ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

| Published : Mar 15 2025, 01:03 AM IST

ಸಾರಾಂಶ

ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ,ಕನ್ನಡ ವಿಭಾಗ ಮತ್ತು ಸಾಹಿತ್ಯ ಸಂಘಗಳ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ‘ಕನ್ನಡ ಕಾವ್ಯಗಳಲ್ಲಿ ಜೀವನ ಮೌಲ್ಯ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೆರವೇರಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಇಂದಿನ ಮಾರುಕಟ್ಟೆ ಜಗತ್ತು ಮನುಷ್ಯರನ್ನು ಅತೃಪ್ತ ರನ್ನಾಗಿ ಮಾಡುತ್ತಿದೆ. ಸಂಬಂಧಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಇಂತಹ ಆಧುನಿಕ ಜಗತ್ತಿನಲ್ಲಿ ಸಂಬಂಧಗಳನ್ನು ಬೆಸೆಯುವ , ಬದುಕಿಗೆ ಪ್ರೇರಣೆಯನ್ನು ಒದಗಿಸುವ ಅಗಾಧವಾದ ಶಕ್ತಿ ಕನ್ನಡ ಕಾವ್ಯಗಳಿಗಿವೆ ಎಂದು ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಹೇಳಿದ್ದಾರೆ.

ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ,ಕನ್ನಡ ವಿಭಾಗ ಮತ್ತು ಸಾಹಿತ್ಯ ಸಂಘಗಳ ಜಂಟಿ ಆಶ್ರಯದಲ್ಲಿ ಸೋಮವಾರ ‘ಕನ್ನಡ ಕಾವ್ಯಗಳಲ್ಲಿ ಜೀವನ ಮೌಲ್ಯ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಕುವೆಂಪು, ಬೇಂದ್ರೆ, ಸಿದ್ದಲಿಂಗಯ್ಯ, ದಿನಕರ ದೇಸಾಯಿಯವರ ಕಾವ್ಯಗಳು ಸಾರ್ವಕಾಲಿಕ ಮಹತ್ವ ಇರುವ ಕಾವ್ಯಗಳು. ಬಹಿರ್ಮುಖಿಯನ್ನು ಸಂವೇದಿಸಿ ಬರೆದಾಗ ಕಾವ್ಯವಾಗುತ್ತದೆ. ಕವಿತ್ವದ ಶಕ್ತಿ ಎಲ್ಲರಲ್ಲೂ ಇದೆ. ಇದು ಮನುಷ್ಯರನ್ನು ಬದುಕುವುದಕ್ಕೆ ಸದಾ ಪ್ರೇರೇಪಿಸುತ್ತದೆ ಎಂದರು.ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಸಂಚಾಲಕಿ ಸಂಧ್ಯಾ , ಕನ್ನಡ ವಿಭಾಗ ಮುಖ್ಯಸ್ಥ ರೇಣುಕ ಎಚ್.ಜಿ., ಸಾಹಿತ್ಯ ಸಂಘದ ಸಂಚಾಲಕ ವಿನಯ್ ಎಂ.ಎಸ್. ಹಾಜರಿದ್ದರು.

ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಪ್ರಜ್ಞಾ ಕಾರ್ಯಕ್ರಮ ನಿರೂಪಸಿದರು. ಕಾಲೇಜಿನ ಕನ್ನಡ ಉಪನ್ಯಾಸಕಿ ಶಶಿಕಲಾ ಸ್ವಾಗತಿಸಿದರು, ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ರಕ್ಷಾ ವಂದಿಸಿದರು.