ಕರ್ಣಾಟಕ ಬ್ಯಾಂಕ್ ‘ಕೆಬಿಎಲ್ ಉತ್ಸವ್ 2023-24’ ಚಾಲನೆ
KannadaprabhaNewsNetwork | Published : Oct 20 2023, 01:01 AM IST
ಕರ್ಣಾಟಕ ಬ್ಯಾಂಕ್ ‘ಕೆಬಿಎಲ್ ಉತ್ಸವ್ 2023-24’ ಚಾಲನೆ
ಸಾರಾಂಶ
ಕರ್ಣಾಟಕ ಬ್ಯಾಕ್ಕ್‌ನಿಂದ ಕೆಬಿಎಲ್ಲ್ ಉತ್ಸವ
ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಕರ್ಣಾಟಕ ಬ್ಯಾಂಕ್, ಅ.19ರಿಂದ ಗೃಹ ಸಾಲ, ಕಾರುಸಾಲ, ಕೃಷಿ ಸಾಲ ಮತ್ತು ಚಿನ್ನದ ಸಾಲಗಳಿಗಾಗಿ ‘ಕೆಬಿಎಲ್ ಉತ್ಸವ್- 2023-24’ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಹಬ್ಬದ ಋತುವಿನ ಬೇಡಿಕೆಗಳನ್ನು ಪೂರೈಸಲು ಡಿಸೆಂಬರ್ 31ರ ವರೆಗೆ ಈ ಅಭಿಯಾನ ಜಾರಿಯಲ್ಲಿರಲಿದೆ. ಅಭಿಯಾನಕ್ಕೆ ಚಾಲನೆ ನೀಡಿದ ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್, ಹಬ್ಬದ ಸಮಯದಲ್ಲಿ ಗ್ರಾಹಕರ ಮುಖದಲ್ಲಿ ನಗುವನ್ನು ನೋಡಲು ಈ ವಿಶೇಷ ಅಭಿಯಾನ- ಕೆಬಿಎಲ್ ಉತ್ಸವ್- 2023-24ನ್ನು ಮಾರುಕಟ್ಟೆಗೆ ತರಲು ನಮಗೆ ತುಂಬಾ ಸಂತೋಷವೆನಿಸುತ್ತದೆ. ಈ ಅಭಿಯಾನ ಡಿಜಿಟಲ್ ಅನುಭವದೊಂದಿಗೆ ಹೊಸ ಆಫರ್‌ಗಳು ಮತ್ತು ಪ್ರಯೋಜನಗಳನ್ನು ಒಳಗೊಂಡಿರುತ್ತದೆ ಎಂದಿದ್ದಾರೆ. ನಮ್ಮ ಗ್ರಾಹಕರು ನಮ್ಮ ಮೇಲಿಟ್ಟಿರುವ ಅಪಾರ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ಅವರಿಗೆ ಪ್ರತಿಫಲವನ್ನು ನೀಡುವುದು ನಮ್ಮ ಜವಾಬ್ದಾರಿ ಎಂದು ಪರಿಗಣಿಸಿದ್ದೇವೆ ಎಂದು ಅವರು ತಿಳಿಸಿದರು. ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಲಭ್ಯ: ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್‌ನ ಪ್ರಯೋಜನಗಳನ್ನು ಮತ್ತು ವಿಶೇಷ ಅಭಿಯಾನದ ಕೊಡುಗೆಗಳನ್ನು ಬ್ಯಾಂಕಿನ ಎಲ್ಲ 903 ಶಾಖೆಗಳಲ್ಲೂ ಪಡೆಯಬಹುದು. ಕೆಬಿಎಲ್ ಉತ್ಸವ್ ಅಭಿಯಾನದ ಅಡಿಯಲ್ಲಿ ಬ್ಯಾಂಕ್ ಈ ಹಬ್ಬದ ಋತುವಿನಲ್ಲಿ ಗೃಹ ಸಾಲಗಳು ಮತ್ತು ಕಾರ್ ಲೋನ್‌ಗಳು, ಡಿಜಿಟಲ್ ಲೋನ್ ಅಪ್ಲಿಕೇಶನ್‌ಗಳ ಪ್ರಕ್ರಿಯೆ ಮತ್ತು ತ್ವರಿತ ಸಾಲ ಮಂಜೂರಾತಿಗಳ ಮೇಲೆ ಆಕರ್ಷಕ ಬಡ್ಡಿ ದರಗಳನ್ನು ನೀಡುತ್ತಿದೆ. ಬ್ಯಾಂಕಿನ ಹೊಸ ಡಿಜಿಟಲ್ ಪ್ರಕ್ರಿಯೆಯ ಪರಿಣಾಮವಾಗಿ ಗ್ರಾಹಕರು ಈಗ ಸುಲಭವಾಗಿ ತಡೆರಹಿತ ಡಿಜಿಟಲ್ ಪ್ರಕ್ರಿಯೆ ಮತ್ತು ತಕ್ಷಣದ ತಾತ್ವಿಕ ಅನುಮೋದನೆಗಳನ್ನು ಆನಂದಿಸಬಹುದು. ಗ್ರಾಹಕರಿಗೆ ಸಂತೋಷ ಮತ್ತು ತೃಪ್ತಿಯನ್ನು ಖಾತ್ರಿ ಪಡಿಸುವಂತೆ ಬ್ಯಾಂಕಿನ ಡಿಜಿಟಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಂದರ್ಭ ಮಾತನಾಡಿದ ಕರ್ಣಾಟಕ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ಬ್ಯಾಂಕ್ ತಂತ್ರಜ್ಞಾನದೊಂದಿಗೆ ಪ್ರಗತಿ ಸಾಧಿಸುತ್ತಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಪಾಲುದಾರರೊಂದಿಗೆ ಸಹಯೋಗ ಹೊಂದಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಪ್ರಯೋಜನವನ್ನು ಶೀಘ್ರದಲ್ಲೇ ನಮ್ಮ ಸೇವೆಗಳು ಮತ್ತು ವಿತರಣೆಗಳಲ್ಲಿ ಕಾಣಬಹುದು ಎಂದರು.