ಸಾರಾಂಶ
ಕೊರಟಗೆರೆ: ಕ್ಯಾಮೇನಹಳ್ಳಿ ಗ್ರಾಪಂ ಅಧ್ಯಕ್ಷರ ಚುನಾವಣೆಯಲ್ಲಿ ಸೌಮ್ಯ.ಬಿ. ಜಗದೀಶ್ ಸರ್ವ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ತಹಸೀಲ್ದಾರ್ ಕೆ. ಮಂಜುನಾಥ್ ಘೋಷಣೆ ಮಾಡಿದರು.ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಪಂ ಎರಡನೇ ಅವಧಿಗೆ ಅಧ್ಯಕ್ಷರ ಚುನಾವಣೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು, ಅಧ್ಯಕ್ಷ ಸ್ಥಾನಕ್ಕೆ ಸೌಮ್ಯ.ಬಿ ಅವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಯಾರೂ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಸೌಮ್ಯ.ಬಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ನಾಗಮಣಿ ಅವರು ಮುಂದುವರಿಯಲಿದ್ದಾರೆ.ನೂತನ ಅಧ್ಯಕ್ಷೆ ಸೌಮ್ಯ ಜಗದೀಶ್ ಮಾತನಾಡಿ ನಮ್ಮ ಪಂಚಾಯಿತಿ ವ್ಯಕ್ತಿಗೆ ಬರುವ ಎಲ್ಲಾ ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ಅತಿ ಹೆಚ್ಚು ಮಹಿಳೆಯರೇ ಇರುವ ಈ ಪಂಚಾಯಿತಿಯಿಂದ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನನಗೆ ತುಂಬಾ ಸಂತೋಷವಾಗಿದೆ. ಗೃಹ ಸಚಿವರ ಆಶೀರ್ವಾದ, ಊರಿನ ಗ್ರಾಮಸ್ಥರು ಹಾಗೂ ಸರ್ವ ಸದಸ್ಯರ ಸಹಕಾರದಿಂದ ಗ್ರಾಮಗಳ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ ಎಂದು ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ನಾರಾಯಣ ಮಾತನಾಡಿ ನಮ್ಮ ಕ್ಯಾಮೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೌಮ್ಯ ಜಗದೀಶ್ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತೇವೆ. ಹಾಗೆಯೇ ನಮ್ಮ ನೆಚ್ಚಿನ ನಾಯಕರು ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರ ಸಹಕಾರದೊಂದಿಗೆ ಗ್ರಾಪಂಗೆ ಸೇರುವ ಎಲ್ಲ ಹಳ್ಳಿಗಳ ಅಭಿವೃದ್ಧಿಗೆ ಅತಿ ಹೆಚ್ಚು ಅನುದಾನಗಳನ್ನು ಹಾಕಿಸಿಕೊಂಡು ಗ್ರಾಮಗಳ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತೇವೆ ಎಂದರು. ಇದೆ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ್, ಗ್ರಾಪಂ ಪಿಡಿಒ ರವಿಕುಮಾರ್, ಮಾಜಿ ಅಧ್ಯಕ್ಷ ನಾಗರಾಜು, ಸದಸ್ಯರಾದ ಸಿದ್ದಗಂಗಮ್ಮ, ಹನುಮಂತರಾಜು, ಲಕ್ಷ್ಮಿನರಸಿಂಹಮೂರ್ತಿ, ಸೌಮ್ಯ, ರಾಮಕ್ಕ, ಸುನಂದ, ನಾಗಮಣಿ, ಅನುರಾಧ, ಪುಟ್ಟರಾಜು, ಹರೀಶ್‌ಕುಮಾರ್, ಶಿವಕುಮಾರ್, ಲಕ್ಷ್ಮೀಬಾಯಿ, ವೆಂಕಟಲಕ್ಷ್ಮಮ್ಮ, ರತ್ನಮ್ಮ ಮುಖಂಡರಾದ ಮೈಲಾರಪ್ಪ, ನಾರಾಯಣಪ್ಪ, ಬೈರೇಶ್, ಮಂಜುನಾಥ್, ಉಮಣ್ಣ, ನಾಗಭೂಷಣ್, ಕಾಳಿಚರಣ್ ಸೇರಿದಂತೆ ಇತರರು ಇದ್ದರು.