ಸೋಮವಾರಪೇಟೆ-ಧರ್ಮಸ್ಥಳ ಬೃಹತ್‌ ವಾಹನ ಜಾಥಾ

| Published : Sep 01 2025, 01:04 AM IST

ಸಾರಾಂಶ

ಸೋಮವಾರಪೇಟೆಯಿಂದ ಧರ್ಮಸ್ಥಳದವರೆಗೆ ಬೃಹತ್‌ ವಾಹನ ಜಾಥಾ ನಡೆಸಲಾಯಿತು. 500ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರಪೇಟೆಯಿಂದ ಧರ್ಮಸ್ಥಳದವರೆಗೆ ಬೃಹತ್‌ ವಾಹನ ಜಾಥಾ ನಡೆಸಲಾಯಿತು.

ಪಟ್ಟಣದ ಶ್ರೀಮುತ್ತಪ್ಪಸ್ವಾಮಿ ದೇವಾಲಯದ ಮುಂಭಾಗದಿಂದ ಜಾಥಾಗೆ ಚಾಲನೆ ನೀಡಲಾಯಿತು. ಜಾಥಾ ಶನಿವಾರಸಂತೆ, ಕೊಡ್ಲಿಪೇಟೆ, ಶುಕ್ರವಾರಸಂತೆ, ದೋಣಿಗಲ್ಲು, ಗುಂಡ್ಯ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಧರ್ಮಸ್ಥಳ ತಲುಪಿತು.

ಸುಮಾರು 150 ವಾಹನಗಳಲ್ಲಿ 500ಕ್ಕೂ ಹೆಚ್ಚು ಭಕ್ತರು ವಾಹನ ಜಾಥಾದಲ್ಲಿ ಪಾಲ್ಗೊಂಡು, ಬಳಿಕ ಧರ್ಮಸ್ಥಳದ ದೇವಾಲಯ ಆವರಣಕ್ಕೆ ಮೆರವಣಿಗೆ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆದರು. ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂದರ್ಭ ತಾಲೂಕು ಸಂಚಾಲಕ ಸುಭಾಷ್‌ ತಿಮ್ಮಯ್ಯ, ಹಿರಿಯ ವಕೀಲ ಬಿ.ಜೆ.ದೀಪಕ್‌, ಸಹ ಸಂಚಾಲಕ ಶಶಿಕಾಂತ್‌, ಸಮಿತಿ ಸದಸ್ಯರಾದ ಸುನಿಲ್‌ ಮಾದಾಪುರ, ಎಂ.ಬಿ.ಉಮೇಶ್‌ ಉಪಸ್ಥಿತರಿದ್ದರು.