ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಜಿಲ್ಲಾಧಿಕಾರಿ ಆದೇಶದ ಮೇರೆಗೆ ಜಿಲ್ಲೆ ವ್ಯಾಪ್ತಿಯಲ್ಲಿ ಮೇ 13 ರಿಂದ 27 ರವರೆಗೆ ಕಂದಾಯ ಇಲಾಖೆಗಳ ಸೇವೆಗಳನ್ನು ಸಾರ್ವಜನಿಕರಿಗೆ ತ್ವರಿತವಾಗಿ ತಲುಪಿಸಲು ಕಂದಾಯ ಸೇವೆಗಳ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ತಿಳಿಸಿದ್ದಾರೆ.ಆಂದೋಲನದ ಅಂಗವಾಗಿ ಪ್ರತಿದಿನ ಗ್ರಾಮ ಆಡಳಿತ ಅಧಿಕಾರಿಗಳು ನಿಗದಿಪಡಿಸಿದ ಗ್ರಾಮಗಳಿಗೆ ಭೇಟಿ ನೀಡಿ ಆಧಾರ್ ಸೀಡಿಂಗ್, ಎನ್‌ಪಿಸಿಐ ಪ್ರೋಟ್ಸ್ ಪರಿಹಾರ ಬಾಕಿ ಪೌತಿ ಖಾತೆ ಅರ್ಜಿ ಸೇರಿದಂತೆ ಇತರ ಸಮಸ್ಯೆಗಳ ಪರಿಹಾರ ಕುರಿತು ಸೇವೆ ನೀಡುವುದಾಗಿ ಅವರು ಮಾಹಿತಿ ನೀಡಿದರು.
ಇಲಾಖೆಯ ಆದೇಶದಂತೆ ಕಸಬಾ ಹೋಬಳಿಯ ಕೆ.ಆರ್. ನಗರ ಪಟ್ಟಣ, ಕಾಳೇನಹಳ್ಳಿ, ಚೌಕಹಳ್ಳಿ, ಮಾರಿಗುಡಿಕೊಪ್ಪಲು, ಹೊಸಕೊಪ್ಪಲು, ಅರಕೆರೆ, ಅರಕರೆ ಕೊಪ್ಪಲು, ಗ್ರಾಮಗಳಿಗೆ ಗ್ರಾಮ ಆಡಳಿತಾಧಿಕಾರಿ ಮಹಮ್ಮದ್ ಅಜರ್ ತಿಪ್ಪೂರು, ಚಾಮಲಾಪುರ, ಕನುಗನಹಳ್ಳಿ. ದೆಗ್ಗನಹಳ್ಳಿ, ಲಾಲನಹಳ್ಳಿ, ಬಸವರಾಜಪುರ, ಕಂಠೇನಹಳ್ಳಿ, ಮೂಡಲಕೊಪ್ಪಲು, ಲಾಳಂದೇವನಹಳ್ಳಿ ಗ್ರಾಮದ ವ್ಯಾಪ್ತಿಗೆ ಎಂ. ನವೀನ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದರು.ಇದರೊಂದಿಗೆ ಗೊರಗುಂಡಿ, ಕಗ್ಗೆರೆ, ಕಾಮೇನಹಳ್ಳಿ, ಕಲ್ಲಹಳ್ಳಿ, ಸೌತನಹಳ್ಳಿ, ಗ್ರಾಮಗಳಿಗೆ ಸಿ.ಆರ್. ರಶ್ಮಿ ಮತ್ತು ನಾರಾಯಣಪುರ, ಸಾತಿಗ್ರಾಮ, ಡೋರನಹಳ್ಳಿ, ಹಂಗರಬಾಯನಹಳ್ಳಿ, ಬಸವಾಪಟ್ಟಣ, ಕುಂಬಾರಕೊಪ್ಪಲು ಗ್ರಾಮಕ್ಕೆ ಜಿ. ಜ್ಯೋತಿ ಪಾಟೀರ್ ಹಾಗೂ ಕ್ರಿಶ್ಚಿಯನ್ ಕೊಪ್ಪಲು, ಹೊಸಹಳ್ಳಿ, ಮಾರ್ಚಹಳ್ಳಿ, ವಡ್ಡರಹಳ್ಳಿ, ಮೂಲೆಪೆಟ್ಲು ಇಲ್ಲಿಗೆ ಎಸ್. ಪ್ರಿಯಾ ಕೆಲಸ ನಿರ್ವಹಿಸುವುದಾಗಿ ಅವರು ಹೇಳಿದ್ದಾರೆ.
ಹೆಬ್ಬಾಳು ಹೋಬಳಿಯ ಚಂದಗಾಲು, ಕಾಟ್ನಾಳು, ಚೀರನಹಳ್ಳಿ, ಕೆಸ್ತೂರು, ಕೆಸ್ತೂರ ಕೊಪ್ಪಲು ಗ್ರಾಮಗಳ ಕಂದಾಯ ಸಂಬಂಧಿತ ಸಮಸ್ಯೆಯನ್ನು ಯಶ್ವಂತ್ ಕುಮಾರ್ ಆಲಿಸಲಿದ್ದು ಅವರೊಂದಿಗೆ ಅದೇ ಹೋಬಳಿಯ ಹೆಬ್ಬಾಳು, ಅರಸಕೊಪ್ಪಲು, ಡಿ.ಕೆ. ಕೊಪ್ಪಲು, ಸಿದ್ದಾಪುರ ಮತ್ತು ಹೊಸಕೊಪ್ಪಲು ಗ್ರಾಮಗಳಿಗೆ ಎಂ. ಆಕಾಶ್ ಅವರನ್ನು ನಿಯೋಜಿಸಲಾಗಿದೆ ಎಂದು ತಹಸೀಲ್ದಾರ್ ಹೇಳಿದರು.ಕೆ.ಎಸ್. ಐಶ್ವರ್ಯ ಅವರನ್ನು ಬ್ಯಾಡರಹಳ್ಳಿ, ಸಿದ್ದನಕೊಪ್ಪಲು, ಅಡಗನಹಳ್ಳಿ, ಚನ್ನಪ್ಪನಕೊಪ್ಪಲು, ಮದುವನಹಳ್ಳಿ, ಬೀರ್ನಹಳ್ಳಿ, ಗ್ರಾಮಗಳಿಗೆ ಹಾಗೂ ಮಾವತ್ತೂರು ಮಾರಗೌಡನಹಳ್ಳಿ, ಮಾದಳ್ಳಿ, ಐಚನಹಳ್ಳಿ, ಗೌಡೇನಹಳ್ಳಿ, ಮಳಲಿ, ಕಂಚುಗಾರಕೊಪ್ಪಲು ಗ್ರಾಮಕ್ಕೆ ಜಿ.ಎಂ. ದೀಪಶ್ರೀ ಮತ್ತು ಹೊಸ ಅಗ್ರಹಾರ, ಸುಗ್ಗನಹಳ್ಳಿ, ಕಾಕನಹಳ್ಳಿ, ಗಂಧನಹಳ್ಳಿ, ಹರಂಬಳ್ಳಿ, ಹರಂಬಳ್ಳಿ ಕೊಪ್ಪಲು, ಮಂಡಿನಹಳ್ಳಿಗೆ ಬಿ.ಕೆ. ನವೀನ್, ಅವರು ಕಂದಾಯ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿಕ್ಕವಡ್ಡರಗುಡಿ, ದೊಡ್ಡ ವಡ್ಡರಗುಡ್ಡಿ, ಬೊಮ್ಮೇನಹಳ್ಳಿ, ಅರ್ಜುನಹಳ್ಳಿ, ಅಡಗೂರು, ಕಲ್ಯಾಣಪುರ, ಮಾರಗೌಡನಹಳ್ಳಿಗೆ ಎಂ. ರಂಜಿತ್, ಹಂಪಾಪುರ, ಸನ್ಯಾಸಿಪುರ, ಮಂಚನಹಳ್ಳಿ ಬಡಕನಕೊಪ್ಪಲು, ಬಾಲೂರು ಗ್ರಾಮಗಳ ಉಸ್ತುವಾರಿಯನ್ನು ಜಿ.ಕೆ. ಶೀಲ ಮತ್ತು ಗಳಿಗೆಕೆರೆ, ದೊಡ್ಡೇಕೊಪ್ಪಲು ಸೇವೆಯನ್ನು ಮಹಮ್ಮದ್ ಅಜರ್ ಅವರಿಗೆ ನಿಯೋಜಿಸಲಾಗಿದೆ ಎಂದು ಸಿ.ಎಸ್. ಪೂರ್ಣಿಮಾ ಹೇಳಿದ್ದು ಈ ಸೇವೆಯನ್ನು ಜನರು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.