ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ 38 ಗ್ರಾಮಗಳಿಗೆ 6.65 ಕೋಟಿ ರು. ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಹಾಗೂ 2.70 ಕೋಟಿ ರು. ಅನುದಾನದಲ್ಲಿ 60 ಗ್ರಾಮಗಳ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇದಕ್ಕೆ ಸೀಮಿತಗೊಳಿಸದೇ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸರ್ಕಾರದ ವಿಶೇಷ ಅನುದಾನ ಬಳಸಿಕೊಳ್ಳುತ್ತಿರುವುದಾಗಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ದೇಶವಳ್ಳಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಮಾರಮ್ಮ ದೇವಸ್ಥಾನ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸಾಮಾನ್ಯ ಬೀದಿಗಳಿಗೆ ಅನುದಾನ ತರುವುದು ಕಷ್ಟಸಾಧ್ಯ. ಆದರೂ ಅಭಿವೃದ್ಧಿಯನ್ನು ಒಂದಕ್ಕೆ ಮಾತ್ರ ಸೀಮಿತಗೊಳಿಸದೇ ಸರ್ಕಾರದಿಂದ ವಿಶೇಷ ಅನುದಾನ ತಂದು ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ತಾಲೂಕಿನ ಕಿರುಗಾವಲು ಗ್ರಾಮದ 38 ಗ್ರಾಮಗಳಿಗೆ 6.65 ಕೋಟಿ ರು. ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಹಾಗೂ 2.70 ಕೋಟಿ ರು. ಅನುದಾನದಲ್ಲಿ 60 ಗ್ರಾಮಗಳ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇದಕ್ಕೆ ಸೀಮಿತಗೊಳಿಸದೇ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಗ್ರಾಮೀಣ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೈಪೊಟಿ ನೀಡುವ ರೀತಿಯಲ್ಲಿ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮಲ್ಪಿಮೀಡಿಯಾಗಳನ್ನು ಸ್ಥಾಪಿಸಿ ರಾಜ್ಯದಲ್ಲಿಯೇ ಮಾದರಿ ಶಾಲೆಗಳನ್ನಾಗಿ ರೂಪಿಸಲಾಗಿದೆ. ಮಕ್ಕಳ ಪೋಷಕರು ಇದರ ಪ್ರಯೋಜನ ಪಡೆಯಬೇಕು ಎಂದರು.

ತಾಲೂಕಿನ ಉಪ್ಪಲಗೇರಿಕೊಪ್ಪಲು, ಹಣಕೊಳ, ಸುಜ್ಜಲೂರು, ಯಮದೂರು, ರಾಗಿಬೊಮ್ಮನಹಳ್ಳಿ, ಹುಚ್ಚನದೊಡ್ಡಿ, ಮೂಗನಕೊಪ್ಪಲು, ಬೋಸೇಗೌಡನದೊಡ್ಡಿ, ವಡ್ಡರಹಳ್ಳಿ, ತಮ್ಮಡಹಳ್ಳಿ, ಗುಳಘಟ್ಟ,ಬುಗತಗಹಳ್ಳಿ, ಗುಳಘಟ್ಟ, ಬಸವನಪುರ, ಮಾಗನೂರು, ಕೋರೇಗಾಲ, ಹುಲ್ಲೇಗಾಲ, ಹಂಚಿಪುರ, ದುಗ್ಗನಹಳ್ಳಿ ಬಂಡೂರು ಹಿಟ್ಟನಹಳ್ಳಿ ಕೊಪ್ಪಲು ರಾಮಂದೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 8.35 ಕೋಟಿರೂ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಶಾಸಕರು ಶಂಕುಸ್ಥಾಪನೆ ನೆರೆವೇರಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕರಾದ ಕೆ.ಜೆ. ದೇವರಾಜು, ದಿಲೀಪ್‌ಕುಮಾರ್, ಮನ್ಮುಲ್‌ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಕೃಷ್ಣೇಗೌಡ, ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಮಾದೇಶ್, ಮುಖಂಡರಾದ ಪುಟ್ಟಸ್ವಾಮಿ, ಕರಿಯಪ್ಪ, ಪಿ.ಕಾಳೇದಾಸೇಗೌಡ, ಶಾಂತರಾಜು, ಬಂಕ್‌ ಮಹದೇವು, ಮಾರ್ಕಾಲು ಮಾಧು, ಸಂತೋಷ್, ಬಂಕ್ ಮಹದೇವು, ಆನಂದ್, ದೀಪು, ಕಿರುಗಾವಲು ಮಹದೇವು, ಶಿವರಾಮು ಪಿಡಿಓ ಖಾನ್ ಅಹಮದ್, ರಾಜು, ವಿದ್ಯಾ, ಮಲ್ಲೇಶ್ ಸೇರಿದಂತೆ ಇತರರು ಇದ್ದರು.