ದಕ್ಷಿಣ ಪಿನಾಕಿನಿ ನದಿ ಸೇತುವೆ ಉದ್ಘಾಟನೆ

| Published : Feb 10 2024, 01:50 AM IST

ಸಾರಾಂಶ

ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದಾಮೋದರ್ ನಗರ, ಹಾರೋಹಳ್ಳಿ ಬಳಿ 8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ದಕ್ಷಿಣ ಪಿನಾಕಿನಿ ನದಿ ಸೇತುವೆಯನ್ನು ಸಂಸದ ಬಿ.ಎನ್.ಬಚ್ಚೆಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದಾಮೋದರ್ ನಗರ, ಹಾರೋಹಳ್ಳಿ ಬಳಿ 8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ದಕ್ಷಿಣ ಪಿನಾಕಿನಿ ನದಿ ಸೇತುವೆಯನ್ನು ಸಂಸದ ಬಿ.ಎನ್.ಬಚ್ಚೆಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

ಬಳಿಕ ಸಂಸದ ಬಿ.ಎನ್.ಬಚ್ಚೇಗೌಡರು, ಸುಮಾರು 10 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಾಮಗಾರಿಗೆ ಶಾಸಕ ಶರತ್ ಶಾಸಕರಾದ ನಂತರ ಕಾಮಗಾರಿಗೆ ಉಂಟಾಗಿದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಸೇತುವೆ ನಿರ್ಮಾಣದಿಂದ ನೂರಾರು ವಿದ್ಯಾರ್ಥಿಗಳು, ಕಂಪನಿಗಳಿಗೆ ತೆರಳುವ ಕಾರ್ಮಿಕರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಮುತ್ಕೂರು, ದಾಮೋದರ್ ನಗರ, ಹಾರೋಹಳ್ಳಿ, ಅಜಗೊಂಡಹಳ್ಳಿ ಮೂಲಕ ರಾಜ್ಯ ಹೆದ್ದಾರಿ ೩೫ಕ್ಕೆ ಸಂಪರ್ಕ ಕಲ್ಪಿಸುವ ಹೊನ್ನಮ್ಮಚೆನ್ನಮ್ಮ ಕಟ್ಟೆ ಬಳಿ ದಕ್ಷಿಣ ಪಿನಾಕಿನಿ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿದೆ. ಈ ಮೂಲಕ ಮುತ್ಕೂರು ಸೇರಿದಂತೆ ಸುತ್ತಮುತ್ತಲಿನ ನಾಗರಿಕರು ವೈಟ್ ಫೀಲ್ಡ್‌ಗೆ ಸಂಚರಿಸಲು ಮುತ್ಸಂದ್ರ ಮೂಲಕ 10 ಕಿಮೀ ಸುತ್ತಾಡಿಕೊಂಡು ಹೋಗಬೇಕಿತ್ತು. ಆದರೆ ಈ ಸೇತುವೆ ನಿರ್ಮಾಣದಿಂದ ವಾಹನ ಸವಾರರಿಗೆ ಸುಮಾರು ಏಳೆಂಟು ಕಿಲೋ ಮೀಟರ್ ವ್ಯರ್ಥ ಪ್ರಯಾಣ ಉಳಿತಾಯ ಆಗಲಿದೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ರಾಜ್ಯ ರೆಡ್ಡಿ ಸಂಘದ ನಿರ್ದೇಶಕ ಎಂ.ಎ.ಕೃಷ್ಣಾರೆಡ್ಡಿ(ಕಿಟ್ಟಿ), ಎಸ್‌ಎಫ್‌ಸಿಎಸ್ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷ ಮುತ್ಕೂರು ಸಂತೋಷ್, ಮಾಜಿ ಎಪಿಎಂಸಿ ಅಧ್ಯಕ್ಷ ಹಾರೋಹಳ್ಳಿ ದೇವರಾಜ್, ಗ್ರಾಪಂ ಸದಸ್ಯ ಹಾರೋಹಳ್ಳಿ ಬಾಬು, ಮುಖಂಡರಾದ ಬೋಧನಹೊಸಹಳ್ಳಿ ಪ್ರಕಾಶ್, ಕೋಡಿಹಳ್ಳಿ ಸೊಣ್ಣಪ್ಪ, ಹಾರೋಹಳ್ಳಿ ಕೇಶವರೆಡ್ಡಿ, ಗುತ್ತಿಗೆದಾರ ನಂಜುಂಡಪ್ಪ, ಕೇಬಲ್ ರಮೇಶ್, ಬ್ಯಾಲಹಳ್ಳಿ ಶ್ರೀನಿವಾಸ್, ಹಾರೋಹಳ್ಳಿ ಕನಕರಾಜು ಹಾಜರಿದ್ದರು.

ಫೋಟೋ: 9 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕಿನ ಹಾರೋಹಳ್ಳಿಯಿಂದ ಮುತ್ಕೂರು ದಾಮೋದರ್ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಸಂಸದ ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.