ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ ಹವನಗು ನಡೆಯಿತು. ಸಹಸ್ರಹಾರು ಭಕ್ತರು ಪಾಲ್ಗೊಂಡು ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದರು.ಹೆಚ್ಚಿನ ದೇವಾಲಯಗಳಲ್ಲಿ ಬಹೃತ್ ಟಿವಿ ಪರದೆ ಅಳವಡಿಸುವ ಮೂಲಕ ಭಕ್ತರು ಪೂಜೆಯೊಂದಿಗೆ ಅಯೋಧ್ಯೆಯ ನೇರ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವಂತೆ ಮಾಡಿದ್ದು ವಿಶೇಷವಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಸುಂಟಿಕೊಪ್ಪದ ಶ್ರೀ ಕೊದಾಂಡ ರಾಮ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬೆಳಗ್ಗೆ ಗಣಪತಿ ಹೋಮದೊಂದಿಗೆ ಪ್ರಾರಂಭವಾಗಿ ರಾಮತರಾಕ ಹೋಮವನ್ನು ನಡೆಸಲಾಯಿತು. ಪೂಜಾ ಕೈಂಕರ್ಯಗಳನ್ನು ಪ್ರಧಾನ ಆರ್ಚಕ ದರ್ಶನ್ ಭಟ್, ಮನೋಜ್ ಭಟ್, ವೆಂಕಟರಮಣ ಭಟ್ ನೇರವೇರಿಸಿದರು. ಜೊತೆಗೆ ಬಹೃತ್ ಟಿವಿ ಪರದೆಯ ಮೇಲೆ ಅಯೋಧ್ಯೆಯ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ನೇತೃತ್ವವನ್ನು ಪಿ.ಆರ್.ಸುನಿಲ್ ಕುಮಾರ್, ಎಸ್.ಶಾಂತಮ್ ಕಾಮತ್, ಡಿ.ನರಸಿಂಹ, ಎಂ.ಎಸ್.ಸುನಿಲ್, ಧನುಕಾವೇರಪ್ಪ, ಬಿ.ಕೆ.ಮೋಹನ್, ಪ್ರಶಾಂತ್ ಕೋಕಾ, ವಾಸುದೇವ, ನಿಖಿಲ್ ಸೇರಿದಂತೆ ಸ್ವಯಂ ಸೇವಕರು ಅಚ್ಚುಕಟ್ಟಾಗಿ ನೆಡೆಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ವಿಶೇಷ ದಿನಕ್ಕೆ ಸಾಕ್ಷಿಯಾದರು.
ದೇವಾಲಯದ ಸ್ಥಾಪಕರಾದ ದೊಡ್ಡಮನೆ ಆನಂದ್ ಬಸಪ್ಪ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಟ್ರಸ್ಟಿಗಳಾದ ಕೆ.ಪಿ.ಜಗನ್ನಾಥ್, ಎ.ಲೋಕೇಶ್ ಕುಮಾರ್, ಬಿ.ಎಸ್.ಆಶೋಕ್ ಮತ್ತು ಮಂಜುನಾಥ್, ಟ್ರಸ್ಟ್ ಅಧ್ಯಕ್ಷ ಎಸ್.ಬಿ.ಶಂಕರ್ ಉಪಸ್ಥಿತರಿದ್ದರು.ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವೆದಿ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಭಜನೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.ಶ್ರೀ ಬೈತೂರಪ್ಪ ಭಜನಾ ಮಂಡಳಿಯವರು ಬೆಳಗ್ಗೆ ಮತ್ತು ಸಂಜೆ ತಲಾ 3 ಗಂಟೆಗಳ ಕಾಲ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಪೂಣಚ್ಚ ಕಾರ್ಯದರ್ಶಿ ಬಿ.ಸಿ.ದಿನೇಶ್, ಖಜಾಂಜಿ ಡಾ.ಎ.ಬಿ.ತಮ್ಮಯ್ಯ, ಟ್ರಸ್ಟಿಗಳಾದ ಜೆ.ಎಂ.ಹ್ಯಾರಿಕಾರ್ಯಪ್ಪ, ಎ.ಎಂ.ಸನ್ನಿ ಕಾರ್ಯಪ್ಪ, ಕೆ.ಎಸ್.ಮಂಜುನಾಥ್, ಎಂಎಸ್.ಸುರೇಶ್ ಚಂಗಪ್ಪ, ಸಿ.ಎನ್.ದತ್ತ ಸೋಮಣ್ಣ, ಪಾರುಪತ್ಯೆದಾರರಾದ ಎ.ಪಿ.ರಾಜೇಂದ್ರ, ಬೈತೂರಪ್ಪ ಭಜನಾ ಮಂಡಳಿಯ ಪುರುಷೋತ್ತಮ ಬಂಗೇರ, ಪೂವಪ್ಪ, ಅಯ್ಯಪ್ಪ ನಾಯರ್, ನೀತಾ ಹರೀಶ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.7ನೇ ಹೊಸಕೋಟೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಇಲ್ಲಿಗೆ ಸಮೀಪದ ಮಾರುತಿನಗರದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಿತು.
ಕಂಬಿಬಾಣೆಯ ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಗಣಪತಿ ಹೋಮ ಮತ್ತು ರಾಮತಾರಕ ಹೋಮವನ್ನು ದೇವಾಲಯದ ಪ್ರಧಾನ ಆರ್ಚಕ ಪ್ರಭಾಕರ ಕುದ್ದಣ್ಣಾಯ್ಯ ಮತ್ತು ಪ್ರಜಲ್ವ ಕುದ್ದಣ್ಣಾಯ್ಯ ನಡೆಸಿಕೊಟ್ಟರು. ಕಾರ್ಯಕ್ರಮದ ನೇತೃತ್ವವನ್ನು ದೇವಾಲಯ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ ರೈ, ಕಾರ್ಯದರ್ಶಿ ಗಣೇಶ ಬಿ.ಪಿ., ಖಜಾಂಜಿ ಅಜಿತ್ ಕುಮಾರ್ ಸೇರಿದಂತೆ ದೇವಾಲಯದ ಪದಾಧಿಕಾರಿಗಳು, ಸ್ವಯಂ ಸೇವಕರು ನಡೆಸಿಕೊಟ್ಟರು.ಭಕ್ತರು ಮನೆ ಹಾಗೂ ವಾಹನಗಳ ಮೇಲೆ ಶ್ರೀ ರಾಮ ಧ್ವಜವನ್ನು ಅಳವಡಿಸಿದ್ದರು. ಹಾಗೆಯೇ ಬೀದಿಬದಿಗಳನ್ನು ಕಿ.ಮೀ. ದೂರದ ವರೆಗೆ ಕೇಸರಿ ತೋರಣ ಕಟ್ಟಿದ್ದರು. ಹೆದ್ದಾರಿ ಶ್ರೀ ರಾಮದೇವರ ದೊಡ್ಡ ಭಿತ್ತಿ ಪತ್ರಗಳನ್ನು ಅಳವಡಿಸಿದ್ದು, ದೇವಾಲಯಗಳನ್ನು ವಿದ್ಯುತ್ ದೀಪಾಂಲಕಾರಗೊಳಿಸಿ ಕಂಗೊಳಿಸುತ್ತಿದ್ದವು.