ಸಾರಾಂಶ
ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ:
ಮನೆಯಲ್ಲಿ ಯಾವ ಭಾಷೆಯಾದರೂ ಮಾತನಾಡಿ, ಅದರೆ ಹೊರಗೆ ಕನ್ನಡ ಮಾತನಾಡುವ ಮೂಲಕ ಸ್ವಾಭಿಮಾನದಿಂದ ಬದುಕಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ನಗರದ ಕಸ್ತೂರಿ ಕನ್ನಡ ಸಂಘದ ವಾರ್ಷೀಕೋತ್ಸವ ಮತ್ತು ಡಾ.ಪುನಿತ್‌ರಾಜ್ ಆಭಿಮಾನಿ ಬಳಗ ಸಹಯೋಗದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ರಾಜ್ಯ ಏಕೀಕರಣದ ಸಂದರ್ಭದಲ್ಲಿ ಹಲವು ಮಹಾನ್ ನಾಯಕರು ಹೋರಾಟ ಮಾಡಿ ರಾಜ್ಯಕ್ಕೆ ಕನ್ನಡದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕನ್ನಡ ನಾಡಿನಲ್ಲಿದ್ದರೂ ಕೂಡಾ ಕನ್ನಡವನ್ನು ತಿರಸ್ಕಾರ ಭಾವನೆಯಲ್ಲಿ ಕಾಣುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿ, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ದಾಖಲಿಸಿ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವಂತಾಗಬೇಕು ಎಂದು ಹೇಳಿದರು.ಸಿಎಂ ಸಿದ್ದರಾಮಯ್ಯನವರು ಎಲ್ಲಡೆ ಕನ್ನಡ ದ್ವಜವನ್ನು ಹಾರಿಸುವಂತೆ ಅದೇಶ ಹೊರಡಿಸುವ ಮೂಲಕ ಕನ್ನಡಿಗರಿಗೆ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಸ್ತೂರಿ ಕನ್ನಡ ಸಂಘದ ಮತ್ತು ಗ್ರಾಪಂ ಆಧ್ಯಕ್ಷೆ ಧನಲಕ್ಷ್ಮಿ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಎಂಎಡಿಬಿ ಮತ್ತು ಜಿಲ್ಲಾ ಸಹಕಾರ ಅಧ್ಯಕ್ಷ ಮಂಜುನಾಥಗೌಡ, ಶಿಮುಲ್ ಆಧ್ಯಕ್ಷ ವಿದ್ಯಾಧರ್,ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಜಿಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರುಮೌಳಿ, ಸಹಕಾರ ಬ್ಯಾಂಕ್ ನಿರ್ದೇಶಕ ಪರಮೇಶ, ಬಿಎಸ್ಎನ್‌ಡಿಪಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಲೇಖನನಾಯ್ಕ್, ಯಕ್ಷಿಣಿ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಜಿ.ಎನ್.ಅಚಾರ್ಯ, ಕಸ್ತೂರಿ ಕನ್ನಡ ಸಂಘದ ಗೌರವಾಧ್ಯಕ್ಷ ಉಲ್ಲಾಸ್ ತೆಂಕೋಲ್, ಕನ್ನಡ ಕಸ್ತೂರಿ ಸಂಘದ ಉಪಾಧ್ಯಕ್ಷೆ ಸ್ವಾತಿ, ಸಂತೋಷ, ಶಶಿಸುರೇಶ್, ಗಣಪತಿ ಗವಟೂರು, ಫಾಜಿಲ್ ಹಸನಬ ಇದ್ದರು.
ನಂತರ ಜೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಕು.ದಿಯಾ ಹೆಗಡೆ ಎದೆತುಂಬಿ ಹಾಡುವೆನು ಖ್ಯಾತಿಯ ಸಾನ್ವಿ ಜಿ.ಭಟ್, ಮೆಹಬೂಬ್‍ಸಾಬ್, ನಾಗರಾಜ ತೋಂಬ್ರಿ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.