ಜಗಜ್ಯೋತಿ ಬಸವಣ್ಣನವರ ವಿಚಾರ ಧಾರೆಗಳನ್ನು ಅರಿಯದೇ, ಅಲ್ಪಮತಿಗಳಾಗಿ ಮಹಾಪುರುಷರ ಬಗ್ಗೆ ಹಗುರವಾಗಿ ಬರೆಯುವುದು ಮಾತನಾಡುವುದನ್ನು ಅಪರಾಧವಾಗಿದ್ದು, ಇದನ್ನು ಖಂಡಿಸುವುದು ಮಾತ್ರವಲ್ಲ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ನೀಡುವ ಕೆಲಸವೂ ಆಗಬೇಕಾಗಿದೆ ಎಂದು ಹೈಕೋರ್ಟ್‌ ನ್ಯಾಯವಾದಿ ಸಂದೀಪ ಪಾಟೀಲ ತಿಳಿಸಿದರು.

ಹಾನಗಲ್ಲ:ಜಗಜ್ಯೋತಿ ಬಸವಣ್ಣನವರ ವಿಚಾರ ಧಾರೆಗಳನ್ನು ಅರಿಯದೇ, ಅಲ್ಪಮತಿಗಳಾಗಿ ಮಹಾಪುರುಷರ ಬಗ್ಗೆ ಹಗುರವಾಗಿ ಬರೆಯುವುದು ಮಾತನಾಡುವುದನ್ನು ಅಪರಾಧವಾಗಿದ್ದು, ಇದನ್ನು ಖಂಡಿಸುವುದು ಮಾತ್ರವಲ್ಲ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ನೀಡುವ ಕೆಲಸವೂ ಆಗಬೇಕಾಗಿದೆ ಎಂದು ಹೈಕೋರ್ಟ್‌ ನ್ಯಾಯವಾದಿ ಸಂದೀಪ ಪಾಟೀಲ ತಿಳಿಸಿದರು.

ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದ ಸದಾಶಿವ ಮಂಗಲ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾನಗಲ್ಲ ತಾಲೂಕು ಘಟಕ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಾಭಿಮಾನಿಗಳು ಕರೆದ ಬೃಹತ್ ಪ್ರತಿಭಟನೆಯ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಜಗಜ್ಯೋತಿ ಬಸವೇಶ್ವರರ ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಸಣ್ಣತನದ ಹಿಂದೆ ದುರ್ಬಲ ಮನಸ್ಸುಗಳಿರುತ್ತವೆ. ಮಹಾತ್ಮರನ್ನು ಅರ್ಥೈಸಿಕೊಂಡು ನಡೆಯುವ ಪ್ರಯತ್ನವಾಗಲಿ. ಇಲ್ಲವಾದರೆ ನಮ್ಮ ಪಾಡಿಗೆ ನಾವಿರೋಣ. ಆದರೆ ಮಹಾತ್ಮರನ್ನು ಅವಹೇಳನಕಾರಿಯಾಗಿ ನೋಡುವ ದೃಷ್ಟಿಯೇ ಅಪಾಯಕಾರಿ ಹಾಗೂ ಸಮಾಜ ವಿರೋಧಿ ನಿಲುವು ಆಗಿದೆ ಎಂದರು.

ಮಹಾಸಭಾ ತಾಲೂಕು ಅಧ್ಯಕ್ಷ ಶಿವಕುಮಾರ ದೇಶಮುಖ ಮಾತನಾಡಿ, ರವಿ ಹಂಜಂಗಿ ಎಂಬುವವರು ಬಸವ ಮಂಟಪ ಎಂಬ ಕೃತಿಯಲ್ಲಿ ಜಗಜ್ಯೋತಿ ಬಸವೇಶ್ವೆರರನ್ನು ಅವಹೇಳನಕಾರಿಯಾಗಿ, ಅಗೌರವದಿಂದ ಕಾಣುವಂತಹ ಬರಹವನ್ನು ಪ್ರಚುರಪಡಿಸಿರುವುದು ಖಂಡನೀಯ. ಅದಕ್ಕಾಗಿ ನವೆಂಬರ್ ೩೦ ರಂದು ಬೆಳಗ್ಗೆ ೧೦ ಗಂಟೆಗೆ ಹಾನಗಲ್ಲಿನಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿದ. ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ಬಸವಣ್ಣನವರ ವಿಚಾರಧಾರೆಗಳನ್ನು ಒಪ್ಪಿರುವ, ಅನುಸರಿಸುತ್ತಿರುವವರು ಹಾಗೂ ಬಸವಾಭಿಮಾನಿಗಳು ಈ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಗಣ್ಯರಾದ ಸದಾಗೌಡ್ರು ಪಾಟೀಲ, ಸೋಮಶೇಖರ ಕೋತಂಬರಿ, ಬಿ.ಎಸ್. ಕುಕನಗೌಡ್ರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಬಿ.ಎಸ್. ಅಕ್ಕಿವಳ್ಳಿ, ಸಿದ್ದನಗೌಡ ಪಾಟೀಲ, ಕುಮಾರ ಹತ್ತಿಕಾಳ, ರಮೇಶಗೌಡ ಪಾಟೀಲ, ಕರಬಸಪ್ಪ ಶಿವೂರ, ಶಿವಲಿಂಗಪ್ಪ ತಲ್ಲೂರ, ರವಿ ಪಾಟೀಲ, ಶಿವಯೋಗಯ್ಯ ಅರಳಲೆಮಠ, ಎ.ಎಸ್. ಬಳ್ಳಾರಿ ಮಾತನಾಡಿ ಪ್ರತಿಭಟನೆಯನ್ನು ಯಶಸ್ಸಿಗೊಳಿಸೋಣ ಎಂದರು.