ಬೀರೂರಲ್ಲೂ ಶೀಘ್ರ ಇಂದಿರಾ ಕ್ಯಾಂಟೀನ್ : ಶಾಸಕ ಕೆ.ಎಸ್.ಆನಂದ್

| Published : Sep 10 2024, 01:35 AM IST

ಬೀರೂರಲ್ಲೂ ಶೀಘ್ರ ಇಂದಿರಾ ಕ್ಯಾಂಟೀನ್ : ಶಾಸಕ ಕೆ.ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಪಟ್ಟಣದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರ ರಸ್ತೆಯಲ್ಲಿ ಶೀಘ್ರವೇ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿ ಸದ್ಯದಲ್ಲಿಯೇ ಲೋಕಾರ್ಪಣೆಗೊಳಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ವಿವಿಧ ಕಾಮಗಾರಿಗಳಿಗೆ ಚಾಲನೆ: ಪಟ್ಟಣದ ಅಭಿವೃದ್ದಿಗೆ ಬದ್ದ

ಕನ್ನಡಪ್ರಭ ವಾರ್ತೆ ಬೀರೂರುಪಟ್ಟಣದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರ ರಸ್ತೆಯಲ್ಲಿ ಶೀಘ್ರವೇ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿ ಸದ್ಯದಲ್ಲಿಯೇ ಲೋಕಾರ್ಪಣೆಗೊಳಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದ ಶ್ರೀ ಕಿತ್ತೂರುರಾಣಿ ಚೆನ್ನಮ್ಮ ಆಟೋ ನಿಲ್ದಾಣ ಹಾಗೂ ವಿವಿಧ ಕಾಮಗಾರಿ ಗಳಿಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯ ಸರ್ಕಾರ ಮಧ್ಯಮ, ಬಡ ಹಾಗೂ ಶ್ರಮಿಕವರ್ಗದ ಜನರನ್ನು ಹಸಿವು ಮುಕ್ತ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಲೋಚಿಸಿ ಇಂದಿರಾ ಕ್ಯಾಂಟಿನ್ ಜಾರಿಗೆ ತಂದರು. ಅದು ಈಗ ತಾಲೂಕು ಮಟ್ಟದಿಂದ ಜನಸಂಖ್ಯಾನುಸಾರ ಹೋಬಳಿ ಮಟ್ಟಕ್ಕೂ ಸರ್ಕಾರ ಜಾರಿಗೊಳಿಸಿದ ಹಿನ್ನಲೆಯಲ್ಲಿ ಬೀರೂರಿನಲ್ಲು ಆರಂಭವಾಗಲಿದೆ.

ಕಳೆದ ತಿಂಗಳ ಹಿಂದಷ್ಟೆ ಪಶುಆಸ್ಪತ್ರೆ ಹಿಂಭಾಗದಲ್ಲಿನ ಪುರಸಭಾ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ತಿಳಿಸಿ, ಅಡಿಪಾಯ ಸಹ ಹಾಕಿಸಲಾಗಿತ್ತು. ಖಾಸಗಿ ವ್ಯಕ್ತಿಯೋರ್ವರು ಇದು ನಮ್ಮ ಜಾಗವೆಂದು ಕೋರ್ಟ ಮೆಟ್ಟಿಲೇರಿದ್ದರು. ಆದರೆ ಸದ್ಯ ಪ್ರಕರಣ ನ್ಯಾಯಾಲಯ ವಜಾಗೊಳಿಸಿದೆ. ಸದ್ಯದಲ್ಲೇ ಇಂದಿರಾ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಳ್ಳಲಿದ್ದು, ಉದ್ಘಾಟನೆ ಭಾಗ್ಯ ಕಾಣಲಿದೆ. ಇಲ್ಲಿಗೆ ಸಮೀಪವೇ ಆಟೋಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಬೀದಿ ವ್ಯಾಪಾರಿಗಳಿಗೆ ಮಧ್ಯಾಹ್ನ ಊಟಕ್ಕೆ ಅನುಕೂಲವಾಗಲಿದೆ ಎಂದರು.ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು, ಆಟೋ ಮಾಲೀಕರು-ಚಾಲಕರು ಸುಡು ಬಿಸಿಲು, ಮಳೆಯಿಂದ ತಮ್ಮ ವಾಹನಗಳನ್ನು ಸುರಕ್ಷಿತವಾಗಿ ನಿಲ್ಲಿಸಿಕೊಳ್ಳಲು ನಾನು ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬಂದಾಗ ಮನವಿ ಮಾಡಿದ್ದರು. ಅದರಂತೆ ಆಟೋ ನಿಲ್ದಾಣದ ಮೇಲ್ಚಾವಣಿಗೆ 10ಲಕ್ಷ ರು. ಟ್ಯಾಕ್ಸಿ ನಿಲ್ದಾಣಕ್ಕೆ 14ಲಕ್ಷ, ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಕೂರಲು ನೆರಳಿನ ವ್ಯವಸ್ಥೆಗೆ 12ಲಕ್ಷ ಅನುದಾನ ಬಿಡುಗಡೆ ಮಾಡಿದ್ದು ಕಾಮಗಾರಿಗಳು ಶೀಘ್ರ ಆರಂಭವಾಗಲಿವೆ ಎಂದರು.ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಬಿ.ಆರ್.ರವಿಕುಮಾರ್, ಲೋಕೇಶಪ್ಪ, ಶ್ರೀನಿವಾಸ್, ಸದಾಶಿವ, ಸೋಮಪ್ಪ, ಅಶೋಕ್, ಉಪಾಧ್ಯಕ್ಷ ನಾಗೇಶ್, ಪಿಎಸೈ ಸಜಿತ್ ಕುಮಾರ್ ಸೇರಿದಂತೆ ಆಟೋ, ಟ್ಯಾಕ್ಸಿ ಚಾಲಕರು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.9 ಬೀರೂರು 3ಬೀರೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಶ್ರೀ ಕಿತ್ತೂರುರಾಣಿ ಚೆನ್ನಮ್ಮ ಆಟೋ ನಿಲ್ದಾಣ ಹಾಗೂ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು. ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಬಿ.ಆರ್.ರವಿಕುಮಾರ್, ಲೋಕೇಶಪ್ಪ, ಆಟೋ ನಿಲ್ದಾಣದ ಅಧ್ಯಕ್ಷ ಶ್ರೀನಿವಾಸ್ ಇತರರಿದ್ದರು.