ಸಾರಾಂಶ
ದೇವರಹಿಪ್ಪರಗಿ: ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಮಲ್ಲಿಕಾರ್ಜುನ ತಳಕೇರಿ ಪುತ್ರ ಅವಿನಾಶ ತಳಕೇರಿ ಏಳು ರಾಜ್ಯಗಳ ಸೌಥ್ ಝೋನ್ 18 ವರ್ಷದೊಳಗಿನ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 50.41ಮೀ. ಚಕ್ರ ಎಸೆತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ದೇವರಹಿಪ್ಪರಗಿ: ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಮಲ್ಲಿಕಾರ್ಜುನ ತಳಕೇರಿ ಪುತ್ರ ಅವಿನಾಶ ತಳಕೇರಿ ಏಳು ರಾಜ್ಯಗಳ ಸೌಥ್ ಝೋನ್ 18 ವರ್ಷದೊಳಗಿನ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 50.41ಮೀ. ಚಕ್ರ ಎಸೆತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.ಆಂಧ್ರ ಪ್ರದೇಶದ ಗುಂಟೂರು ಪಟ್ಟಣದ ನಾಗಾರ್ಜುನ ಕ್ರೀಡಾಂಗಣದಲ್ಲಿ ನಡೆದ ಏಳು ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಿದ್ದು, ಸೌಥ್ ಝೋನ್ 18 ವರ್ಷದೊಳಗಿನವರ ಅಥ್ಲೆಟಿಕ್ಸ್ ಕ್ರೀಡಾಕೂಟದ ಚಕ್ರ ಎಸೆತ ವಿಭಾಗದಲ್ಲಿ ರಾಜ್ಯದ ಪರವಾಗಿ ಭಾಗವಹಿಸಿ 50.41ಮೀ. ದೂರ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಅವಿನಾಶನ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಸಾಧನೆಗೆ ತಂದೆ-ತಾಯಿ, ಶಿಕ್ಷಕರು ಹಾಗೂ ಪಟ್ಟಣದ ಜನರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.