ಸಾರಾಂಶ
ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಹೆಚ್ಚಾಗಿದ್ದು, ಸರಕಾರ ಮರು ಜಾತಿಗಣತಿ ಮಾಡುವ ವೇಳೆ ವಸ್ತು ನಿಷ್ಠ, ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಜಾತಿಗಣತಿ ನಡೆಸಬೇಕು ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಕ್ಷರಾದ ಶ್ರೀನಂಜಾಧೂತ ಸ್ವಾಮಿಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಹೆಚ್ಚಾಗಿದ್ದು, ಸರಕಾರ ಮರು ಜಾತಿಗಣತಿ ಮಾಡುವ ವೇಳೆ ವಸ್ತು ನಿಷ್ಠ, ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಜಾತಿಗಣತಿ ನಡೆಸಬೇಕು ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಕ್ಷರಾದ ಶ್ರೀನಂಜಾಧೂತ ಸ್ವಾಮಿಜಿ ಹೇಳಿದರು.
ಅವರು ತಾಲೂಕಿನ ಕರೇಜವನಹಳ್ಳಿ ಟೋಲ್ ಗೇಟ್ ಖಾಸಗಿ ಪೆಟ್ರೋಲ್ ಪಂಪ್ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ನಡೆದ ಜಾತಿ ಗಣತಿ ಸಮೀಕ್ಷೆ ವರದಿಯನ್ನು ಸ್ಥಗಿತಗೊಳಿಸಿ ಪುನಃ ಜಾತಿ ಗಣತಿ ನಡೆಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಭಾರಿ ವಸ್ತುನಿಷ್ಟ, ಪಾರದರ್ಶಕ ಮತ್ತು ಪ್ರಾಮಾಣಿಕ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜಾತಿ ಗಣತಿ ನಡೆಸಬೇಕಿದೆ. ಮೀಸಲಾತಿ ಹೊರತುಪಡಿಸಿ ಈ ಸಮಾಜದಲ್ಲಿ ಯಾವ ಸಮುದಾಯಗಳು ಸಹ ಇಲ್ಲಾ ಹಾಗಾಗಿ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮೀಸಲಾತಿ ಅತ್ಯವಶ್ಯಕವಾಗಿ ಬೇಕಿದೆ. ನಾವೆಲ್ಲರೂ ಸಹ ಬಸವಣ್ಣ, ಕುವೆಂಪು ಅವರ ನಾಡಿನಲ್ಲಿ ಹುಟ್ಟಿರುವಂತವರು, ಸಾರ್ವಜನಾಂಗೀಯ ಶಾಂತಿಯ ತೋಟ ಎನ್ನುವ ತತ್ವದಡಿಯಲ್ಲಿ ಇವರುಗಳ ಆದರ್ಶಗಳನ್ನು ನಂಬಿ ಜೀವನ ಸಾಗಿಸುತ್ತಿರುವವರು, ಯಾರಿಗೂ ಸಹ ಅನ್ಯಾಯ, ತಾರತಮ್ಯ ಆಗಬಾರದೆಂಬ ದ್ಯೇಯ ನಮ್ಮೆಲ್ಲರದ್ದು ಎಂದ ಅವರು ಒಕ್ಕಲಿಗ ಸಮುದಾಯದಲ್ಲಿ ೧೧೨ ಉಪಜಾತಿಗಳಿದ್ದು ಜಾತಿ ಗಣತಿಯಲ್ಲಿ ಇವುಗಳನ್ನು ಪರಿಗಣಿಸಿ ಸಾಮಾಜಿಕ ನ್ಯಾಯ ನೀಡಬೇಕು. ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳಿಗೆ ಜಾತಿಗಣತಿ ಅತ್ಯವಶ್ಯಕವಾಗಿ ಬೇಕಿದ್ದು, ಗಣತಿ ಪಾರದರ್ಶಕವಾಗಿ ನಡೆದರೆ ಈ ಎರಡು ಸಮುದಾಯಗಳಿಗೆ ನ್ಯಾಯ ಸಿಗಲಿದೆ ಎಂದರು.ಈ ಸಂದರ್ಭದಲ್ಲಿ ಸಡದರಗಲ್ಲು ಶ್ರೀನಿವಾಸ್, ಮರುಳಪ್ಪನಹಳ್ಳಿ ಬಿ.ಮಂಜುನಾಥ್, ಮುಖಂಡರಾದ ಪಿ.ಎಸ್. ಪಾತಣ್ಣ, ಚಿಕ್ಕತಿಮ್ಮಣ್ಣ, ಡಾ. ಕೃಷ್ಣಪ್ಪ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.