ಮುಂಬರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ನಗರ ಪಾಲಿಕೆ, ಜಿಪಂ, ತಾಪಂ ಚುನಾವಣೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಯಾರಿಗೆ ಟಿಕೆಟ್ ನೀಡುತ್ತಾರೋ, ನಾವೆಲ್ಲರೂ ಸೇರಿ ಪಕ್ಷದ ಗೆಲುವಿಗಾಗಿ ಕಂಕಣಬದ್ಧರಾಗಿ ಕೆಲಸ ಮಾಡೋಣ ಎಂದು ಕಾಂಗ್ರೆಸ್ ಪಕ್ಷದ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಪಂ, ಜಿಪಂ, ಪಾಲಿಕೆ ಚುನಾವಣೆ ಹಾಗೂ ದಕ್ಷಿಣದ ವಿಧಾನಸಭೆ ಚುನಾವಣೆಯಲ್ಲಿ ಎಸ್ಸೆಸ್ ಮಲ್ಲಿಕಾರ್ಜುನ, ಡಾ. ಪ್ರಭಾ ಮಲ್ಲಿಕಾರ್ಜುನ್‌ ಯಾರಿಗೆ ಟಿಕೆಟ್ ನೀಡುತ್ತಾರೋ, ನಾವೆಲ್ಲರೂ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ನಿಸ್ವಾರ್ಥದಿಂದ ದುಡಿಯೋಣ ಎಂದರು.

ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಗೆಲುವೇ ನಮ್ಮ ಗುರಿಯಾಗಬೇಕು. ನಮ್ಮೆಲ್ಲರ ಹಿರಿಯ ನಾಯಕರಾಗಿದ್ದ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ಸಿನ ಅಬೇಧ್ಯ ಕೋಟೆಯಾಗಿ ದಕ್ಷಿಣ ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡು ಬಂದಿದ್ದರು. ಅಂತಹ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮ ಮೇಲಿದೆ. ಹಾಗಾಗಿ ಪಕ್ಷವು ಯಾರಿಗೆ ಟಿಕೆಟ್ ನೀಡಿದರೂ ಕಾಂಗ್ರೆಸ್ಸಿನ ಗೆಲುವೇ ನಮ್ಮ ಸಂಕಲ್ಪ, ಗುರಿಯಾಗಿರಲಿ ಎಂದು ಅವರು ತಿಳಿಸಿದರು.

ಮಹಾ ನಗರ ಪಾಲಿಕೆ, ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೀಸಲಾತಿ ಕ್ಷೇತ್ರಗಳಲ್ಲಿ ಪಕ್ಷಕ್ಕಾಗಿ ದುಡಿದಂತಹ ಕಾರ್ಯಕರ್ತರನ್ನು ಗುರುತಿಸಿ, ನಾವು ಪಟ್ಟಿ ಮಾಡಿ ಕಳಿಸುತ್ತೇವೆ. ಅದರಂತೆ ಪಕ್ಷದ ವರಿಷ್ಟರು, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನಮ್ಮೆಲ್ಲಾ ನಿಷ್ಠಾವಂತ ಮುಖಂಡರು, ಕಾರ್ಯಕರ್ತರಿಗೆ ಟಿಕೆಟ್ ನೀಡಿ, ಸ್ಥಾನಮಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ನಾಗರಾಜ ನಾಯ್ಕ, ಜಿಲ್ಲಾ ವೀಕ್ಷಕ ಟಿ.ತಿಮ್ಮಣ್ಣ, ಎಸ್‌ಸಿ ಘಟಕ ಉಪಾಧ್ಯಕ್ಷ ಜಯಪ್ಪ ಆದಾಪುರ, ಜಿಲ್ಲಾ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ಜಿ.ರಾಕೇಶ, ಪ್ರಧಾನ ಕಾರ್ಯದರ್ಶಿ ರಾಮಯ್ಯ, ಜಗಳೂರು ಬ್ಲಾಕ್ ಅಧ್ಯಕ್ಷ ಮಹೇಶಪ್ಪ, ಮಲೆಬೆನ್ನೂರು ಹನುಮಂತಪ್ಪ, ಹರಿಹರ ಸವಿತಾ ಬಾಯಿ, ಮಾಯಕೊಂಡ ಪರಶುರಾಮ, ಸುಧಾ, ಗೀತಾ, ಜಯಮ್ಮ, ಬಿ.ಆರ್.ಶಿವಮೂರ್ತಿ, ಡಿ.ಸುರೇಶ, ಬಿ.ಎಲ್.ಪರಶುರಾಮ, ನಿಂಗರಾಜ, ಅನಿಲ, ಧೃವ ಇತರರು ಇದ್ದರು.