ಸಾರಾಂಶ
ರಾಜ್ ನ್ಯೂಸ್ ವಾಹಿನಿ ಹೆಸರಿನಲ್ಲಿ ಸುಲಿಗೆ ನಡೆಸಿದ ಪ್ರಕರಣದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಪ್ರಮುಖ ಆರೋಪಿ ರಾಜಾನುಂಕುಂಟೆ ವೆಂಕಟೇಶ್‌ನನ್ನು ಜೆ.ಬಿ.ನಗರ ಠಾಣೆ ಪೊಲೀಸರು ಧ್ವನಿ ಪರೀಕ್ಷೆಗೆ ಒಳಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ ನ್ಯೂಸ್ ವಾಹಿನಿ ಹೆಸರಿನಲ್ಲಿ ಸುಲಿಗೆ ನಡೆಸಿದ ಪ್ರಕರಣದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಪ್ರಮುಖ ಆರೋಪಿ ರಾಜಾನುಂಕುಂಟೆ ವೆಂಕಟೇಶ್‌ನನ್ನು ಜೆ.ಬಿ.ನಗರ ಠಾಣೆ ಪೊಲೀಸರು ಧ್ವನಿ ಪರೀಕ್ಷೆಗೆ ಒಳಪಡಿಸಿದ್ದಾರೆ.ಸ್ಪಾ ಮಾಲೀಕರಿಗೆ ಜತೆ ಸುಲಿಗೆ ಗ್ಯಾಂಗ್‌ನ ಪ್ರಮುಖ ಎನ್ನಲಾದ ರಾಜಾನುಂಟೆ ವೆಂಕಟೇಶ್ ನಡೆಸಿದ್ದ ಎನ್ನಲಾದ ಡೀಲ್ ಮಾತುಕತೆ ಆಡಿಯೋಗಳು ಬಹಿರಂಗವಾಗಿತ್ತು. ಈ ಆಡಿಯೋಗಳಲ್ಲಿ ಪುರುಷ ದನಿ ಖಚಿತಪಡಿಸಿಕೊಳ್ಳುವ ಸಂಬಂಧ ವೆಂಕಟೇಶ್‌ನನ್ನು ಪೊಲೀಸರು ಧ್ವನಿ ಪರೀಕ್ಷೆಗೊಳಪಡಿಸಿದ್ದಾರೆ. ಈ ವರದಿ ಸುಲಿಗೆ ಕೃತ್ಯದ ರುಜುವಾತಿಗೆ ಮಹತ್ವದ ವೈಜ್ಞಾನಿಕ ಸಾಕ್ಷ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ‘ಟ್ರೀ ಸ್ಪಾ ಆ್ಯಂಡ್ ಬ್ಯೂಟಿ’ ಪಾರ್ಲರ್‌ನ ವ್ಯವಸ್ಥಾಪಕ ಶಿವಶಂಕರ್ ಅವರಿಗೆ ವೇಶ್ಯಾವಾಟಕೆ ನಡೆದಿದೆ ಎಂದು ರಾಜ್ ನ್ಯೂಸ್ ಹೆಸರಿನಲ್ಲಿ ಬೆದರಿಸಿ ₹15 ಲಕ್ಷ ಸುಲಿಗೆಗೆ ಯತ್ನಿಸಿದ ಪ್ರಕರಣ ಸಂಬಂಧ ಆ ಸುದ್ದಿವಾಹಿನಿಯ ಸಿಇಓ ಎಂದು ಹೇಳಿಕೊಂಡಿದ್ದ ವೆಂಕಟೇಶ್ ಹಾಗೂ ನಿರೂಪಕಿ ದಿವ್ಯಾ ವಸಂತ, ಆಕೆಯ ಸೋದರ ಸಂದೇಶ್ ಹಾಗೂ ಸ್ನೇಹಿತ ಸಚಿನ್ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು.ಏಳು ಎಫ್‌ಐಆರ್:
ಈ ಸುಲಿಗೆ ಗ್ಯಾಂಗ್ ವಿರುದ್ಧ ಇಂದಿರಾನಗರ, ಜೆ.ಬಿ.ನಗರ, ಎಚ್‌ಎಸ್‌ಆರ್ ಲೇಔಟ್ ಹಾಗೂ ಕೋರಮಂಗಲ ಠಾಣೆಗಳಲ್ಲಿ ಪ್ರತ್ಯೇಕವಾಗಿ ಏಳು ಪ್ರಕರಣಗಳು ದಾಖಲಾಗಿವೆ. ಪ್ರತಿ ಕೃತ್ಯದಲ್ಲಿ ವೆಂಕಟೇಶ್ ಪ್ರಮುಖ ಪಾತ್ರವಹಿಸಿದ್ದು, ಕೆಲ ಕೃತ್ಯಗಳಲ್ಲಿ ದಿವ್ಯಾ ವಸಂತ ಹೆಸರು ಪ್ರಸ್ತಾಪವಾಗಿದೆ ಎಂದು ತಿಳಿದು ಬಂದಿದೆ.ಗ್ಯಾಂಗ್‌ನ ಮಹಿಳೆ ಪತ್ತೆ:
ಸ್ಪಾಗೆ ಕೆಲಸದ ನೆಪದಲ್ಲಿ ಸೇರಿ ಬಳಿಕ ಸುಲಿಗೆ ಕೃತ್ಯಕ್ಕೆ ನೆರವಾಗಿದ್ದ ಈಶಾನ್ಯ ಭಾರತೀಯ ಮೂಲದ ಯುವತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ಕೂಡಲೇ ಆಕೆ ತಪ್ಪಿಸಿಕೊಂಡಿದ್ದಳು. ಬಂಧನ ಭೀತಿಗೊಳಗಾದ ಆಕೆ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬೇಲ್ ಸಿಗದೆ ಜೈಲಿನಲ್ಲೇ ದಿವ್ಯಾ
ಈ ಸುಲಿಗೆ ಕೃತ್ಯದಲ್ಲಿ ಬಂಧಿತಳಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಖಾಸಗಿ ಸುದ್ದಿವಾಹಿನಿಯ ನಿರೂಪಕಿ ದಿವ್ಯಾ ವಂಸತಳಿಗೆ ತಿಂಗಳು ಕಳೆದರೂ ಜಾಮೀನು ಸಿಗದೆ ಕತ್ತಲ ಕೋಣೆಯಲ್ಲಿ ಕಾಲ ಕಳೆಯುವಂತಾಗಿದೆ. ಇದೇ ಪ್ರಕರಣದಲ್ಲಿ ಆಕೆಯ ಸ್ನೇಹಿತ ವೆಂಕಟೇಶ್ ಜಾಮೀನು ಸಿಕ್ಕಿದೆ ಎನ್ನಲಾಗಿದೆ.