ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಗೆ ಅ.23ರಂದು 43 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು ನಡೆದ ಮಸ್ಟರಿಂಗ್ ಕಾರ್ಯದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಪರಿಶೀಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಗೆ ಅ.23ರಂದು 43 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು ನಡೆದ ಮಸ್ಟರಿಂಗ್ ಕಾರ್ಯದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಪರಿಶೀಲಿಸಿದರು.
10 ಪರ್ಯಾಯ ಗುರುತಿನ ಚೀಟಿ:ಮತದಾನದ ದಿನದಂದು ಮತದಾರರು ತಮ್ಮ ಗುರುತಿಗಾಗಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯ ಬದಲಾಗಿ 10 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.
43 ಮತಗಟ್ಟೆಗಳ ವಿವರ:ಹರಿಹರ-6: ಮರಿಯಾ ನಿವಾಸ್ ಹೈಯರ್ ಪ್ರೈಮರಿ ಶಾಲೆ ಕೊಠಡಿ ಸಂಖ್ಯೆ 1 ಮತ್ತು 2 , ಎಸ್.ಜಿ.ಆರ್.ಕೆ.ಎಸ್ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಠಡಿ ಸಂಖ್ಯೆ 1 ಮತ್ತು 2, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಗಾಂಧಿ ಮೈದಾನ ಕೊಠಡಿ ಸಂಖ್ಯೆ 1 ಮತ್ತು 2. ಮಲೆಬೆನ್ನೂರು-4: ಸರ್ಕಾರಿ ಪದವಿ ಪೂರ್ವ ಕಾಲೇಜು ಜಿಗಳಿ ರಸ್ತೆ ಕೊಠಡಿ ಸಂಖ್ಯೆ 1, 2, 3 ಮತ್ತು 4. ದಾವಣಗೆರೆ-33: ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು 1,2,3,4. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಪಿ.ಜೆ ಬಡಾವಣೆ ಕೊಠಡಿ ಸಂಖ್ಯೆ 1,2,3 4, 5. ಅಶೋಕ ರಸ್ತೆ ಮಹಿಳಾ ಸೇವಾ ಸಮಾಜ ಶ್ರೀಮತಿ ಟಿ.ಎಂ.ಚಿನ್ನಮ್ಮ ಮಹೇಶ್ವರಯ್ಯ ಮೆಮೆರಿಯಲ್ ಪದವಿಪೂರ್ವ ಕಾಲೇಜು ಕೊಠಡಿ ಸಂಖ್ಯೆ 1,2,3,4,5,67. ಡಯಟ್ ಕೊಠಡಿ ಸಂಖ್ಯೆ 1, 2, 3. ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು ಕೊಠಡಿ ಸಂಖ್ಯೆ 1,2,3,4. ಆನಗೋಡು-2: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 1, 2. ಅಣಜಿ ಸರ್ಕಾರಿ ಮಾಡೆಲ್ ಹೈಯರ್ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 1. ಮಾಯಕೊಂಡ ಸರ್ಕಾರಿ ಕೆ.ಪಿ.ಎಸ್. ಶಾಲೆ ಕೊಠಡಿ ಸಂಖ್ಯೆ 1. ಲೋಕಿಕೆರೆ ಮಾರುತಿ ಸರ್ಕಾರಿ ಪ್ರೌಢಶಾಲೆ ಕೊಠಡಿ ಸಂಖ್ಯೆ 1, 2. ಜಗಳೂರು ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ 1, 2. 1-ಹೊಸಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು, 1-ಜಗಳೂರು ಬಿಳಿಚೋಡು ಸರ್ಕಾರಿ ಕೆ.ಪಿ.ಎಸ್. ಮತ್ತು ಕಾಲೇಜು ವಿಭಾಗ ಇಲ್ಲಿನ ಮತಗಟ್ಟೆಗಳಲ್ಲಿ ಅ.23ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.
ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸೇರಿದಂತೆ ಪ್ರತಿ ತಂಡದಲ್ಲಿ 4 ಸಿಬ್ಬಂದಿ ಸೇರಿ ಒಟ್ಟು 55 ತಂಡಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಒಟ್ಟು 43 ಮತಗಟ್ಟೆಗಳಲ್ಲಿ ಹರಿಹರ 10, ಜಗಳೂರು 4 ಸೂಕ್ಷ್ಮ ಮತ್ತು 29 ಸಾಮಾನ್ಯ ಮತಗಟ್ಟೆಗಳಿವೆ ಎಂದರು.ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.
- - --22ಕೆಡಿವಿಜಿ39, 40.ಜೆಪಿಜಿ: ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಸ್ಟರಿಂಗ್ ಕಾರ್ಯದ ಸಿದ್ಧತೆಗಳನ್ನು ಪರಿಶೀಲಿಸಿದರು.