ದೇಶವನ್ನು ಪ್ರಧಾನಿ ಮೋದಿ ಅಭಿವೃದ್ಧಿಯತ್ತ ಮುನ್ನಡೆಸುತ್ತಿದ್ದಾರೆ, ಆದರೆ ಕೆಲವರು ಇದನ್ನು ಸಹಿಸದೆ ಕೇಂದ್ರ ಸರ್ಕಾರಕ್ಕೆ ಕಳಂಕ ತರುವ ನಿಟ್ಟಿನಲ್ಲಿ ನಿರಾಧಾರ ಹೋರಾಟಗಳನ್ನು ಮಾಡಿ ಜನರನ್ನು ದಿಕ್ಕು ತಪ್ಪಿಸುವುದರಲ್ಲಿ ತೊಡಗಿದ್ದಾರೆ, ಇದಕ್ಕೆ ಮತದಾರರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕೆಂದು ಕೋರಿದರು.

ಬಂಗಾರಪೇಟೆ: ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಕ್ಷೇತ್ರದಲ್ಲಿ ಎನ್‌ಡಿಯ ಅಭ್ಯರ್ಥಿಯಾಗಿರುವ ಕೆ.ಎಂ.ಸುರೇಶ್ ಪರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಮತ್ತು ಅವರ ತಂಡ ನಗರದಲ್ಲಿ ಮನೆ ಮನೆಗೂ ತೆರಳಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಬಿ.ವಿ.ಮಹೇಶ್ ಮತ್ತು ಅವರ ಬೆಂಬಲಿಗ ಯುವಕರ ತಂಡ ನಗರದಲ್ಲಿರುವ ಮತದಾರರನ್ನು ಸೆಳೆಯಲು ಕಾಲ್ನಡಿಗೆಯಲ್ಲಿ ಮನೆ ಮನೆಗೂ ತೆರಳಿ ಈ ಬಾರಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪದವೀಧರರ ಸಮಸ್ಯೆಗಳನ್ನು ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಲು ಎನ್‌ಡಿಎ ಅಭ್ಯರ್ಥಿಯಾಗಿರುವ ಕೆ.ಎಂ.ಸುರೇಶ್‌ ರವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಸರಳ- ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದು, ಇಂತಹ ವ್ಯಕ್ತಿಯ ಕೈಗೆ ಅಧಿಕಾರ ಹಸ್ತಾಂತರ ಮಾಡಿದರೆ ಶಿಕ್ಷಕರ ಹಾಗೂ ಎಲ್ಲಾ ಪದವೀಧರರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವ ವಿಶ್ವಾಸವಿದೆ ಎಂದರು.

ದೇಶವನ್ನು ಪ್ರಧಾನಿ ಮೋದಿ ಅಭಿವೃದ್ಧಿಯತ್ತ ಮುನ್ನಡೆಸುತ್ತಿದ್ದಾರೆ, ಆದರೆ ಕೆಲವರು ಇದನ್ನು ಸಹಿಸದೆ ಕೇಂದ್ರ ಸರ್ಕಾರಕ್ಕೆ ಕಳಂಕ ತರುವ ನಿಟ್ಟಿನಲ್ಲಿ ನಿರಾಧಾರ ಹೋರಾಟಗಳನ್ನು ಮಾಡಿ ಜನರನ್ನು ದಿಕ್ಕು ತಪ್ಪಿಸುವುದರಲ್ಲಿ ತೊಡಗಿದ್ದಾರೆ, ಇದಕ್ಕೆ ಮತದಾರರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕೆಂದು ಕೋರಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಬಡವರನ್ನು ಶೋಷಣೆ ಮಾಡುತ್ತಿದೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುತ್ತಿದೆ, ಸಮರ್ಥವಾಗಿ ಆಡಳಿತ ನಡೆಸಲಾಗದೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ರಾಜ್ಯದಲ್ಲಿ ಸುಭದ್ರ ಹಾಗೂ ದಕ್ಷ ಆಡಳಿತದ ಸರ್ಕಾರ ಬರಬೇಕಾದರೆ ಈ ಚುನಾವಣೆಯಿಂದಲೇ ಮತದಾರರು ಜಾಗೃತರಾಗಿ ಬದಲಾವಣೆಗಳನ್ನು ತರಬೇಕೆಂದು ಕೋರಿದರು.

ಬಿ.ವಿ.ಮಹೇಶ್‌ ರವರಿಗೆ ನಗರ ಅಧ್ಯಕ್ಷ ಬಿ.ಪಿ.ಮಹೇಶ್, ಅಮರ್, ಬಿಂಧೂ ಮಾದವ್ ಇತರರು ಸಾಥ್ ನೀಡಿದರು.