ಸಾರಾಂಶ
ಸಂಜೆ 7 ಗಂಟೆಗೆ ನಡೆದ ಆಕರ್ಷಕ ಬೆಳ್ಳಿ ರಥೋತ್ಸವದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಭಟ್ಕಳ: ಇಲ್ಲಿನ ಸೋನಾರಕೇರಿಯಲ್ಲಿರುವ ದೈವಜ್ಞ ಬ್ರಾಹ್ಮಣರ ಗಣಪತಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು ಬೆಳ್ಳಿ ರಥೋತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ದೇವರಿಗೆ ಫಲ ಪಂಚಾಮೃತ ಅಭಿಷೇಕ, ಸುಹಾಸಿನಿಯರಿಂದ ಕುಂಕುಮಾರ್ಚನೆ, ಗಣೇಶ ಪೂಜಾ, ಹೋಮ, ರಥ ಶುದ್ಧಿ ಸಂಸ್ಕಾರ ಹವನ, ಮಹಾಪೂಜೆ, ದಂಡಬಲಿ, ಮಧ್ಯಾಹ್ನ ೧೨.೩೦ಕ್ಕೆ ದೇವರ ರಥಾರೋಹಣ, ರಥಕಾಣಿಕೆ ಸಮರ್ಪಣೆ, ಅನ್ನ ಸಂತರ್ಪಣೆ ನಡೆಯಿತು.ಸಂಜೆ 7 ಗಂಟೆಗೆ ನಡೆದ ಆಕರ್ಷಕ ಬೆಳ್ಳಿ ರಥೋತ್ಸವದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ರಾತ್ರಿ ಮೃಗಬೇಟೆ, ಅಷ್ಟಾವಧಾನ ಸೇವೆ ಮತ್ತು ಸಿಡಿಮದ್ದು ಪ್ರದರ್ಶನ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖರು, ಗಣಪತಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಪ್ರಮುಖರು ಇದ್ದರು.ಫೆ.೧೮ರಂದು ಗಣೇಶ ಪೂಜೆ, ಅಧಿವಾಸ ಪೂಜೆ ಹೋಮ, ವಸಂತ ಪೂಜೆ, ಅವಭೃತ ಸ್ನಾನ, ಅವರೋಹಣ, ಮಹಾಪೂರ್ಣಾಹುತಿ, ಕುಂಭಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯವಾಗಲಿದೆ.