ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕ ಅಧ್ಯಕ್ಷರಾಗಿ ಎಚ್. ಆರ್. ಹರೀಶ್ ಕುಮಾರ್

| Published : Sep 03 2024, 01:38 AM IST

ಸಾರಾಂಶ

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌. ಎ. ಮುರಳೀಧರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚಿಸಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕ ನೂತನ ರಚಿಸಲಾಗಿದ್ದು ಅಧ್ಯಕ್ಷರಾಗಿ ಕನ್ನಡಪ್ರಭ ವರದಿಗಾರ ಎಚ್. ಆರ್. ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಸೋಮವಾರಪೇಟೆ ತಾಲೂಕು ಪ್ರಜಾವಾಣಿ ವರದಿಗಾರ ಡಿ.ಪಿ. ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳಿಧರ್ ಅಧ್ಯಕ್ಷತೆಯಲ್ಲಿ ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ವಿಜಯಕರ್ನಾಟಕ ವರದಿಗಾರ ತೇಲಪಂಡ ಕವನ್ ಕಾರ್ಯಪ್ಪ, ಖಜಾಂಚಿಯಾಗಿ ಕೊಡಗು ಚಾನೆಲ್ ವರದಿಗಾರ ದುಷ್ಯಂತ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಶನಿವಾರಸಂತೆ ಕಾವೇರಿ ವೆಬ್ ಚಾನೆಲ್ ವರದಿಗಾರ ಹೋಮೇಶ್ ಮಣಗಲಿ ಆಯ್ಕೆಯಾದರು. ಜಯಪ್ಪ ಹಾನಗಲ್, ಟೋಮಿ ಥಾಮಸ್, ಎಸ್. ಆರ್. ವಸಂತ್, ಸುಕುಮಾರ್ ಆಯ್ಕೆಯಾದರು.

ಸಭೆಯಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು, ಪ್ರಧಾನ ಕಾರ್ಯದರ್ಶಿ ಎಂ.ಬಿ.ವಿನ್ಸೆಂಟ್, ಜಯಪ್ಪ ಹಾನಗಲ್, ಟೋಮಿ ಥಾಮಸ್, ಎಸ್. ಆರ್. ವಸಂತ್, ಸುಕುಮಾರ್ ಆಯ್ಕೆಯಾದರು.

-------------------

ಹೊಟೇಲ್‌ಗಳ ಪರಿಶೀಲನೆ: 37 ಆಹಾರ ಉದ್ದಿಮೆದಾರರಿಗೆ ನೋಟೀಸ್

ಕನ್ನಡಪ್ರಭ ವಾರ್ತೆ ಮಡಿಕೇರಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಮತ್ತು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬೆಂಗಳೂರು ಅವರ ಸೂಚನೆ ಮೇರೆಗೆ ಎರಡು ದಿನಗಳ ಕಾಲ ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕೊಡಗು ಜಿಲ್ಲೆ ಅವರಿಂದ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ಈ ಆಂದೋಲನದಲ್ಲಿ ಜಿಲ್ಲೆಯಾದ್ಯಂತ ಹೊಟೇಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿಯ ವ್ಯಾಪಾರಿಗಳು ಕ್ಯಾಂಟೀನ್ ಮತ್ತಿತರ ಸುಮಾರು 54 ಘಟಕಗಳಿಗೆ ಭೇಟಿ ನೀಡಿ ಕಾಯ್ದೆಯಡಿ ಪರಿಶೀಲನೆ ನಡೆಸಿ ಆಹಾರ ಮಾದರಿಗಳನ್ನು ಸಂಗ್ರಹಿಸಲಾಯಿತು.

ಕಾಯ್ದೆ ಉಲಂಘನೆ ಸಂಬಂಧಿಸಿದಂತೆ ಸುಮಾರು 10 ಸಾವಿರ ದಂಡವನ್ನು ಮತ್ತು 37 ಆಹಾರ ಉದ್ದಿಮೆದಾರರಿಗೆ ನೋಟೀಸ್ ನೀಡಲಾಯಿತು. ಸಾರ್ವಜನಿಕರ ಹಿತದೃಪ್ಠಿಯಿಂದ ಶುಚಿತ್ವ ಕಾಪಾಡಿಕೊಂಡು ಶುದ್ಧವಾದ ಆಹಾರವನ್ನು ಗ್ರಾಹಕರಿಕೆ ನೀಡುವುದು, ಕಾಯ್ದೆಯ ಮಾನದಂಡಗಳಿಗೆ ಮೀರಿ ಕೃತಕ ಬಣ್ಣಗಳನ್ನು ಆಹಾರ ತಯಾರಿಕೆ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂಬ ಮಾಹಿತಿಯನ್ನು ಈ ಆಂದೋಲನದಲ್ಲಿ ಸೂಚಿಸಲಾಯಿತು.

ಆಯುಕ್ತರು (ಎಫ್.ಎಸ್.ಎಸ್.ಎ) ಅವರ ಸೂಚನೆಯಂತೆ ಸೋಮವಾರ ವಿಶೇಷವಾದ ಆಂದೋಲನವನ್ನು ಹಮ್ಮಿಕೊಂಡು ಜಿಲ್ಲೆಯಾದ್ಯಂತ ಮೊಟ್ಟೆ, ಕೋಳಿ, ಮಾಂಸ/ಮಾಂಸದ ಪದಾರ್ಥಗಳ ಸಂಗ್ರಹಕರು, ಮಾರಾಟಗಾರರು ಮತ್ತು ತಯಾರಿಕಾ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಪದಾರ್ಥಗಳನ್ನು ಸೂಕ್ತವಾದ ತಾಪಮಾನದಲ್ಲಿ ಸಂಗ್ರಹಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆಯೇ ಮತ್ತು ತ್ಯಾಜ್ಯ ವಸ್ತುಗಳ ಸೂಕ್ತ ನಿರ್ವಹಣೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಯಿತು.

ಹಳೆಯ ಮಾಂಸ/ಮಾಂಸದ ಪದಾರ್ಥಗಳನ್ನು ಕೆಡದಂತೆ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆಯೇ ಎಂಬ ಬಗ್ಗೆಯೂ ಪರಿಶೀಲನೆಯನ್ನು ನಡೆಸಿ ಸಂಶಯಾಸ್ಪದ 11 ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಯಿತು. ಈ ಆಂದೋಲನದಲ್ಲಿ ಕೊಡಗು ಜಿಲ್ಲೆಯ ಅಂಕಿತಾಧಿಕಾರಿ ಡಾ. ಅನಿಲ್ ಧಾವನ್ ಇ. ಮತ್ತು ಕೊಡಗು ಜಿಲ್ಲೆಯ ಹಿರಿಯ ಆಹಾರ ಸುರಕ್ಷತಾಧಿಕಾರಿ ಮಂಜುನಾಥ ಜೆ.ಎನ್. ಹಾಗೂ ವಿರಾಜಪೇಟೆ ತಾಲೂಕು ಆಹಾರ ಸುರಕ್ಷತಾಧಿಕಾರಿಯಾದ ನವೀನ್ ಕುಮಾರ್ ಕೆ.ಆರ್ ಅವರು ಭಾಗಿಯಾಗಿದ್ದರು.