ಸಾರಾಂಶ
ಕೃಷಿ ಇಲಾಖೆಯಿಂದ ಕೈಗೊಂಡ ಖಾದ್ಯ ತೈಲ ಎಣ್ಣೆ ಕಾಳು ಬೆಳೆ ಅಭಿಯಾನ ಪ್ರಾತ್ಯಕ್ಷಿಕೆಯಡಿಯಲ್ಲಿ ರೈತರಿಗೆ ಸೋಯಾ ಅವರೆ ಬೆಳೆ ಬಗ್ಗೆ ಪರಿಚಯಿಸಿ ಬಿತ್ತನೆ ಮಾಡಲು ಬೀಜ ವಿತರಿಸಿದ್ದು, ಇದೀಗ ಬೆಳೆ ಉತ್ತಮವಾಗಿ ಬಂದಿದೆ ಎಂದು ಕೃಷಿ ಅಧಿಕಾರಿ ಆತೀಕ್ ವುಲ್ಲಾ ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ದೊಡ್ಡೇರಹಳ್ಳಿ ಗ್ರಾಮದ ರೈತರು ಮುಳ್ಳು ಸಜ್ಜೆ ಕಳೆಗೆ ಬೆಸತ್ತು ಮೆಕ್ಕೆಜೋಳ ಬೆಳೆಯ ಮೇಲೆ ನಿರಾಸಕ್ತಿ ತೋರಿ ಜಮೀನು ಭೀಳು ಬಿಡುವ ಯೋಚನೆಯಲ್ಲಿದ್ದರು. ಆದರೆ ಕೃಷಿ ಇಲಾಖೆಯಿಂದ ಕೈಗೊಂಡ ಖಾದ್ಯ ತೈಲ ಎಣ್ಣೆ ಕಾಳು ಬೆಳೆ ಅಭಿಯಾನ ಪ್ರಾತ್ಯಕ್ಷಿಕೆಯಡಿಯಲ್ಲಿ ರೈತರಿಗೆ ಸೋಯಾ ಅವರೆ ಬೆಳೆ ಬಗ್ಗೆ ಪರಿಚಯಿಸಿ ಬಿತ್ತನೆ ಮಾಡಲು ಬೀಜ ವಿತರಿಸಿದ್ದು, ಇದೀಗ ಬೆಳೆ ಉತ್ತಮವಾಗಿ ಬಂದಿದೆ ಎಂದು ಕೃಷಿ ಅಧಿಕಾರಿ ಆತೀಕ್ ವುಲ್ಲಾ ಹೇಳಿದರು.ಇಲ್ಲಿ ಸೋಯಾ ಅವರೆ ಬೆಳೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಮೀನಿಗೆ ಭೇಟಿ ನೀಡಿ ಮಾತನಾಡಿ, ಈ ಭಾಗದಲ್ಲಿ, ಪ್ರಾರಂಭದಲ್ಲಿ ಕಲ್ಲು ಮಿಶ್ರಿತ ಮಣ್ಣು ಇರುವುದರಿಂದ ರೈತರು ಹಿಂದೇಟು ಹಾಕುತಿದ್ದರು. ಆದರೆ ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ 50 ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಅವರೆ ಬೆಳೆದಿದ್ದು ಎರಡು ತಿಂಗಳ ಬೆಳೆಯಿದ್ದು ಹುಲುಸಾಗಿ ಪೈರು ಬೆಳೆದಿದೆ ರೈತರು ಒಳ್ಳೆಯ ಆದಾಯದ ನಿರೇಕ್ಷೆಯಲ್ಲಿದ್ದಾರೆ ಎಂದರು.
ಮುಳ್ಳು ಸಜ್ಜೆಯ ಸಮಸ್ಯೆಗೆ ಬೆಳೆ ಪರಿವರ್ತನೆ ಮತ್ತು ಬೇಸಿಗೆಯಲ್ಲಿ ಆಳವಾಗಿ ಮಾಗಿ ಉಳುಮೆ ಮಾಡುವುದು ಒಂದೇ ಮಾರ್ಗವಿದ್ದು, ರೈತರು ಸೋಯಾ ಅವರೆ, ಹತ್ತಿ ,ತೊಗರಿ ಮತ್ತು ದ್ವಿದಳ ಧಾನ್ಯಗಳ ಬೆಳೆ ಬೆಳೆಯಬೇಕು ಮತ್ತು ಕಳೆ ನಿರ್ವಹಣೆಗಾಗಿ ನಿರ್ದಿಷ್ಟವಾದ ಕಳೆನಾಶಕಗಳು ಸಹ ಈ ಬೆಳೆಗಳಿಗೆ ದೊರೆಯುತ್ತವೆ ಮತ್ತು ಈ ಬೇಳೆಗಳಿಗೆ ಖರ್ಚು ಕಡಿಮೆ ಆದಾಯ ಹೆಚ್ಚು ಜೊತೆಗೆ ಸರ್ಕಾರ ಸಹ ಖಾದ್ಯ ತೈಲ ಎಣ್ಣೆ ಕಾಳು ಬೆಳೆಗಳಿಗೆ ಹೆಚ್ಚಿನ ಉತ್ತೇಜನ ನೀಡುತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರುದೊಡ್ಡೇರಳ್ಳಿ ರೈತ ಶಂಕ್ರಪ್ಪ ತಮ್ಮ ಅನುಭವನವನ್ನು ಹಂಚಿಕೊಂಡು ಮಾತನಾಡಿ, ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳೆಯನ್ನು ಬೆಳೆದಿದ್ದೆವೆ ಮುಳ್ಳು ಸಜ್ಜೆ ಕಳೆಯಿಂದ ಬೆಸತ್ತು ಜಮೀನುಗಳನ್ನು ಭೀಳು ಬಿಡುವ ಯೋಚನೆಯಲ್ಲಿದ್ವಿ ಆದರೇ ಕೃಷಿ ಇಲಾಖೆಯ ಯೋಜನೆಯಿಂದ ಸೋಯಾ ಅವರೇ ಬೆಳೆ ಬೆಳೆದಿದ್ದು ಬೆಳೆ ಚೆನ್ನಾಗಿದ್ದು ಒಳ್ಳೆ ಆದಾಯದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಗ್ರಾಮದ ಅನೇಕ ರೈತರು, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.