲ್ಲೂರು ಗ್ರಾಮಕ್ಕೆ ತೆರಳುವ ರಸ್ತೆಯು ಗುಂಡಿ ಬಿದ್ದಿದ್ದು ಶ್ರೀ ಚಾಮುಂಡೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ ಯುವಕರು ಶ್ರಮದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಚಾಮುಂಡೇಶ್ವರಿ ಯುವಕರ ಸೇವಾ ಸಮಿತಿಯ ಪದಾಧಿಕಾರಿಗಳಾದ ವಿಶ್ವ, ಪ್ರತಾಪ್, ಶ್ಯಾಮ್ ನವೀನ್ ತಂಡದವರು ಈ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸವಾರರು ಹಾಗೂ ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ತೆರಳುವುದು ಬಹಳ ಕಷ್ಟ ಸಾಧ್ಯವಾಗಿರುವುದನ್ನು ಮನಗಂಡರು. ಈ ಹಿನ್ನೆಲೆ ಚಾಮುಂಡೇಶ್ವರಿ ಯುವಕರ ಸೇವಾ ಸಮಿತಿಯವರು ರಸ್ತೆಯಲ್ಲಿರುವ ಗುಂಡಿ ಮುಚ್ಚುವ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಮಿತಿ ಪದಾಧಿಕಾರಿ ನವೀನ್ ತಿಳಿಸಿದರು.