ಸಾರಾಂಶ
ಇಂದು ದೇಶದಲ್ಲಿ ನಡೆಯುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತುವವರೇ ಪತ್ರಕರ್ತರು. ಅವರ ಜೀವನ ಕುರಿತು ಸಾಹಸಮಯ ಸಿನಿಮಾ ನಾವು ಮಾಡುತ್ತಿದ್ದೇವೆ ಎಂದು ಸ್ಪಾರ್ಕ್ ಚಿತ್ರ ನಿರ್ದೆಶಕ ಮಹಾಂತೇಶ ಹಂದ್ರಾಳ ತಿಳಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಇಂದು ದೇಶದಲ್ಲಿ ನಡೆಯುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತುವವರೇ ಪತ್ರಕರ್ತರು. ಅವರ ಜೀವನ ಕುರಿತು ಸಾಹಸಮಯ ಸಿನಿಮಾ ನಾವು ಮಾಡುತ್ತಿದ್ದೇವೆ ಎಂದು ಸ್ಪಾರ್ಕ್ ಚಿತ್ರ ನಿರ್ದೆಶಕ ಮಹಾಂತೇಶ ಹಂದ್ರಾಳ ತಿಳಿಸಿದರು.ನಗರದ ಕಿರಿಯಾಡ ಸಭಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಆಗುವ ಅನೇಕ ಅನಾಹುತ, ದುರಂತಗಳ ಸಂದರ್ಭದಲ್ಲಿ ಜೀವದ ಹಂಗು ತೊರೆದು ಪತ್ರಕರ್ತರು ಕಾರ್ಯ ಮಾಡುತ್ತಾರೆ. ಅವರ ನಿಜಜೀವನ ಕುರಿತು ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಇದಕ್ಕೆ ತಮ್ಮೆಲ್ಲರ ಸಹಕಾರ ಬೇಕು ಎಂದರು.
ನಾನು ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಕಾಲೇಜಿನಲ್ಲಿ ಒದಿದ್ದು, ನಮ್ಮ ಗ್ರಾಮ ಇಳಕಲ್ಲ ಸಮಿಪದಲ್ಲಿದೆ. ನಿಮ್ಮ ಮನೆಯ ಮಗನನ್ನು ಬೆಳೆಸಬೇಕು. ಪ್ರಚಾರದ ಮೂಲಕ ತಾವು ಬೇಳಸ ಬೇಕು ಎಂದು ವಿನಂತಿಸಿದ ಅವರು, ಚಿತ್ರಕ್ಕೆ ಸ್ಪಾರ್ಕಲ್ ಹೆಸರಿಡಲು ಪತ್ರಕರ್ತರು ಹಚ್ಚುವ ಒಂದು ಸ್ಪಾರ್ಕ (ಕಿಡಿ) ಸಮಾಜದ ಬದಲಾವಣೆಗೆ ಕಾರಣವಾಗಲಿದೆ. ಪತ್ರಕರ್ತರ ಒಂದು ಸ್ಪಾರ್ಕ ಇಡಿ ಸಮಾಜವನ್ನು ಬದಲಾಯಿಸುತ್ತದೆ. ಪತ್ರಕರ್ತರು ಅನೇಕ ತೊಂದರೆ ಅನುಭವಿಸುತ್ತಾರೆ ಎಂದು ಉಪೆಂದ್ರರ ಅಣ್ಣನ ಮಗ ನಿರಂಜನ ಹೇಳಿದರು.ಚಿತ್ರದಲ್ಲಿ ನಿರಂಜನ, ರಚಿನಾ, ನವೀನಶಂಕರ ಇತರರು ನಟಿಸಿದ್ದಾರೆ. ಪತ್ರಕರ್ತರ ಪಾತ್ರದಲ್ಲಿ ಉಪೇಂದ್ರರ ಅಣ್ಣನ ಮಗ ನಿರಂಜನ ಅತ್ಯಂತ ಮಾರ್ಮಿಕವಾಗಿ ನಟನೆ ಮಾಡಿದ್ದಾರೆ ಎಂದು ತಿಳಿಸಿದರು.