ಸಾರಾಂಶ
ಕಳೆದ ಸೆ.23ರಿಂದ 25ರವರೆಗೆ ಬೆಳಗಾವಿ ಗುಡ್ ಶೆಫರ್ಡ್ ಸೆಂಟ್ರಲ್ ಶಾಲೆಯಲ್ಲಿ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ ಎಚ್.ಎ.ಧುವನ್ ಗೌಡ 300 ಮೀಟರ್ ಟೈಮ್ ಟ್ರಯಲ್ ವಿಭಾಗ ಹಾಗೂ ರೋಡ್ 1 ಲ್ಯಾಪ್ ಸ್ಕೇಟಿಂಗ್ ವಿಭಾಗದ ಎರಡರಲ್ಲೂ ಪ್ರಥಮ ಸ್ಥಾನಗಳಿಸುವ ಮೂಲಕ ಚಿನ್ನದ ಪದಕಗಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಬೆಳಗಾವಿಯ ಗುಡ್ ಶೆಫರ್ಡ್ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ ಸಿಬಿಎಸ್ಇ ದಕ್ಷಿಣ ವಲಯ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಚಿನಕುರಳಿಯ ಎಸ್‌ಟಿಜಿ ಶಿಕ್ಷಣ ಸಂಸ್ಥೆಯ ಎಚ್.ಎ.ಧುವನ್ ಗೌಡ ಎರಡು ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ರಾಷ್ಟ್ರಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾನೆ.ಕಳೆದ ಸೆ.23ರಿಂದ 25ರವರೆಗೆ ಬೆಳಗಾವಿ ಗುಡ್ ಶೆಫರ್ಡ್ ಸೆಂಟ್ರಲ್ ಶಾಲೆಯಲ್ಲಿ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ ಎಚ್.ಎ.ಧುವನ್ ಗೌಡ 300 ಮೀಟರ್ ಟೈಮ್ ಟ್ರಯಲ್ ವಿಭಾಗ ಹಾಗೂ ರೋಡ್ 1 ಲ್ಯಾಪ್ ಸ್ಕೇಟಿಂಗ್ ವಿಭಾಗದ ಎರಡರಲ್ಲೂ ಪ್ರಥಮ ಸ್ಥಾನಗಳಿಸುವ ಮೂಲಕ ಚಿನ್ನದ ಪದಕಗಳಿಸಿದ್ದಾರೆ.
ಚಿನಕುರಳಿ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಎಚ್.ಎ.ಧುವನ್ ಗೌಡ ಮೈಸೂರಿನ ರಾವ್ಸ್ ರೋರಲ್ ಸ್ಕೇಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಎರಡು ವಿಭಾಗದಲ್ಲೂ ಪ್ರಥಮ ಸ್ಥಾನಗಳಿಸಿ ಚಿನ್ನದಪದ ಕಳಿಸಿದ ಎಚ್.ಎ.ಧುವನ್ ಗೌಡ ರಾಷ್ಟ್ರಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾರೆ.ಎಚ್.ಎ.ಧುವನ್ ಗೌಡ ಅವರನ್ನು ಎಸ್‌ಟಿಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸಂಸ್ಥೆ ಸಿಇಒ ಸಿ.ಪಿ.ಶಿವರಾಜು ಪುಟ್ಟರಾಜು, ಪ್ರಾಂಶುಪಾಲೆ ಮಾಚಮ್ಮ, ಆಡಳಿತಾಧಿಕಾರಿ ನಿವೇದಿತ ನಾಗೇಶ್ ಸೇರಿದಂತೆ ಸಿಬ್ಬಂದಿ ವರ್ಗ ಅಭಿನಂಧಿಸಿದ್ದಾರೆ.