ಸಾರಾಂಶ
ಹುಬ್ಬಳ್ಳಿ:
ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನಪ್ರಿಯ ಸೌಥ್ ಇಂಡಿಯಾ ಶಾಪಿಂಗ್ ಮಾಲ್ ತನ್ನ 35ನೇ ಹಾಗೂ ರಾಜ್ಯದ ಮೊದಲ ಶೋ ರೂಂ ಅನ್ನು ನಗರದ ಗೋಕುಲ ರಸ್ತೆ ಬಳಿ ತೆರೆದಿದ್ದು, ಬುಧವಾರ ನಟಿ ರಚಿತಾ ರಾಮ್ ಲೋಕಾರ್ಪಣೆಗೊಳಿಸಿದರು.ಈ ವೇಳೆ ಮಾತನಾಡಿದ ಅವರು, ಸೌಥ್ ಇಂಡಿಯಾ ಶಾಪಿಂಗ್ ಮಾಲ್‌ನ ಭಾಗವಾಗಿದ್ದಕ್ಕೆ ಸಂತಸವಾಗಿದೆ. ಇಲ್ಲಿನ ಕಲೆಕ್ಷನ್‌ಗಳು ಸಾಂಪ್ರದಾಯಿಕ ರೇಷ್ಮೆಯಿಂದ ಆಧುನಿಕ ವಿನ್ಯಾಸ ಹೊಂದಿದ ಭಾರತೀಯ ಸಂಸ್ಕೃತಿಯ ಸೌಂದರ್ಯದ ನಿಜವಾದ ಸಂಭ್ರಮಾಚರಣೆಯ ಸಂಕೇತವಾಗಿದೆ. ಕಡಿಮೆ ದರದಲ್ಲಿ ಸಂಪೂರ್ಣ ಹೊಸ ಶ್ರೇಣಿಯ ವೈವಿಧ್ಯತೆಯನ್ನು ಸಂಯೋಜಿಸಿರುವುದರಿಂದ ಪ್ರಭಾವಿತಳಾಗಿದ್ದೇನೆ. ಪ್ರತಿಯೊಬ್ಬ ಗ್ರಾಹಕರು ತಮ್ಮ ಸ್ಟೈಲ್ ಅನ್ನು ರಾಜಿ ಮಾಡಿಕೊಳ್ಳದೆ ತಮಗಿಷ್ಟವಾದ ವಸ್ತ್ರಗಳನ್ನು ಪಡೆದುಕೊಳ್ಳಬಹುದಾದ ತಾಣ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಮೊದಲ ಶಾಪಿಂಗ್ ಮಾಲ್ ಇದಾಗಿರುವುದು ನನಗೆ ಖುಷಿಯಾಗಿದೆ. ನಾಲ್ವರು ಯುವಕರು ಸೇರಿ ಆರಂಭಿಸಿರುವುದು ಸಂತಸದ ಸಂಗತಿ. ಇನ್ನೂ ಹಲವರು ಶಾಪಿಂಗ್ ಮಾಲ್‌ಗಳನ್ನು ಕರ್ನಾಟಕದಲ್ಲಿ ಆರಂಭಿಸಲು ಉತ್ಸುಕರಾಗಿದ್ದಾರೆ. ದೀಪಾವಳಿ, ಮದುವೆ ಸೀಸನ್‌ಗೆ ಖರೀದಿಸಲು ದೊಡ್ಡ ಅಂಗಡಿ ಇದು. ಸಾವಿರಕ್ಕೂ ಹೆಚ್ಚು ರಿಯಾಯಿತಿ ನೀಡಲಾಗಿದೆ. ಗುಣಮಟ್ಟ, ಅಂದದ ಸೀರೆಗಳು ಇಲ್ಲಿವೆ. ಆಫರ್‌ಗಳು ಯಥೇಚ್ಛವಾಗಿವೆ. ಕೈಗೆಟಕುವ ದರಗಳು ಇಲ್ಲಿವೆ ಎಂದರು.ಶಾಪಿಂಗ್ ಮಾಲ್‌ನ ಅಧ್ಯಕ್ಷ, ನಿರ್ದೇಶಕ ಪೊಟ್ಟಿ ವೆಂಕಟೇಶ್ವರಲು ಮಾತನಾಡಿ, ನಮ್ಮ 35ನೇ ಶೋ ರೂಂನೊಂದಿಗೆ ಕರ್ನಾಟಕಕ್ಕೆ ಕಾಲಿಟ್ಟಿರುವುದು ಹೆಮ್ಮೆ ಮತ್ತು ಭಾವನಾತ್ಮಕ ಕ್ಷಣ ಇದಾಗಿದೆ. ಹುಬ್ಬಳ್ಳಿಯು ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಸೊಬಗನ್ನು ಸುಂದರವಾಗಿ ಪ್ರತಿಫಲಿಸುತ್ತದೆ. ನಮ್ಮ ಶಾಪ್‌ನಲ್ಲಿ ವಿಶಿಷ್ಟ ಶಾಪಿಂಗ್ ಅನುಭವವನ್ನು ಈ ಮೂಲಕ ಒದಗಿಸಲು ಸಂತಸವಾಗುತ್ತಿದೆ ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕ ಸೀರ್ನಾ ರಾಜಮೌಳಿ ಮಾತನಾಡಿ, ಈ ಪ್ರಮುಖ ಶೋರೂಂ ಹಬ್ಬ, ಮದುವೆ ಮತ್ತು ಕುಟುಂಬದೊಂದಿಗೆ ಶಾಪಿಂಗ್ ಮಾಡಲು ಖುಷಿಕೊಡುತ್ತದೆ. ಗುಣಮಟ್ಟ ಮತ್ತು ರಿಯಾಯಿತಿ ದರದಲ್ಲಿ ಉಡುಪುಗಳು ಲಭ್ಯ ಇವೆ ಎಂದರು.ಪೂರ್ಣಾವಧಿ ನಿರ್ದೇಶಕ ತಿರುವೀಧುಲ ಪ್ರಸಾದರಾವ್ ಮಾತನಾಡಿ, ನಮ್ಮ ಸಂಸ್ಕೃತಿ, ಸಂಪ್ರದಾಯದಿಂದ ಪಾಶ್ಚಿಮಾತ್ಯದ ವರೆಗೆ ಉಡುಪುಗಳ ಸಂಗ್ರಹ ಇಲ್ಲಿದೆ. ನಮ್ಮಲ್ಲಿ ಎಲ್ಲವೂ ಒಂದೇ ಸೂರಿನಡಿ ಲಭ್ಯವಾಗಲಿವೆ ಎಂದರು.