ಸ್ಪಂದನ ಟ್ರೋಫಿ 2025: ಕ್ಯಾನ್ಸರ್‌ ಚಿಕಿತ್ಸೆ ನೆರವಿಗೆ 10 ಲಕ್ಷ ರು. ಸಂಗ್ರಹ

| Published : Mar 26 2025, 01:31 AM IST

ಸ್ಪಂದನ ಟ್ರೋಫಿ 2025: ಕ್ಯಾನ್ಸರ್‌ ಚಿಕಿತ್ಸೆ ನೆರವಿಗೆ 10 ಲಕ್ಷ ರು. ಸಂಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮಾಹೆ ವತಿಯಿಂದ ಪಂದ್ಯಾವಳಿ ಮೂಲಕ 10 ಲಕ್ಷ ರು.ಗಳನ್ನು ಸಂಗ್ರಹಿಸಿದ್ದು, ಇದನ್ನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಬಳಸಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲದ ಉನ್ನತ ಶಿಕ್ಷಣ ಅಕಾಡೆಮಿಯ (ಮಾಹೆ)ವತಿಯಿಂದ ಇಲ್ಲಿನ ಎಂಐಟಿ ಮೈದಾನದಲ್ಲಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ಭರವಸೆ ಮತ್ತು ಬೆಂಬಲದ ಉದ್ದೇಶದಿಂದ ಸ್ಪಂದನ - ಟ್ರೋಫಿಯ 3ನೇ ಆವೃತ್ತಿ ಟೆನಿಸ್ ಬಾಲ್ ಕ್ರಿಕೆಟ್ ಮತ್ತು ಥ್ರೋ ಬಾಲ್ ಟೂರ್ನಮೆಂಟ್ ನಡೆಯಿತು.

ಈ ಪಂದ್ಯಾವಳಿ ಉದ್ಘಾಟಿಸಿದ ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಅವರು, ಕ್ರೀಡೆಗಳು ಜನರನ್ನು ಒಟ್ಟುಗೂಡಿಸುವ ಮತ್ತು ಭರವಸೆ ಪ್ರೇರೇಪಿಸುವ ಶಕ್ತಿ ಹೊಂದಿವೆ. ಸ್ಪಂದನ ಟ್ರೋಫಿಯು ಕ್ಯಾನ್ಸರ್ ಪೀಡಿತ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುವಲ್ಲಿ ಸಂಸ್ಥೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್, ಮಾಹೆಯ ಮುಖ್ಯ ಕಾರ್ಯಾನಿರ್ವಹಣಾ ಅಧಿಕಾರಿ ಡಾ. ರವಿರಾಜ ಎನ್.ಎಸ್. ಮತ್ತು ಸಲಹೆಗಾರ ಸಿ. ಜಿ. ಮುತ್ತಣ್ಣ ಇದ್ದರು. ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಈ ಪಂದ್ಯಾವಳಿಯು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ಮಾಹೆ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಆಟಗಾರರು, ಅಧ್ಯಾಪಕರು ಮತ್ತು ಹಿರಿಯ ನಿರ್ವಹಣಾ ಸಿಬ್ಬಂದಿ ಭಾಗವಹಿಸಿದ್ದರು.

ಪಂದ್ಯಾವಳಿ ಯಶಸ್ವಿಯಾಗಿ 10 ಲಕ್ಷ ರು.ಗಳನ್ನು ಸಂಗ್ರಹಿಸಿದ್ದು, ಇದನ್ನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಬಳಸಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.