11 ಮತ್ತು 12ನೇ ವಾರ್ಡಿನ ಜೆಡಿಎಸ್ ಕಾರ್ಯಕರ್ತರು ಹಾಗೂ ನಾಗರಿಕರು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಪುಟ್ಟರಾಜುರವರಿಗೆ ಉನ್ನತ ಅಧಿಕಾರ ದೊರೆಯಲಿ, ಜತೆಗೆ ಚಾಮುಂಡೇಶ್ವರಿ ದೇವಿ ಆರೋಗ್ಯ, ಆಯಸ್ಸು ನೀಡಲಿ ಎಂದು ಶುಭ ಕೋರಿದರು.
ಪಾಂಡವಪುರ: ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಟೇಲ್ ಕೃಷ್ಣೇಗೌಡರ ನೇತೃತ್ವದಲ್ಲಿ ಪಟ್ಟಣದ ಕೃಷ್ಣನಗರ 3ನೇ ಹಂತದ ಬನ್ನಿಮಂಟಪ ಸರ್ಕಲ್ ನಲ್ಲಿ ಜೆಡಿಎಸ್ ಕಾರ್ಯಕರ್ತರು ಅರಳಿಕಟ್ಟೆ ಬಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ 63ನೇ ಜನ್ಮದಿನದ ಶುಭಾಶಯಗಳನ್ನು ಕೋರಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ಯುವ ಮುಖಂಡ ಪಟೇಲ್ ಕೃಷ್ಣೇಗೌಡ, ಬರಗಾಲ ಹಿನ್ನೆಲೆ ನಮ್ಮ ನಾಯಕರ ಸೂಚನೆ ಮೇರೆಗೆ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಅಧಿಕಾರ ಪ್ರಾಪ್ತಿಯಾಗಿ ಆಯಸ್ಸು, ಆರೋಗ್ಯ ವೃದ್ಧಿಸಲಿ ಎಂದು ಶುಭ ಹಾರೈಸಿದರು.ಪುರಸಭೆ ಮಾಜಿ ಸದಸ್ಯರಾದ ಶಿವಕುಮಾರ್, ಚಂದ್ರು ಮಾತನಾಡಿ, 11 ಮತ್ತು 12ನೇ ವಾರ್ಡಿನ ಜೆಡಿಎಸ್ ಕಾರ್ಯಕರ್ತರು ಹಾಗೂ ನಾಗರಿಕರು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಪುಟ್ಟರಾಜುರವರಿಗೆ ಉನ್ನತ ಅಧಿಕಾರ ದೊರೆಯಲಿ, ಜತೆಗೆ ಚಾಮುಂಡೇಶ್ವರಿ ದೇವಿ ಆರೋಗ್ಯ, ಆಯಸ್ಸು ನೀಡಲಿ ಎಂದು ಶುಭ ಕೋರಿದರು.
ಈ ವೇಳೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಾಗೂ ಸಿಹಿ ವಿತರಣೆ ಮಾಡಲಾಯಿತು. ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಯಜಮಾನ್ ಚಲುವೇಗೌಡ, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಟೇಲ್ ಮಹೇಶ್, ಗುತ್ತಿಗೆದಾರ ದೇಶಹಳ್ಳಿ ಪ್ರಭ, ಅಶೋಕ, ಪುರಸಭೆ ಮಾಜಿ ಸದಸ್ಯರಾದ ಶಿವಕುಮಾರ್, ಚಂದ್ರು, ಜೆಡಿಎಸ್ ಯುವ ಮುಖಂಡರಾದ ಮಹದೇವಸ್ವಾಮಿ, ಹಾರೋಹಳ್ಳಿ ಡೈಮಂಡ್ ರವಿ, ಪವನ್, ರೇವಣ್ಣ, ರಘು, ಮಂಜ, ರಘು ಕಾಟೆ, ಶಾಂತಿನಗರ ಗಿರೀಶ್, ವೆಟ್ರಿಫೈಡ್ ರವಿ, ಕರಿಯ ಸೇರಿದಂತೆ ಇತರರಿದ್ದರು.